ನಾನು ಯಾರಿಂದಲೋ ದೇಶಭಕ್ತಿ ಬಗ್ಗೆ ಕಲಿಯಬೇಕಿಲ್ಲ
ಬಳ್ಳಾರಿ: ನಾನೇನಾದರೂ ಪಾಕಿಸ್ತಾನ್ ಜಿಂದಾಬಾದ್ ಎಂಬ ಸ್ಲೋಗನ್ ಕೇಳಿದ್ದರೆ ಅವನನ್ನು ನಾನೇ ಜೈಲಿಗೆ ಕಳುಹಿಸುತ್ತಿದ್ದೆ. ನಾನು ಸ್ವಾತಂತ್ರ್ಯ ಹೋರಾಟಗಾರರ ಕುಟುಂಬಂದಿಂದ ಬಂದವನು. ಯಾರಿಂದಲೋ ದೇಶ ಭಕ್ತಿ ಬಗ್ಗೆ ಪಾಠ ಕಲಿಯುವ ಸಂದರ್ಭ ನನಗೆ ಬರುವುದೇ ಇಲ್ಲ! ನಾನು ದೇಶಭಕ್ತಿ, ರಾಷ್ಟ್ರವಾದ ಒಪ್ಪುವವರಲ್ಲಿ ಒಬ್ಬ ಎಂದು ರಾಜ್ಯಸಭಾ ಸದಸ್ಯ, ಬಳ್ಳಾರಿ ನಿವಾಸಿ ನಾಸೀರ್ ಹುಸೇನ್ ಹೇಳಿದ್ದಾರೆ.
ನಾಸೀರ್ ಹುಸೇನ್ ರಾಜ್ಯಸಭಾ ಸದಸ್ಯರಾಗಿ ಪುನರ್ ಆಯ್ಕೆಯಾದ ನಂತರ ವಿಜಯೋತ್ಸವ ಆಚರಿಸುವ ಸಂದರ್ಭದಲ್ಲಿ ಪಾಕಿಸ್ತಾನ್ ಜಿಂದಾಬಾದ್ ಎಂಬ ಸ್ಲೋಗನ್ ಕೇಳಿಬಂದವು ಎಂಬ ಕಾರಣಕ್ಕೆ ತೀವ್ರ ಟೀಕೆಗೆ ಒಳಗಾದ ಕಾರಣಕ್ಕೆ ಖಾಸಗಿ ನ್ಯೂಸ್ ಏಜೆನ್ಸಿಯೊಂದಕ್ಕೆ ಮಾತನಾಡಿದ್ದಾರೆ. ಒಂದು ವೇಳೆ ನನ್ನ ಪಕ್ಕದಲ್ಲಿ ಯಾರಾದರೂ ಪಾಕಿಸ್ತಾನ್ ಜಿಂದಾಬಾದ್ ಎಂದು ಹೇಳಿದ್ದು ಕಂಡುಬಂದದ್ದೇ ಆಗಿದ್ದಲ್ಲಿ ನಾನೇ ಮೊದಲು ಅವನನ್ನು ಜೈಲಿಗೆ ಕಳುಹಿಸುತ್ತಿದ್ದೆ. ಎಂದು ಪ್ರತಿಕ್ರಿಯಿಸಿದ್ದಾರೆ.
ಬಿಜೆಪಿಗರು ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡು ಹೇಗಾದರೂ ಸರಿ ಒಂದು ರಾಜ್ಯಸಭಾ ಸದಸ್ಯ ಸ್ಥಾನ ಗೆಲ್ಲಲೇಬೇಕು ಎಂದು ಪಣತೊಟ್ಟಿದ್ದರು. ಇದರ ಭಾಗವಾಗಿ ಕೇಂದ್ರದ ಏಜೆನ್ಸಿಗಳನ್ನು ಬಳಸಿಕೊಂಡರು. ಆದರೂ, ಅವರಿಂದ ಸಾಧ್ಯ ಆಗಲಿಲ್ಲ. ಇದೇ ಕಾರಣಕ್ಕೆ ಹತಾಶಾರಾಗಿರುವ ಬಿಜೆಪಿಗರು ಬಾಯಿಗೆ ಬಂದ ಹಾಗೆ ಮಾತನಾಡುತ್ತಿದ್ದಾರೆ ಎಂದರು.