ಧಾಮನೆ ಅರಣ್ಯ ವಲಯದಲ್ಲಿ ಆನೆಗಳ ಕಾಟ: ಅರಣ್ಯಾಧಿಕಾರಿಗಳು ಮೌನ..!!
02:45 PM Nov 17, 2023 IST
|
Samyukta Karnataka
ಬೆಳಗಾವಿ: ಕರ್ನಾಟಕ- ಮಹಾರಾಷ್ಟ್ರ ಗಡಿಯ ಧಾಮನೆ ಅರಣ್ಯ ಉಪವಲಯದಲ್ಲಿ ಆಬೆ ಕಾಟ ಹೆಚ್ಚಿದ್ದು ಗ್ರಾಮಸ್ಥರು ರೋಸಿ ಹೋಗಿದ್ದಾರೆ.
ಬೆಳಗಾವಿ ಅರಣ್ಯ ವಲಯದ ಧಾಮನೆ ಉಪ ವಲಯವು ಸಮೃದ್ಧ ಕಾಡಿನಿಂದ ಆವರಿಸಿದ್ದು ಇಲ್ಲಿ ಕಳೆದ ಒಂದು ವಾರದಿಂದ ಆನೆಗಳ ಹಾವಳಿ ಹೆಚ್ಚಿದೆ. ಕಾಡಾನೆಗಳು ರೈತರ ಕಬ್ಬು, ಕೃಷಿ ಪರಿಕರಗಳು, ಹುಲ್ಲಿನ ಬಣವೆ, ಚಕ್ಕಡಿ ಇತ್ಯಾದಿ ವಸ್ತುಗಳನ್ನು ಹಾಳು ಮಾಡಿದರೂ ಸಹ ಅರಣ್ಉ ಇಲಾಖೆ ಜನಸಾಮಾನ್ಯರ ಆಕ್ರಂದನಕ್ಕೆ ಬೆಲೆ ಕೊಟ್ಟಿಲ್ಲ. ಧಾಮನೆ ಉಪವಲಯದ ಅರಣ್ಯ ಸರ್ವೇ ನಂ.44-45 ಪ್ರದೇಶಗಳಲ್ಲಿ ಕಾಡಾನೆಗಳ ಕಾಟ ಹೆಚ್ಚರುವ ಬಗ್ಗೆ ಗ್ರಾಮಸ್ಥರು ದೂರಿದ್ದಾರೆ. ಬೆಳಗಾವಿ ವಿಭಾಗದ ಅರಣ್ಯ ಅಧಿಕಾರಿಗಳಿಗೆ ಕರೆ ಮಾಡಿದರೂ ಕ್ಯಾರೆ ಎನ್ನುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಬೆಳಗಾವಿ ವಲಯ ಅರಣ್ಯಾಧಿಕಾರಿ ಪುರುಷೋತ್ತಮ ಅರಣ್ಯ ಸಿಬ್ಬಂಧಿಯನ್ನು ತುರ್ತು ನಿಯೋಜಿಸುವುದಾಗಿ ತಿಳಿಸಿದ್ದು, ಅನಾಹುತ ಸಂಭವಿಸುವ ಮುನ್ನ ಅರಣ್ಯ ಇಲಾಖೆ ಸಹಾಯಕ್ಕೆ ಬರಬೇಕಿದೆ
Next Article