ಧಾರವಾಡ ಕೃಷಿ ಮೇಳ: ಅನ್ನದಾತನ ಹಬ್ಬಕ್ಕೆ ಸಜ್ಜಾದ ಕೃಷಿ ವಿವಿ
ಧಾರವಾಡ: ಪ್ರತಿ ವರ್ಷದಂತೆ ಈ ವರ್ಷವೂ ಕೃಷಿ ವಿಶ್ವವಿದ್ಯಾಲಯದ ಕೃಷಿ ಮೇಳವನ್ನು ಇದೇ ತಿಂಗಳು 21 ರಿಂದ 24 ರವರೆಗೆ ಹವಾಮಾನ ವೈಪರೀತ್ಯ ನಿರ್ವಹಣೆಗೆ ಕೃಷಿ ತಾಂತ್ರಿಕತೆಗಳು ವಿಷಯದ ಮೇಲೆ ನಡೆಸಲಾಗುತ್ತಿದೆ ಎಂದು ಕುಲಪತಿ ಪಿ.ಎಲ್. ಪಾಟೀಲ್ ಹೇಳಿದರು.
ಕೃವಿವಿ ಸಭಾಂಗಣದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೃಷಿ ಮೇಳವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಉದ್ಘಾಟಿಸಲಿದ್ದು, ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ, ಸಭಾಪತಿ ಬಸವರಾಜ ಹೊರಟ್ಟಿ, ಕೇಂದ್ರ ಸಚಿವ ಪ್ರಲ್ಹಾದ ಜೋಶಿ, ಮುಖ್ಯ ಸಚೇತಕ ಸಲೀಂ ಅಹ್ಮದ, ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಲಾಡ್ ಘನ ಉಪಸ್ಥಿತಿ ವಹಿಸಲಿದ್ದಾರೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಕೃಷಿ ಪ್ರಕಟಣೆಗಳನ್ನು ಬಿಡುಗಡೆಗೊಳಿಸಲಿದ್ದಾರೆ. ಉಳಿದಂತೆ ಹಲವಾರು ಅತಿಥಿಗಳು ಭಾಹವಹಿಸಲಿದ್ದಾರೆ ಎಂದರು.
ನಾಲ್ಕು ದಿನಗಳ ಕಾಲ ನಡೆಯುವ ಮೇಳದಲ್ಲಿ ಬೀಜಮೇಳ, ಫಲಪುಷ್ಪ ಮೇಳ, ಮತ್ಸ್ಯಮೇಳ, ಜಾನುವಾರು ಮೇಳ, ಕೃಷಿ ತಜ್ಞರೊಂದಿಗೆ ಸಮಾಲೋಚನೆ, ಕೃಷಿಯ ಹೊಸ ಆವಿಷ್ಕಾರಗಳು, ಅಂತರ್ಜಲ ಮರುಪೂರಣ ಸೇರಿದಂತೆ ಹಲವು ಕೃಷಿ ಚಟುಚಟಿಕೆಗಳ ಮಾಹಿತಿಯನ್ನಹು ರೈತರು ಪಡೆದುಕೊಳ್ಳಬಹುದು ಎಂದರು.
ಕೃಷಿ ವಸ್ತು ಪ್ರದರ್ಶದಲ್ಲಿ 150 ಹೈಟೆಕ್ ಮಳಿಗೆ, 214 ಸಾಮಾನ್ಯ ಮಳಿಗೆ, 110 ಯಂತ್ರೋಪಕರಣ ಮಳಿಗೆ, 27 ಟ್ರ್ಯಾಕ್ಟರ್ ಸೇರಿದಂತೆ ಬಾರೀ ಯಂತ್ರೋಪಕರಣಗಳ ಮಳಿಗೆ ಹಾಗೂ 28 ಆಹಾರ ಮಳಿಗೆಗಳು ಬುಕ್ ಆಗಿದೆ ಎಂದು ಮಾಹಿತಿ ನೀಡಿದರು.