For the best experience, open
https://m.samyuktakarnataka.in
on your mobile browser.

ನಕಲಿ ಮಧ್ಯ ತಯಾರಿಕಾ ಘಟಕದ ಮೇಲೆ ಪೊಲೀಸರಿಂದ ದಾಳಿ

07:21 PM Dec 14, 2024 IST | Samyukta Karnataka
ನಕಲಿ ಮಧ್ಯ ತಯಾರಿಕಾ ಘಟಕದ ಮೇಲೆ ಪೊಲೀಸರಿಂದ ದಾಳಿ

ಸಿಂದಗಿ: ಪಟ್ಟಣದ ಕಲಬುರಗಿ ರಾಷ್ಟ್ರೀಯ ಹೆದ್ದಾರಿ ಬಳಿ ನಕಲಿ ಮಧ್ಯ ತಯಾರಿಕಾ ಘಟಕದ ಮೇಲೆ ಶನಿವಾರ ಬೆಳಿಗ್ಗೆ ದಾಳಿ ನಡೆಸಿರುವ ಅಬಕಾರಿ ಪೊಲೀಸರು 6 ಜನರನ್ನು ಬಂಧಿಸಿ ಮಧ್ಯ ಮತ್ತು ಅದಕ್ಕೆ ಬಳಕೆ ಮಾಡುವ ವಸ್ತುಗಳನ್ನು ವಶಪಡಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪಟ್ಟಣದ ಕಲಬುರಗಿ ರಸ್ತೆ ಸಮೀಪದಲ್ಲಿನ ಅಮೋಘಸಿದ್ದ ಬಸಪ್ಪ ಹೂಗಾರ ಎಂಬಾತನ ಜಮೀನಿನ ಶೆಡ್ಡ ಒಂದರಲ್ಲಿ ನಕಲಿ ಮಧ್ಯ ತಯಾರಿಸುತ್ತಿರುವ ಮಾಹಿತಿಯನ್ನು ಖಚಿತ ಕಚಿತಪಡೆಸಿಕೊಂಡು ಅಬಕಾರಿ ಜಿಲ್ಲಾಧಿಕಾರಿ ವೀರಣ್ಣ ಬಾಗೇವಾಡಿ ಮತ್ತು ಅಬಕಾರಿ ವೃತ್ತ ನೀರಿಕ್ಷಕ ಶಿವಾನಂದ ಹೂಗಾರ ಅವರ ತಂಡ ಏಕಾಎಕಿ ದಾಳಿ ನಡೆಸಿದ್ದಾರೆ. ಇಲಾಖೆಯ ಈ ಕಾರ್ಯಕ್ಕೆ ಸಾರ್ವಜನಿಕರು ಶ್ಲಾಘಿಸಿದ್ದಾರೆ.
ದಾಳಿಯ ಸಂದರ್ಭದಲ್ಲಿ ನಕಲಿ ಮಧ್ಯ ತಯಾರಿಕಾ ಘಟಕದಲ್ಲಿ 562 ಲೀಟರ್ ನಕಲಿ ಮಧ್ಯ ಹಾಗೂ 200 ಲೀಟರ್ ಮಧ್ಯಸಾರ ಹಾಗೂ ಎಮ್.ಸಿ ಮ್ಯಾಕಡೋವೇಲ್ಸ್ ಮತ್ತು ಆಯ್.ಬಿ ಕಂಪನಿಗೆ ಸೇರಿದ ಸುಮಾರು 3000 ಕ್ಕೂ ಅಧಿಕ ಬಾಟಲಗಳ 65 ಬಾಕ್ಸಗಳು ನಕಲಿ ಮಧ್ಯ ತಯಾರಿಕೆಗೆ ಬಳಕೆಯಾಗುತ್ತಿದ್ದ ಖಾಲಿ ಬಾಟಲಿಗಳು ಮತ್ತು ನಕಲಿ ಭದ್ರತಾ ಚೀಟಿಗಳು (ಲೇಬಲ್) ನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಸುಮಾರು ರೂ 842000 ಮೌಲ್ಯದ ನಕಲಿ ಮಧ್ಯ ಹೊಂದಿದ್ದು. ಅವರ ತೊಟದಲ್ಲಿಯೆ ನಿತ್ಯ ನಕಲಿ ಮಧ್ಯವನ್ನು ತಯಾರಿಸಿ ಬೇರೆ ಬೇರೆ ಕಡೆ ಇವುಗಳನ್ನು ಮಾರಾಟ ಮಾಡಲು ಸಿದ್ದರಾಗಿದ್ದರು. ಇದರಲ್ಲಿ 5 ಜನ ಆರೋಪಿಗಳು ಹುಬ್ಬಳಿ ಮೂಲದವರು 1 ಆರೋಪಿ ಸಿಂದಗಿಯವನು ಎಂದು ಅಬಕಾರಿ ಪೋಲಿಸ ಮೂಲಗಳು ತಿಳಿಸಿವೆ.
ಕಾಯಾರ್ಚರಣೆಯಲ್ಲಿ ಜಿಲ್ಲೆಯ ಅನೇಕ ಅಬಕಾರಿ ಸಿಬ್ಭಂದಿಗಳು, ಕಂದಾಯ ಇಲಾಖೆಯ ಗ್ರಾಮ ಆಡಳಿತಾಧಿಕಾರಿ ನಿಖಿಲಅಹ್ಮದ ಖಾನಾಪೂರ, ಸಂತೋಷ ವಾಲಿಕಾರ ಸೇರಿದಂತೆ ಅನೇಕರು ಇದ್ದರು.

Tags :