ನರೇಂದ್ರ ಮೋದಿ ಆಸ್ತಿ ೩.೦೨ ಕೋಟಿ ರೂ.
ವಾರಾಣಸಿ: ಪ್ರಧಾನಿ ನರೇಂದ್ರ ಮೋದಿ ಅವರು ವಾರಾಣಸಿ ಲೋಕಸಭಾ ಕ್ಷೇತ್ರದಿಂದ ಸತತ ಮೂರನೇ ಬಾರಿಗೆ ನಾಮಪತ್ರ ಸಲ್ಲಿಸಿದ್ದು, ತಮ್ಮ ಒಟ್ಟು ಆಸ್ತಿ ೩.೦೨ ಕೋಟಿ ರೂಪಾಯಿ ಎಂದು ಅವರು ಸಲ್ಲಿಸಿರುವ ಪ್ರಮಾಣಪತ್ರದಲ್ಲಿ ಹೇಳಿಕೊಂಡಿದ್ದಾರೆ. ಪ್ರಧಾನಿ ಬಳಿ ಸುಮಾರು ೫೩,೦೦೦ ರೂಪಾಯಿ ನಗದು ಇದೆ. ಅವರ ಆದಾಯವು ೨೦೧೮-೧೯ ರ ಆರ್ಥಿಕ ವರ್ಷದಲ್ಲಿ ೧೧ ಲಕ್ಷದಿಂದ ೨೦೨೨-೨೩ರಲ್ಲಿ ೨೩.೫ ಲಕ್ಷ ರೂಪಾಯಿಗಳಿಗೆ ದ್ವಿಗುಣಗೊಂಡಿದೆ.
ಅವರ ೨.೮೫ ಕೋಟಿ ರೂಪಾಯಿಗಳ ಹೆಚ್ಚಿನ ಚರ ಆಸ್ತಿಯನ್ನು ಎಸ್‌ಬಿಐ ಬ್ಯಾಂಕ್‌ನಲ್ಲಿ ಸ್ಥಿರ ಠೇವಣಿ ರೂಪದಲ್ಲಿ ಠೇವಣಿ ಮಾಡಲಾಗಿದೆ. ೨೦೧೯ರಲ್ಲಿ ಅವರು ಸಲ್ಲಿಸಿದ್ದ ಅಫಿಡವಿಟ್‌ಗೆ ಹೋಲಿಸಿದಲ್ಲಿ ಈ ಬಾರಿ ಅವರ ಆಸ್ತಿ ಹೆಚ್ಚಾಗಿದೆ.
೨೦೧೪ರಲ್ಲಿ ೧.೬೬ ಕೋಟಿ ರೂಪಾಯಿ ಮತ್ತು ೨೦೧೯ ರ ಲೋಕಸಭೆ ಚುನಾವಣೆಯಲ್ಲಿ ೨.೫೧ ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಪ್ರಧಾನಿ ಮೋದಿ ಘೋಷಿಸಿದ್ದರು. ಸರ್ಕಾರದ ಸಂಬಳ ಮತ್ತು ಉಳಿತಾಯದ ಮೇಲಿನ ಬಡ್ಡಿಯೇ ತಮ್ಮ ಆದಾಯದ ಮೂಲ ಎಂದು ಪ್ರಧಾನಿ ಮೋದಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ. ತನಗೆ ಮನೆಯೂ ಇಲ್ಲ, ಕಾರು ಕೂಡ ಇಲ್ಲ ಎಂದು ಹೇಳಿದರು. ಆದರೆ, ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ಮೋದಿಯವರ ಚರ ಆಸ್ತಿ ಹೆಚ್ಚಾಗಿದೆ. ಅಲ್ಲದೆ, ಅವರ ವಿರುದ್ಧ ಯಾವುದೇ ಪ್ರಕರಣ ಇಲ್ಲ.