ನಮ್ಮ ತೆರಿಗೆ, ನಮ್ಮ ಹಣ ಎನ್ನುತ್ತೀರೇಕೆ?
ನವದೆಹಲಿ: ತೆರಿಗೆ ಹಂಚಿಕೆಯಲ್ಲಿ ದಕ್ಷಿಣದ ರಾಜ್ಯಗಳಿಗೆ ಕೇಂದ್ರ ತಾರತಮ್ಯ ಎಸಗುತ್ತಿದೆಯೆಂಬ ಕರ್ನಾಟಕ ಸರ್ಕಾರದ ಆರೋಪಕ್ಕೆ ಪ್ರಧಾನಿ ನರೇಂದ್ರ ಮೋದಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ರಾಷ್ಟçಪತಿ ಭಾಷಣಕ್ಕೆ ವಂದನೆ ಸೂಚಿಸುವ ನಿರ್ಣಯದ ಮೇಲೆ ರಾಜ್ಯಸಭೆಯಲ್ಲಿ ಬುಧವಾರ ಉತ್ತರ ನೀಡಿದ ಪ್ರಧಾನಿ, ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳ ಧೋರಣೆಯನ್ನು ಕಟುವಾಗಿ ತರಾಟೆಗೆ ತೆಗೆದುಕೊಂಡರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಜಂತರ್‌ಮಂತರ್‌ನಲ್ಲಿ ನಡೆಸಿದ ಧರಣಿಯನ್ನು ಪ್ರಸ್ತಾಪಿಸಿದ ಅವರು, ಕೇಂದ್ರದ ಅನುದಾನ ಹಂಚಿಕೆ ವಿಷಯದಲ್ಲಿ ರಾಜ್ಯಗಳ ವಿಭಜಕ ರಾಜಕೀಯ ಅಪಾಯಕಾರಿ ಎಂದು ಎಚ್ಚರಿಕೆ ಕೊಟ್ಟರು.
ಮಾತುಮಾತಿಗೆ ನಮ್ಮ ತೆರಿಗೆ , ನಮ್ಮ ಹಣ ಎನ್ನುತ್ತೀರಿ…ಯಾವ ಭಾಷೆ ಅದು ಎಂದ ಮೋದಿ, ಕೊರೊನಾ ವೇಳೆ ಕೇಂದ್ರ-ರಾಜ್ಯ ಸರ್ಕಾರಗಳು ಒಗ್ಗೂಡಿ ಕೆಲಸ ಮಾಡಿದವು. ಬೆಂಗಳೂರು, ಚೆನ್ನೆöÊ, ತೆಲಂಗಾಣ, ಪುರಿ ಹೀಗೆ ಎಲ್ಲ ಪ್ರಾಂತ್ಯಗಳು ನಮ್ಮ ದೇಶಕ್ಕೇ ಸೇರಿವೆ. ರಾಜ್ಯಗಳ ವಿಷಯದಲ್ಲಿ ಕೇಂದ್ರ ತಾರತಮ್ಯ ಧೋರಣೆ ಅನುಸರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದರು.
ಕಾಂಗ್ರೆಸ್‌ನಿಂದ ವಿಭಜಕ ನೀತಿ: ಕಾಂಗ್ರೆಸ್ ಪಕ್ಷದ ವಿರುದ್ಧ ಚಾಟಿ ಬೀಸಿದ ಪ್ರಧಾನಿ, ಅಧಿಕಾರದ ಲಾಲಸೆಯಿಂದ ಪ್ರಜಾಪ್ರಭುತ್ವವನ್ನು ಆ ಪಕ್ಷ ಕತ್ತುಹಿಸುಕಿ. ಚುನಾಯಿತ ಸರ್ಕಾರಗಳನ್ನು ರಾತ್ರೋರಾತ್ರಿ ವಜಾಮಾಡಿದ ಕಾಂಗ್ರೆಸ್, ದೇಶದ ಮೇಲೆ ತುರ್ತು ಪರಿಸ್ಥಿತಿ ಹೇರಿ ಪತ್ರಿಕೆಗಳ ಮೇಲೆ ದಾಳಿ ನಡೆಸಿ ಬೀಗಮುದ್ರೆ ಹಾಕಲು ಯತ್ನಿಸಿದೆ. ದಕ್ಷಿಣ-ಉತ್ತರ ಎಂಬ ದೇಶವನ್ನು ಇಬ್ಭಾಗಗೊಳಿಸುವ ಮಾತನ್ನಾಡುತ್ತಿದೆ ಎಂದು ಸಂಸದ ಡಿ.ಕೆ ಸುರೇಶ್ ಹೇಳಿಕೆಯನ್ನು ಪರೋಕ್ಷವಾಗಿ ತರಾಟೆಗೆ ತೆಗೆದುಕೊಂಡರು.
ದೇಶದ ಸಮಗ್ರತೆ, ಏಕತೆ ವಿಷಯದಲ್ಲಿ ಕಾಂಗ್ರೆಸ್ ಧೋರಣೆ ವ್ಯತಿರಿಕ್ತವಾಗಿತ್ತು. ಶತ್ರುಗಳಿಗೆ ಭೂಮಿ ಬಿಟ್ಟುಕೊಟ್ಟರು. ಬ್ರಿಟಿಷರ ಇಷ್ಟು ದಿನವೂ ಹಳೆಯ ಕಾನೂನುಗಳನ್ನು ಮುಂದುವರಿಸಿದ್ದರು. ಕೊನೆಗೆ ಎನ್‌ಡಿಎ ಸರ್ಕಾರ ಅವೆಲ್ಲ ವನ್ನೂ ಕಿತ್ತೊಗೆಯಬೇಕಾಯಿತು.