ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಕಲಿ ಆಭರಣಗಳ ಅಸಲಿಯತ್ತ ಪತ್ತೆ ಹಚ್ಚಿದ ಪೊಲೀಸ್‌ರು

11:34 AM Aug 01, 2024 IST | Samyukta Karnataka

ಚಿಕ್ಕಮಗಳೂರು: ನಕಲಿ ಆಭರಣಗಳನ್ನು ಅಸಲಿ ಎಂದು ನಂಬಿಸಿ, ವಂಚಿಸಿ ಮೋಸ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಬಂಧಿಸಿರುವ ಪೊಲೀಸರು 6,75 ಲಕ್ಷ ರೂ ಬೆಲೆಯ ಆಭರಣ ಹಾಗೂ ಹಣ ವಶ ಪಡಿಸಿಕೊಂಡಿದ್ದಾರೆ.
ಮಡಬೂರು ಗ್ರಾಮದ ಶರತ್ ರಾಜ್ ಮುತ್ತಿನಕೊಪ್ಪ ವಾಸಿ ಫರಾಜ್ ಚಿನ್ನದ ಲೇಪನ ಇರುವ 68 ಗ್ರಾಂ ತೂಕದ ಚಿನ್ನಾಭರಣಗಳನ್ನು ಮುತ್ತೂಟ್ ಫೈನಾನ್ಸ್‌ನಲ್ಲಿ ಗಿರವಿ ಇಟ್ಟಿದ್ದರು.
ಅದನ್ನು ಬಿಡಿಸಿ ದಾವಣಗೆರೆಯ ಶ್ರೀನಿಧಿ ಗೋಲ್ಡ್ ಕಂಪನಿಗೆ 4,19,000 ರೂ ಗಳಿಗೆ ಮಾರಾಟ ಮಾಡಿದ್ದು, ಗೋಲ್ಡ್ ಕಂಪನಿಯವರು ಚಿನ್ನ ಕರಗಿಸಿ ಗಟ್ಟಿ ಮಾಡಿ ನೋಡಿದಾಗ 21% ಮಾತ್ರ ಚಿನ್ನವಿದ್ದು, ಉಳಿದಿದ್ದು ನಕಲಿ ಚಿನ್ನವೆಂದು ತಿಳಿದು ಬಂದಿದೆ.
ಈ ಆರೋಪಿಗಳೂ ಚಿನ್ನವೆಂದು ನಂಬಿಸಿ ಮೋಸ ಮಾಡಿದ್ದರಿಂದ ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ನ.ರಾ ಪುರ ಠಾಣೆಗೆ ದೂರು ನೀಡಲಾಗಿತ್ತು.
ಆರೋಪಿಗಳಾದ ಮುತ್ತಿನ ಕೊಪ್ಪ ವಾಸಿ ಫರಾಜ್ ಹಾಗೂ ಮಡಬೂರಿನ ಶರತ್ ರಾಜ್ ರನ್ನು ಬಂಧಿಸಿ ವಿಚಾರಣೆ ಮಾಡಿದಾಗ ಹಲವು ಫೈನಾನ್ಸ್ ಹಾಗೂ ಗೋಲ್ಡ್ ಕಂಪನಿಗೆ ವಂಚಿಸಿ ಮೋಸ ಮಾಡಿರುವುದು ಪತ್ತೆಯಾಗಿದೆ.
ಆರೋಪಿ ಶರತ್ ರಾಜ್ ಲ್ಲಿದ್ದ 60,000/- ರೂ ನಗದು ಹಾಗೂ 22.9 ಗ್ರಾಂ ಚಿನ್ನದ ಲೇಪನ ಇರುವ ಬ್ರಾಸ್ ಲೈಟ್ & 26.3 ಗ್ರಾಂ ಚಿನ್ನದ ಲೇಪನ ಇರುವ 1 ಲಕ್ಷ ರೂ ಬೆಲೆಯ ಚೈನ್ ವಶಪಡಿಸಿಕೊಳ್ಳಲಾಗಿದೆ.
ನ.ರಾ ಪುರ ಪಟ್ಟಣದ ವೆಂಕಟೇಶ್ವರ ಜ್ಯೂವೆಲ್ಲರ್ಸ್ ಹಾಗೂ ಪಾನ್ ಬೋಕರ್ಸ್ ನಲ್ಲಿ ಗಿರವಿ ಇಟ್ಟಿದ್ದ 32 ಗ್ರಾಂ ತೂಕದ ಚಿನ್ನದ ಲೇಪನ ಇರುವ 70 ಸಾವಿರ ಬೆಲೆಯ ಚೈನ್ ದೊರಕಿದೆ.
ಚಿಕ್ಕಮಗಳೂರು ನಗರದ ಕೋಶಮಟ್ಟಂ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದ 35 ಗ್ರಾಂ ಚಿನ್ನದ ಲೇಪನ ಇರುವ ಚೈನ್ ಹಾಗೂ 25 ಗ್ರಾಂ ಚಿನ್ನದ ಲೇಪನ ಇರುವ 2,50,000/-ರೂ ಬೆಲೆಯ ಒಂದು ಕಡಗ ವಶಕ್ಕೆ ಪಡೆದಿದ್ದಾರೆ. ಆರೋಪಿಯ ಸ್ನೇಹಿತ ಸುರೇಶ ನ ಹೆಸರಿನಲ್ಲಿ ಮಣಪುರಂ ಫೈನಾನ್ಸ್ ನಲ್ಲಿ ಗಿರವಿ ಇಟ್ಟಿದ್ದ ಚಿನ್ನದ ಲೇಪನ ಇರುವ ಒಟ್ಟು ಅಂದಾಜು ಬೆಲೆ 90,000/- ರೂ ಮೌಲ್ಯದ 34 ಗ್ರಾಂ ಚೈನ್ ಹಾಗೂ 29 ಗ್ರಾಂ ಬ್ರಾಸ್ ಲೈಟ್ ವಶಪಡಿಸಿಕೊಳ್ಳಲಾಗಿದೆ. ನ.ರಾ ಪುರ ಪೊಲೀಸ್ ಠಾಣಾ ಪಿಎಸ್ ಐ ನಿರಂಜನ್ ಗೌಡ ಬಿ.ಎಸ್ ಮತ್ತು ಪಿಎಸ್ ಐ. ಜ್ಯೋತಿ ಎಎಸ್ ಐ ನಟರಾಜ್, ಸಿಬ್ಬಂದಿ ಬಸಂತ್ ಕುಮಾರ್, ಪರಮೇಶ್ ಹಾಗೂ ಶಂಕರ್, ಬಿನು ಪಿ.ಎ, ಯುವರಾಜ್, ಕೌಶಿಕ್, ಗಿರೀಶ್ ಆರೋಪಿಗಳ ಪತ್ತೆ ಕಾರ್ಯ ಕೈಗೊಂಡಿದ್ದರು.

Next Article