ತಮ್ಮವರು ಬರುವ ತನಕ ಬಸ್ ನಿಲ್ಲಿಸದಿದ್ದಕ್ಕೆ ಸಿಟ್ಟು ಬಸ್ ಚಾಲಕ, ನಿವಾರ್ಹಕನ ಮೇಲೆ ಹಲ್ಲೆ
ಬಳ್ಳಾರಿ: ನಮ್ಮವರು ಬರುತ್ತಾರೆ, ಐದು ನಿಮಿಷ ಬಸ್ ನಿಲ್ಲಿಸಿ ಎಂದು ಇಬ್ಬರು ಮಹಿಳಾ ಪ್ರಯಾಣಿಕರು, ಇಲ್ಲ ಹೊರಡಿ ಎಂದು ಉಳಿದ ಪ್ರಯಾಣಿಕರು, ಕಾಯುವುದು ಆಗಲ್ಲ ಎಂದು ಕೆಎಸ್‌ಆರ್‌ಟಿಸಿ ಬಸ್ ಚಾಲಕ, ನಿರ್ವಾಹಕ ಬಸ್ ಓಡಿಸಿಕೊಂಡು ಹೋಗಿದ್ದಕ್ಕೆ ಅವರಿದ್ದಲ್ಲಿಗೆ ಬಂದು ಹಲ್ಲೆಮಾಡುವುದೆ?
ಇಂತಹದ್ದೊಂದು ಪ್ರಸಂಗ ನಡೆದಿರುವುದು ಬಳ್ಳಾರಿಯಲ್ಲಿ. ಬಳ್ಳಾರಿ ಕೆಎಸ್‌ಆರ್‌ಟಿಸಿಯ ಎರಡನೆಯ ಘಟಕದಲ್ಲಿ ಈ ಘಟನೆ ನಿನ್ನೆ ತಡರಾತ್ರಿ ನಡೆದಿದ್ದು, ಈಗ ಬೆಳಕಿಗೆ ಬಂದಿದೆ. ದಾವಣಗೆರೆಯಿಂದ ಬಳ್ಳಾರಿಗೆ ಬಂದ್ ಬಸ್‌ನಲ್ಲಿ ಅದಾಗಲೇ ೧೩೫ ಜನ ಪ್ರಯಾಣಿಕರು ಇದ್ದರು. ಹೀಗಿದ್ದಾಗಲೂ ಅಲ್ಲಿಂದ ಬಸ್ ಏರಿದ ಇಬ್ಬರು ಮಹಿಳೆಯರು ತಮ್ಮವರು ಬರುವ ತನಕ ಕಾಯಿರಿ ಎಂದು ಚಾಲಕ, ನಿರ್ವಾಹಕರ ಮೇಲೆ ಒತ್ತಡ ಹೇರಿದ್ದಾರೆ.
ಕೆಎ ೩೫, ಎಫ್ ೩೫೦ ನಂಬರಿನ ಬಸ್ ಇಬ್ಬರು ಬಸ್ ಮಹಿಳೆಯರಿಗಾ ೫ ನಿಮಿಷದ ಬಳಿಕ ಅವರು ಬರದೆ ಇದ್ದಾಗ ಅಲ್ಲಿಂದ ಹೊರಟಿದೆ. ಬಸ್‌ನಿಲ್ಲದ್ದ ಉಳಿದ ಪ್ರಯಾಣಿಕರು ಚಾಲಕ, ನಿರ್ವಾಹಕರೊಂದಿಗೆ ವಾಗ್ವಾದಕ್ಕೆ ಇಳಿದು, ಬಸ್ ಓಡಿಸಲು ಹೇಳಿದ್ದಾರೆ. ಅನಿವಾರ್ಯವಾಗಿ ಬಸ್ ಚಾಲಕ ಅಲ್ಲಿಂದ ಬಸ್ ಓಡಿಸಿಕೊಂಡು ಬಳ್ಳಾರಿಗೆ ಬಂದಿದ್ದಾನೆ.
ಬಸ್ ಬಿಡುವಾಗ ತಮ್ಮವರಿಗಾಗಿ ಕಾಯಲು ಕೇಳಿಕೊಂಡಿದ್ದ ಮಹಿಳಾ ಪ್ರಯಾಣಿಕರು, ನೀವು ಹೋಗಿ ನಮ್ಮವರು ಬಂದು ನಿಮ್ಮ ವಿಚಾರಿಸಿಕೊಳ್ಳುತ್ತಾರೆ ಎಂದು ಧಮಕಿ ಹಾಕಿದ್ದಾರೆ. ಅಷ್ಟೆ ಅಲ್ಲ ಬಸ್ ಏನು ನಿಮ್ಮಪ್ಪನದಾ? ನೀನು ಹೇಳಿದಂತೆ ಕೇಳಬೇಕು ಎಂದು ಸಹ ಬೆದರಿಸಿದ್ದಾರೆ.
ಕೊನೆಗೆ ಬಸ್ ಬಳ್ಳಾರಿ ಡಿಪೊ ಒಳಗೆ ಹೋಗುತ್ತಲೇ ೩೦ರಿಂದ ೪೦ ಜನರ ಗುಂಪು ಬಸ್ ಡಿಪೋಗೆ ನುಗ್ಗಿ ಚಾಲಕ, ನಿವಾರ್ಹಕನ ಮೇಲೆ ಹಲ್ಲೆಮಾಡಿದ್ದಾರೆ. ಚಾಲಕನ ತಲೆ, ಮುಖ, ಬೆನ್ನಿಗೆ ತೀವ್ರ ಗಾಯಗಳಾಗಿವೆ. ಹಲ್ಲೆಮಾಡಿದವರು ಮಿಂಚೇರಿ ಗ್ರಾಮದವರನ್ನು ಎದುರು ಹಾಕಿಕೊಂಡರೆ ಹೀಗೆ ಆಗುವುದು ಎಂದು ಬೆದರಿಕೆ ಸಹ ಒಡ್ಡಿದ್ದಾರೆ.
ಇದೀಗ ಚಾಲಕ ಪಂಪಣ್ಣ, ನಿವಾರ್ಹಕ ಮಲ್ಲಿಕಾರ್ಜುನ ಬ್ರೂಸ್‌ಪೇಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.