ನಕ್ಸಲರ ಅಟ್ಟಹಾಸ; 8 ಯೋಧರು ಹುತಾತ್ಮ
05:33 PM Jan 06, 2025 IST
|
Samyukta Karnataka
ಛತ್ತೀಸ್‌ಗಢ: ನಕ್ಸಲ್ ದಾಳಿಯಲ್ಲಿ ಭದ್ರತಾ ಪಡೆಯ 8 ಯೋಧರು ಹುತಾತ್ಮರಾಗಿದ್ದಾರೆ.
ಛತ್ತೀಸ್‌ಗಢ ಬಿಜಾಪುರದಲ್ಲಿಂದು ನಡೆದ ಯೋಧರು ಚಲಿಸುತ್ತಿದ್ದ ವಾಹನವನ್ನು ಗುರಿಯಾಗಿಸಿ ನಕ್ಸಲರು ದಾಳಿ ನಡೆಸಿದ್ದು, ವಾಹನದ ಚಾಲಕ ಸೇರಿದಂತೆ ದಾಂತೇವಾಡ ಜಿಲ್ಲಾ ಮೀಸಲು ಪಡೆಯ 8 ಯೋಧರು ಸಾವಿಗೀಡಾಗಿದ್ದಾರೆ. ಘಟನೆಯಲ್ಲಿ ಹಲವು ಯೋಧರು ಗಾಯಗೊಂಡಿರುವುದು ವರದಿಯಾಗಿದೆ. ದಾಂತೇವಾಡ, ನಾರಾಯಣಪುರ ಮತ್ತು ಬಿಜಾಪುರಗಳಲ್ಲಿ ಜಂಟಿ ಕಾರ್ಯಾಚರಣೆ ಪೂರ್ಣಗೊಳಿಸಿ ವಾಪಸಾಗುತ್ತಿದ್ದ ವೇಳೆ ಸ್ಫೋಟಕಗಳನ್ನು ಬಳಸಿ ದಾಳಿ ನಡೆಸಲಾಗಿದೆ ಎಂದು ಬಸ್ತಾರ್ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Next Article