For the best experience, open
https://m.samyuktakarnataka.in
on your mobile browser.

ಬಿ.ವೈ. ರಾಘವೇಂದ್ರ ಭರ್ಜರಿ ಜಯಭೇರಿ

04:59 PM Jun 04, 2024 IST | Samyukta Karnataka
ಬಿ ವೈ  ರಾಘವೇಂದ್ರ ಭರ್ಜರಿ ಜಯಭೇರಿ

ಶಿವಮೊಗ್ಗ : ಶಿವಮೊಗ್ಗ ಲೋಕಸಭಾ ಚುನಾವಣೆ ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಭರ್ಜರಿ ಗೆಲುವು ಸಾಧಿಸಿ ನಾಲ್ಕನೇ ಬಾರಿಗೆ ಸಂಸತ್ ಪ್ರವೇಶ ಮಾಡಲಿದ್ದಾರೆ. ಅವರು ತಮ್ಮ ಸಮೀಪ ಸ್ಪರ್ಧಿ ಕಾಂಗ್ರೆಸ್‌ನ ಗೀತಾ ಶಿವರಾಜ್ ಕುಮಾರ್ ಅವರಿಗಿಂತ ಸುಮಾರು ಎರಡು ಲಕ್ಷಕ್ಕೂ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಪ್ರಾರಂಭಿಕ ಹಂತದಿಂದಲೂ ಕೂಡ ಬಿ.ವೈ. ರಾಘವೇಂದ್ರ ಅವರು ಮುನ್ನಡೆ ಗಳಿಸಿದ್ದರು.

ಅಂಚೆ ಮತಗಳಿಂದಲೂ ಕೂಡ ಲೀಡ್ ಪಡೆದಿದ್ದ ಅವರು ಇವಿಎಂಗಳ ಮತ ಎಣಿಕೆ ಆರಂಭವಾಗುತ್ತಿದ್ದಂತೆಯೆ ಪ್ರತಿ ಸುತ್ತಿನಲ್ಲಿಯೂ ಗೆಲುವಿನ ಅಂತರವನ್ನು ಹೆಚ್ಚಿಸುತ್ತಾ ಹೋದರು.

ಶಿವಮೊಗ್ಗ ಲೋಕಸಭಾ ಕ್ಷೇತ್ರ
ಗೆಲುವು - ಬಿ.ವೈ. ರಾಘವೇಂದ್ರ, ಬಿಜೆಪಿ - ೭೭೮೭೨೧ ಮತಗಳು
ಪ್ರತಿಸ್ಪರ್ಧಿ - ಗೀತಾ ಶಿವರಾಜ್‌ಕುಮಾರ್, ಕಾಂಗ್ರೆಸ್ - ೫೩೫೦೦೬ ಮತಗಳು
ಅಂತರ - ೨೪೩೭೧೫ ಮತಗಳು

ಪಕ್ಷೇತರ ಅಭ್ಯರ್ಥಿ - ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ - ೩೦೦೫೦ ಮತಗಳು

ಒಟ್ಟು ಮತ ಚಲಾವಣೆ - ೧೩,೭೨,೮೯೨ ಮತಗಳು
ನೋಟಾ - ೪,೩೩೨ ಮತಗಳು