ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಮನೋಹರ್ ತಹಸೀಲ್ದಾರ್ ಬಿಜೆಪಿ ಸೇರ್ಪಡೆ

03:12 PM Mar 02, 2024 IST | Samyukta Karnataka

ಬೆಂಗಳೂರು: ಹಿರಿಯ ರಾಜಕಾರಣಿ, ಮಾಜಿ ಸಚಿವರಾದ ಮನೋಹರ್ ತಹಸೀಲ್ದಾರ್ ಅವರು ಬಿಜೆಪಿ ಸೇರ್ಪಡೆಯಿಂದ ಹಾವೇರಿ ಜಿಲ್ಲಾ ಬಿಜೆಪಿಗೆ ದೊಡ್ಡ ಶಕ್ತಿ ಬಂದಿದೆ. ಸಾಮಾಜಿಕವಾಗಿ ಬಿಜೆಪಿಗೆ ಶಕ್ತಿ ಬಂದಂತಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಭಿಪ್ರಾಯ ಪಟ್ಟಿದ್ದಾರೆ.
ಮಾಜಿ ಸಚಿವ ಮನೋಹರ್ ತಹಸೀಲ್ದಾರ್ ಅವರ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮನೋಹರ್ ತಹಸೀಲ್ದಾರ್ ಹಾನಗಲ್ ನಲ್ಲಿ ಸುದೀರ್ಘ ರಾಜಕಾರಣದಲ್ಲಿ ಸಕ್ರೀಯರಾಗಿದ್ದರು. 1986 ರಲ್ಲಿ ಸಿಎಂ ಉದಾಸಿಯವರು ಸ್ವತಂತ್ರ ಅಭ್ಯರ್ಥಿಯಾಗಿ ಆಯ್ಕೆಯಾಗಿ ಬಂದ ಮೇಲೆ ಹಾನಗಲ್ ತಾಲೂಕಿನ ರಾಜಕಾರಣ ಇಬ್ಬರ ನಡುವೆ ನಡೆಯಿತು. ಆದರೆ, ಇಬ್ಬರ ನಡುವೆ ಯಾವತ್ತೂ ವೈರತ್ವ ಇರಲಿಲ್ಲ. ಇಬ್ಬರೂ ಒಬ್ಬರಿಗೊಬ್ಬರು ಗೌರವಿಸುತ್ತಿದ್ದರು ಎಂದರು.
ಆದರೆ, ಇತ್ತೀಚಿನ ರಾಜಕಾರಣ ಕಲುಷಿತಗೊಂಡಿದೆ ಹಾನಗಲ್ ತಾಲೂಕಿನಲ್ಲಿ ದ್ವೇಷದ ರಾಜಕಾರಣ ನಡೆಯುತ್ತಿದೆ. ಹಾನಗಲ್ ನಲ್ಲಿ ಯಾವತ್ತೂ ಪೊಲಿಸ್ ಸ್ಟೇಷನ್ ರಾಜಕಾರಣ ಇರಲಿಲ್ಲ.
ಹಾನಗಲ್ ನಲ್ಲಿ ಕಾಂಗ್ರೆಸ್ ಪಕ್ಷವನ್ಬು ಕಟ್ಡಿದವರು ಮನೋಹರ್ ತಹಸೀಲ್ದಾರ್. ಆದರೆ, ಅಲ್ಲಿ ಅವರ ಪಕ್ಷದ ಕಾರ್ಯಕರ್ತರಿಗೆ ನ್ಯಾಯ ಸಿಗುತ್ತಿಲ್ಲ ಎನ್ನುವ ಕಾರಣಕ್ಕೆ ಬೇಸರಗೊಂಡು, ರಾಜ್ಯದಲ್ಲಿ ಬಡವರ ವಿರೋಧಿ ಪಕ್ಷ ಇರುವುದರಿಂದ, ಪ್ರಧಾನಮಂತ್ರಿ ನರೇಂದ್ರ ಮೋದಿ ಆಡಳಿತ ಮೆಚ್ಚಿ ಬಿಜೆಪಿಗೆ ಬಂದಿದ್ದಾರೆ. ಅವರು ಪಕ್ಷಕ್ಕೆ ಬರುವುದರಿಂದ ಜಿಲ್ಲೆಯ ಬಿಜೆಪಿ ರಾಜಕಾರಣಕ್ಕೆ ದೊಡ್ಡ ಶಕ್ತಿ ಬಂದಂತಾಗಿದೆ. ಅಲ್ಲದೇ ಸಾಮಾಜಿಕವಾಗಿ ನಮಗೆ ದೊಡ್ಡ ಶಕ್ತಿ ಬಂದಿದೆ. ಮಹೋಹರ್ ತಹಸೀಲ್ದಾರ ಅವರು ಪ್ರೀತಿಯ ರಾಜಕಾರಣ ಮಾಡಿದ್ದಾರೆ. ನಮ್ಮ ನಾಯಕರಾದ ಯಡಿಯೂರಪ್ಪ ಅವರು ಮುಕ್ತ ಮನಸಿನಿಂದ ಸ್ವಾಗತಿಸಿದ್ದಾರೆ. ನಾನು ಗೌರವ ಪೂರಕವಾಗಿ ಅವರನ್ನು ಸ್ವಾಗತಿಸಿದ್ದೇವೆ. ಅವರ ಹಿರಿತನಕ್ಕೆ ಪಕ್ಷದಲ್ಲಿ ಎಲ್ಲ ರೀತಿಯ ಗೌರವ ಸಲ್ಲುತ್ತದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಪ್ರತಿಪಕ್ಷದ ನಾಯಕ ಆರ್. ಅಶೋಕ್, ಮನೋಹರ್ ತಹಸೀಲ್ದಾರ್ ಹಾಜರಿದ್ದರು.

Next Article