For the best experience, open
https://m.samyuktakarnataka.in
on your mobile browser.

ದ್ವೇಷಭಾಷಣ: ಮತಬೋಧಕನ ಸೆರೆ

03:30 AM Feb 06, 2024 IST | Samyukta Karnataka
ದ್ವೇಷಭಾಷಣ  ಮತಬೋಧಕನ ಸೆರೆ

ಮುಂಬೈ: ಗುಜರಾತ್‌ನಲ್ಲಿ ದಾಖಲಾದ ದ್ವೇಷ ಭಾಷಣ ಪ್ರಕರಣದಲ್ಲಿ ಇಸ್ಲಾಮಿಕ್ ಬೋಧಕ ಮೌಲಾನಾ ಮುಫ್ತಿ ಸಲ್ಮಾನ್ ಅಜಾರಿ ಎಂಬವರನ್ನು ಮುಂಬೈ ಪೊಲೀಸರು ಭಾನುವಾರ ಬಂಧಿಸಿದ ನಂತರ ಗುಜರಾತಿಗೆ ಕರೆದೊಯ್ಯಲಾಗಿದೆ. ಗುಜರಾತ್‌ನ ಭಯೋತ್ಪಾದನಾ ನಿಗ್ರಹ ದಳದ ಪೊಲೀಸರು ಸೋಮವಾರ ಆತನನ್ನು ವಶಕ್ಕೆ ಪಡೆದುಕೊಂಡು ಜುನಾಗಢಕ್ಕೆ ಕರೆದೊಯ್ದಿದ್ದಾರೆ.
ಘಾಟ್‌ಕೋಪರ್ ಠಾಣಾ ಪೊಲೀಸರು ಅಜಾರಿಯನ್ನು ಭಾನುವಾರ ಬಂಧಿಸಿರುವ ಸುದ್ದಿ ಹರಡುತ್ತಿದ್ದಂತೆಯೇ ಆತನ ಬಿಡುಗಡೆಗೆ ಒತ್ತಾಯಿಸಿ ಠಾಣೆಯ ಹೊರಗಡೆ ಸಂಜೆಯ ವೇಳೆಗೆ ಅವರ ಅಸಂಖ್ಯ ಬೆಂಬಲಿಗರು ಪ್ರತಿಭಟನೆ ನಡೆಸಿದರು. ಇದರಿಂದ ಠಾಣೆಯ ಸುತ್ತಮುತ್ತಲಪ್ರದೇಶದಲ್ಲಿ ವಾಹನಗಳ ಸಂಚಾರ ದಟ್ಟಣೆ ಉಂಟಾಯಿತು. ಹೀಗಾಗಿ ಪೊಲೀಸರು ಪ್ರತಿಭಟನಾನಿರತರಿಗೆ ತೆರವುಗೊಳ್ಳುವಂತೆ ಪೊಲೀಸರು ಹಲವಾರು ಬಾರಿ ಮನವಿ ಮಾಡಿದರೂ ಜಗ್ಗಲಿಲ್ಲ. ಅಜಾರಿಯನ್ನು ಪೊಲೀಸ್ ವಾಹನದಲ್ಲಿ ಜುನಾಗಢಕ್ಕೆ ಕರೆದೊಯ್ಯುವ ಸಂದರ್ಭದಲ್ಲಿ ಅಡ್ಡಿಪಡಿಸಿದ ಬೆಂಬಲಿಗರ ಮೇಲೆ ಲಾಠಿ ಪ್ರಹಾರ ಮಾಡಲಾಗಿದೆ.
ಯಾವ ಪ್ರಕರಣವಿದು?
ಕಳೆದ ಜನವರಿ ೩೧ರಂದು ಗುಜರಾತಿನ ಜುನಾಗಢದಲ್ಲಿ ಈ ಮುಸ್ಲಿಮ್ ಪಂಡಿತ ಕೋಮು ಪ್ರಚೋದಕ ಭಾಷಣ ಮಾಡಿದ್ದನೆನ್ನಲಾಗಿದೆ. ಆ ಭಾಷಣದ ವಿಡಿಯೋ ಸಾಮಾಜಿಕ ತಾಣದಲ್ಲಿ ವ್ಯಾಪಕ ಪ್ರಚಾರ ಪಡೆಯುತ್ತಿದ್ದಂತೆಯೇ ಅಜಾರಿ ಮತ್ತು ಕಾರ್ಯಕ್ರಮದ ಸಂಘಟಕರಾದ ಯುಸುಫ್ ಮಲೇಕ್ ಹಾಗೂ ಅಜೀಮ್ ಹಬೀಬ್ ವಿರುದ್ಧ ಧರ್ಮಗಳ ಮಧ್ಯೆ ವೈಷಮ್ಯ ಹುಟ್ಟಿಹಾಕಿದ ಹಾಗೂ ಸಾರ್ವಜನಿಕರಲ್ಲಿ ಅಪನಂಬಿಕೆ ಹುಟ್ಟಿಸುವಂತಹ ಹೇಳಿಕೆ ನೀಡಿರುವ ಬಗ್ಗೆ ಪ್ರಕರಣ ದಾಖಲಾಗಿದೆ.