For the best experience, open
https://m.samyuktakarnataka.in
on your mobile browser.

ನಗರಸಭೆ ಉಪಚುನಾವಣೆ: ಕಾಂಗ್ರೆಸ್, ಬಿಜೆಪಿ ತಲಾ ಒಂದು ಜಯ

09:54 AM Nov 26, 2024 IST | Samyukta Karnataka
ನಗರಸಭೆ ಉಪಚುನಾವಣೆ  ಕಾಂಗ್ರೆಸ್  ಬಿಜೆಪಿ ತಲಾ ಒಂದು ಜಯ

ಕೊಪ್ಪಳ: ನಗರಸಭೆಯ ೮ ಮತ್ತು ೧೧ನೇ ವಾರ್ಡಿನ ಉಪಚುನಾವಣೆಯ ಫಲಿತಾಂಶ ಮಂಗಳವಾರ ಹೊರಬಿದ್ದಿದ್ದು, ೮ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಕವಿತಾ ಗಾಳಿ ಮತ್ತು ೧೧ನೇ ವಾರ್ಡಿಗೆ ಕಾಂಗ್ರೆಸ್ ಅಭ್ಯರ್ಥಿ ರಾಜಶೇಖರ ಆಡೂರು ಗೆಲುವು ಸಾಧಿಸಿದ್ದಾರೆ. ಈ ಮೂಲಕ ಎರಡು ವಾರ್ಡುಗಳಲ್ಲಿ ಒಂದು ಕಾಂಗ್ರೆಸ್ ಮತ್ತು ಒಂದು ಬಿಜೆಪಿ ತೆಕ್ಕೆಗೆ ಬಂದಂತಾಗಿದೆ.

೮ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಕವಿತಾ ಬಸವರಾಜ ಗಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ರೇಣುಕಾ ಪೂಜಾರ ಸ್ಪರ್ಧಿಸಿದ್ದರು. ೮ನೇ ವಾರ್ಡಿನಲ್ಲಿ ೧,೪೦೭ ಮತದಾರರಿದ್ದು, ೯೨೮ ಜನರು ಮತದಾನ ಮಾಡಿದ್ದಾರೆ. ಇದರಲ್ಲಿ ಕಾಂಗ್ರೆಸ್ಸಿನ ರೇಣುಕಾ ಪೂಜಾರ ೪೩೬ ಮತ ಪಡೆದಿದ್ದು, ಬಿಜೆಪಿಯ ಕವಿತಾ ಗಾಳಿ ೪೮೬ ಮತ ಬಂದಿವೆ. ೬ ನೋಟಾ ಮತಕ್ಕೆ ಬಿದ್ದಿದ್ದು, ಈ ಮೂಲಕ ಬಿಜೆಪಿಯ ಕವಿತಾ ಗಾಳಿ ೫೦ ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆ.

೧೧ನೇ ವಾರ್ಡಿಗೆ ಬಿಜೆಪಿ ಅಭ್ಯರ್ಥಿ ಚನ್ನಬಸಪ್ಪ ಗಾಳಿ ಮತ್ತು ಕಾಂಗ್ರೆಸ್ ಅಭ್ಯರ್ಥಿ ಆಡೂರು ರಾಜಶೇಖರ ಸ್ಪರ್ಧಿಸಿದ್ದರು. ೧೧ನೇ ವಾರ್ಡಿನಲ್ಲಿ ೧,೦೮೭ ಮತದಾರರಿದ್ದು, ೭೦೭ ಜನರು ಮತದಾನ ಮಾಡಿದ್ದಾರೆ. ಬಿಜೆಪಿಯ ಚನ್ನಬಸಪ್ಪ ಗಾಳಿ ಕೇವಲ ೧೬೫ ಮತ ಪಡೆದಿದ್ದು, ಕಾಂಗ್ರೆಸ್ಸಿನ ರಾಜಶೇಖರ ಆಡೂರು ೫೧೭ ಮತಗಳಿಸಿದ್ದಾರೆ. ೨೫ ಮತಗಳು ನೋಟಾಕ್ಕೆ ಬಿದ್ದಿವೆ‌. ಈ ಮೂಲಕ ೩೫೨ ಮತಗಳ ಅಂತರದಿಂದ ಕಾಂಗ್ರೆಸ್ಸಿನ ರಾಜಶೇಖರ ಆಡೂರು ಗೆಲುವು ಸಾಧಿಸಿದ್ದಾರೆ.