ಸಂಚಾರ ನಿಯಮ ಉಲ್ಲಂಘನೆ: ನೋಟಿಸ್ ಜೊತೆಗೆ ಕ್ಯೂಆರ್ಕೋಡ್ ಮನೆಗೆ ಬರಲಿದೆ
ಬೆಂಗಳೂರು: ದಂಡದ ನೋಟಿಸ್ ಜೊತೆಗೆ ಕ್ಯೂ ಆರ್ ಕೊಡ್ ಕೂಡ ಮನೆ ಬಾಗಲಿಗೆ ಬರಲಿದೆ ಎಂದು ಬೆಂಗಳೂರು ಸಂಚಾರ ಪೊಲೀಸ್ ತಿಳಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿರುವ ಅವರು ಬೆಂಗಳೂರು ನಗರ ಸಂಚಾರ ವಿಭಾಗದ ಪೊಲೀಸರು ನಿಯಮಗಳನ್ನು ಜಾರಿಗೊಳಿಸುವ ಮುಖಾಂತರ ತಮ್ಮ ಕರ್ತವ್ಯವನ್ನು ಇನ್ನಷ್ಟು ಚುರುಕುಗೊಳಿಸುತ್ತಿದ್ದಾರೆ! 01/03/2024 ರಿಂದ, ಟ್ರಾಫಿಕ್ ನಿಯಮಗಳನ್ನು ಉಲ್ಲಂಘಿಸುವವರಿಗೆ ಕಳುಹಿಸಲಾದ ನೋಟಿಸ್ ನ ಕುರಿತು ವಿವರವಾದ ಮಾಹಿತಿಯನ್ನು ಕ್ಯೂ-ಆರ್ ಒಳಗೊಂಡಿರುತ್ತದೆ. ಜವಾಬ್ದಾರಿಯಿಂದ ವಾಹನವನ್ನು ಚಲಾಯಿಸೋಣ ಎಂದಿದ್ದಾರೆ.
ದಂಡದ ನೋಟಿಸ್ ಜೊತೆಗೆ ಕ್ಯೂ ಆರ್ ಕೊಡ್ ಕೂಡ ಮನೆ ಬಾಗಲಿಗೆ ಬರಲಿದೆ. ಈ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತಿದ್ದಂತೆ ನೀವು ಎಷ್ಟು ಬಾರಿ, ಎಲ್ಲೆಲ್ಲಿ ಸಂಚಾರಿ ನಿಯಮ ಉಲ್ಲಂಘನೆ ಮಾಡಿದ್ದೀರಿ ಎಂಬುವುದು ಗೊತ್ತಾಗಲಿದೆ. ನೀವು ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡುತ್ತಿದ್ದಂತೆ ನಿಯಮ ಉಲ್ಲಂಘನೆಯ ಫೋಟೋ ನಿಮ್ಮ ಮೊಬೈಲ್ನಲ್ಲಿ ಕಾಣಲಿದೆ. ಜೊತೆಗೆ ದಂಡ ಪಾವತಿಯ ಲಿಂಕ್ ಸಹ ನಿಮ್ಮ ಮೊಬೈಲ್ಗೆ ಬರಲಿದೆ. ನಿಯಮ ಉಲ್ಲಂಘನೆಯ ಫೋಟೊ ಕಂಡ ಬಳಿಕವೂ ದೂರು ಇದ್ದಲ್ಲಿ ನೀವು ಸಂಚಾರಿ ಪೊಲೀಸ್ ಇಲಾಖೆಯ ವೆಬ್ಸೈಟ್ಗೆ ಭೇಟಿ ನೀಡಿ, ದೂರು ಸಲ್ಲಿಸಬಹುದು. ದಂಡ ಪಾವತಿಸಲು ಆನ್ಲೈನ್ ಮೂಲಕ ಲಿಂಕ್ ಕಲ್ಪಿಸಲಾಗಿದೆ. ೨೦೨೧ ರ ನಂತರ ಉಲ್ಲಂಘಿಸಿದ ವಿಡಿಯೋ ಅಥವಾ ಫೋಟೊ ಲಭ್ಯವಿರಲಿವೆ.