For the best experience, open
https://m.samyuktakarnataka.in
on your mobile browser.

ಕಾಶೀಂ ಆರ್ಟ ಗ್ಯಾಲರಿ ಸಂಸ್ಥಾಪಕ ಕಾಶೀಂ ಕನಸಾವಿ ಇನ್ನಿಲ್ಲ

08:56 AM May 18, 2024 IST | Samyukta Karnataka
ಕಾಶೀಂ ಆರ್ಟ ಗ್ಯಾಲರಿ ಸಂಸ್ಥಾಪಕ ಕಾಶೀಂ ಕನಸಾವಿ ಇನ್ನಿಲ್ಲ

ಇಳಕಲ್ : ೨೦೧೪ ರಲ್ಲಿ ಮುಖ್ಯ ಮಂತ್ರಿ ಸಿದ್ದರಾಮಯ್ಯರಿಂದ ಕಲಾ ವಿಭಾಗದಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ತಮ್ಮ ೪೦ ನೇಯ ವಯಸ್ಸಿನಲ್ಲಿ ಪಡೆದಿದ್ದ ಕಾಶೀಂ ಆರ್ಟ ಗ್ಯಾಲರಿಯ ಸಂಸ್ಥಾಪಕ ಕಾಶೀಂಸಾಬ ಇಬ್ರಾಹಿಮಸಾಬ ಕನಸಾವಿ ೫೦ ಶುಕ್ರವಾರ ನಿಧನರಾದರು.
ಶುಕ್ರವಾರದಂದು ಖಾಸಗಿ ಬಸ್ ಮೂಲಕ ಬೆಂಗಳೂರಿಗೆ ಹೊರಟಿದ್ದ ಅವರಿಗೆ ಕುಷ್ಟಗಿ ಊರಿನ ಸಮೀಪ ಹೃದಯ ನೋವು ಕಾಣಿಸಿಕೊಂಡ ಕಾರಣ ಅಲ್ಲಿನ ಆಸ್ಪತ್ರೆಗೆ ಕರೆದುಕೊಂಡು ಹೋದರೂ ಕಾಶೀಂ ತೀವ್ರ ಹೃದಯಾಘಾತದಿಂದ ಕೊನೆಯೂಸಿರು ಎಳೆದಿದ್ದಾರೆ.ಮೃತರಿಗೆ ಪತ್ನಿ ಓರ್ವ ಪುತ್ರ ಮತ್ತು ಅಪಾರ ಬಂಧು ಬಳಗ ಇದೆ.
ಕರ್ನಾಟಕ ರಾಜ್ಯ ಲಲಿತಕಲಾ ಅಕಾಡೆಮಿಯ ಸದಸ್ಯರಾಗಿ ಇವರು ೨೦೧೪ ರಲ್ಲಿ ಕಾರ್ಯ ನಿರ್ವಹಿಸಿದ್ದರು.ಸದ್ಯ ಕರಡಿ ಹೈಸ್ಕೂಲ್ ನಲ್ಲಿ ಚಿತ್ರಕಲಾ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದರು.
ಅಪಾರ ಸಾಧನೆ : ತಮ್ಮದೇ ಆದ ವಿಶಿಷ್ಟ ಚಿತ್ರಕಲೆಯಿಂದ ಇವರು ಸಾಕಷ್ಟು ಹೆಸರು ಮಾಡಿದ್ದರು ಇವರು ಚಿತ್ರಿಸಿದ ಚಿತ್ರಗಳನ್ನು ಹೆಚ್ಚಿನ ಹಣ ನೀಡಿ ಕಲಾಪ್ರೇಮಿಗಳು ಖರೀದಿಸುತ್ತಿದ್ದರು .ರಾಜ್ಯದಲ್ಲಿ ಮಾತ್ರವಲ್ಲದೇ ದೇಶದ ಬೇರೆಬೇರೆ ಭಾಗಗಳಲ್ಲಿ ತಮ್ಮ ಕಲಾ ಪ್ರದರ್ಶನ ಮಾಡಿದ್ದರು ಕಲಾವಿದರಿಗೆ ಅನುಕೂಲ ಆಗಲಿ ಎಂಬ ದೃಷ್ಟಿಯಿಂದ ತಮ್ಮ ಮನೆಯಲ್ಲಿಯೇ ಆರ್ಟ ಗ್ಯಾಲರಿ ಮಾಡಿ ಬೇರೆಬೇರೆ ಕಲಾವಿದರ ಚಿತ್ರಕಲಾ ಪ್ರದರ್ಶನಕ್ಕೆ ಸಹಕಾರ ಮಾಡಿ ಕೊಟ್ಟಿದ್ದರು.
ಕಲಾ ಗ್ರಾಮ : ವಿಶ್ವವಿಖ್ಯಾತ ಹಂಪಿಯಲ್ಲಿ ಬೆಂಗಳೂರು ಮಾದರಿಯಲ್ಲಿ ಕಲಾಗ್ರಾಮವನ್ನು ಮೂವರು ಗೆಳೆಯರಾದ ಪ್ರಫುಲ್ ಪಟೇಲ್, ಪೋಚಗುಂಡಿ ಮತ್ತು ಗೋಟೂರ ಇವರ ಜೊತೆಗೆ ಕೂಡಿಕೊಂಡು ಮಾಡಿ ರಾಜ್ಯದ ಕಲಾವಿದರಿಗೆ ಮಾದರಿಯಾಗಿದ್ದರು.
ಸಂತಾಪ : ಕಲಾವಿದ ಕಾಶೀಂ ಕನಸಾವಿ ನಿಧನಕ್ಕೆ ಗುರುಮಹಾಂತಶ್ರೀಗಳು, ಶಾಸಕ ವಿಜಯಾನಂದ ಕಾಶಪ್ಪನವರ ಮಾಜಿ ಶಾಸಕ ದೊಡ್ಡನಗೌಡ ಪಾಟೀಲ ಮತ್ತು ಚಿತ್ರಕಲಾ ಶಿಕ್ಷಕರ ಸಂಘದ ಪದಾಧಿಕಾರಿಗಳು ಶೋಕ ವ್ಯಕ್ತಪಡಿಸಿ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.