ನನ್ನ ಮೇಲಿನ ಆರೋಪ ತನಿಖೆಯಾಗುವವರೆಗೂ ಸದನಕ್ಕೆ ಕಾಲಿಡಲ್ಲ
ಕಲಬುರಗಿ: ಕಂದಾಯ ಸಚಿವ ಕೃಷ್ಣ ಭೈರೇಗೌಡ ಸದನದಲ್ಲಿ ಉತ್ತರ ಕೊಡುವಾಗ ಕಾಮಗಾರಿಗಳ ಬಗ್ಗೆ ಪ್ರಶ್ನೆ ಕೇಳಿದ್ದೆ, ಆದರೆ ಸಚಿವರು ನನ್ನ ಮೇಲೆ ಆರೋಪಗಳ ರೀತಿಯಲ್ಲಿ ಮಾತನಾಡಿರುವುದು ಬೇಸರ ತಂದಿದೆ ಎಂದು ಆಳಂದ ಶಾಸಕ ಬಿ. ಆರ್. ಪಾಟೀಲ್ ಸ್ಪಷ್ಟಪಡಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪತ್ರ ಬರೆದು ರಾಜೀನಾಮೆ ಸಲ್ಲಿಸುವ ಬಗ್ಗೆ ನಗರದಲ್ಲಿ ಬುಧವಾರ ಶಾಸಕ ಬಿಆರ್ ಪಾಟೀಲ್ ಪ್ರತಿಕ್ರಿಯಿಸಿದ ಅವರು, ನಾನು ಹಣ ಪಡೆದು ಕೆಲಸ ಕೊಟ್ಟಿದಿನಿ ಎನ್ನುವ ರೀತಿಯಲ್ಲಿ ಬಿಂಬಿಸಿದರು. ಈ ಬಗ್ಗೆ ಸ್ಥಳದಲ್ಲೇ ಅವರ ವಿರುದ್ಧ ನಾನು ಪ್ರತಿಭಟನೆ ಮಾಡಿದ್ದೆ, ಯಾರೊಬ್ಬರು ಸಹ ನನ್ನ ಬೆಂಬಲಕ್ಕೆ ಬರಲಿಲ್ಲ ಎಂದು ಅಸಮಾಧಾನ ಹೊರ ಹಾಕಿದರು, ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾಸಕ ಯಶವಂತರಾಯ ಪಾಟೀಲ್ ಮಾತ್ರ ನನ್ನ ಬೆಂಬಲಕ್ಕೆ ನಿಂತರು. ನಮ್ಮ ಜಿಲ್ಲೆಯ ಶಾಸಕರು ಸಹ ನನ್ನ ಬೆಂಬಲಕ್ಕೆ ನಿಲ್ಲದಿರುವುದು ಮತ್ತಷ್ಟು ಬೇಷರ ತಂದಿದೆ ಎಂದ ಅವರು, ಪಂಚರಾಜ್ಯಗಳ ಚುನಾವಣೆ ಹಿನ್ನಲೆಯಲ್ಲಿ ಈ ವಿಷಯ ನಾನು ಪ್ರಸ್ತಾಪಿಸಿರಲಿಲ್ಲ ಎಂದು ಹೇಳಿದರು.
ಸಚಿವ ಕೃಷ್ಣ ಭೈರೇಗೌಡ ಮಾಡಿರುವ ಆರೋಪದ ಬಗ್ಗೆ ಸಮಗ್ರ ತನಿಖೆಯಾಗಬೇಕು. ಅಧಿಕಾರಿಗಳಿಂದ ಮಾಹಿತಿ ಪಡೆದು ಉನ್ನತಮಟ್ಟದ ತನಿಖೆಯಾಗಬೇಕು. ಇನ್ನು ತನಿಖೆ ಮುಗಿಯುವರೆಗೆ ನಾನು ಸದನಕ್ಕೆ ಹೋಗುವುದಿಲ್ಲ ಎಂದು ತಮ್ಮ ನಿಲುವು ಸ್ಪಷ್ಟಪಡಿಸಿದರು.
ಬೆಳಗಾವಿ ಅಧಿವೇಶನದಲ್ಲೂ ನಾನು ಭಾಗಿಯಾಗುವುದಿಲ್ಲ, ನನ್ನ ಸ್ವಾಭಿಮಾನಕ್ಕೆ ಧಕ್ಕೆಯಾಗಿದ್ದರಿಂದಲೇ ಈ ಬಾರಿ ಸಿಎಂಗೆ ಬಹಿರಂಗವಾಗಿ ಪತ್ರ ಬರೆದಿದ್ದೇನೆ. ನಾನು ಇಷ್ಟು ದಿನ ಎಲ್ಲಾ ರೀತಿಯ ಅವಮಾನಗಳನ್ನ ಸಹಿಸಿಕೊಂಡಿದ್ದೇನೆ ಎಂದು ನೋವು ತೋಡಿಕೊಂಡರು. ಇಂದು ಬೆಂಗಳೂರಿನಲ್ಲಿ ಸಿಎಂ ಸಿದ್ದರಾಮಯ್ಯನವರು ಸಂಧಾನ ಸಭೆ ಕರೆದಿದ್ದಾರೆ, ಆ ಸಭೆಯಲ್ಲಿ ನಾನು ಸಹ ಹಾಜರಾಗುತ್ತೇನೆ ಎಂದ ಅವರು, ಇದೀಗ ನಾನು ಮತ್ತು ಪತ್ರ ಬರೆದಿದ್ದೇನೆ. ಒಂದು ವೇಳೆ ತನಿಖೆ ಆಗಿ ಸತ್ಯಾಸತ್ಯೆತ ಗೊತ್ತಾಗದಿದ್ದರೆ ಜನಕ್ಕೆ ಏನು ಗೊತ್ತಾಗುವುದಿಲ್ಲ, ಹೀಗಾಗಿ ನಾನು ಸ್ವಾಭಿನಾನದಿಂದ ಬದುಕಿದವನು, ಇಲ್ಲದಿದ್ದರೆ ನಾನು ಬದುಕಿದ್ದು ಸತ್ತಂತೆ ಎಂದು ತಮ್ಮ ಭಾವನೆಗಳನ್ನು ಹೊರಹಾಕಿದರು.