ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಾನು ಶುದ್ಧ ಹಿಂದುಸ್ತಾನಿ… ೨೪ ಕ್ಯಾರೆಟ್ ಗೋಲ್ಡ್…

04:37 PM Oct 30, 2024 IST | Samyukta Karnataka

ಹುಬ್ಬಳ್ಳಿ: ನಾನು ಯಾವತ್ತೂ ಸೀಮಿತ ಸಮುದಾಯದ ಪರವಾಗಿ ರಾಜಕಾರಣ ಮಾಡಿಲ್ಲ. ಎಲ್ಲ ಜಾತಿ ವರ್ಗದವರೂ ನನಗೆ ಬೇಕು. ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರಂತೆ ಜಾತಿ, ಧರ್ಮ ಆಧಾರಿತ ರಾಜಕಾರಣ ಮಾಡಿದವ ನಾನಲ್ಲ ಎಂದು ವಕ್ಫ್, ವಸತಿ ಮತ್ತು ಅಲ್ಪಸಂಖ್ಯಾತರ ಕಲ್ಯಾಣ ಖಾತೆ ಸಚಿವ ಜಮೀರ್ ಅಹ್ಮದ್ ಖಾನ್ ಟಾಂಗ್ ನೀಡಿದರು.
ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, `ಜಮೀರ್ ಅಹ್ಮದ್ ಖಾನ್ ಕೋಮು ದ್ವೇಷ ಹುಟ್ಟಿಸುವ ಕೆಲಸ ಮಾಡುತ್ತಿದ್ದಾರೆ. ಅವರನ್ನು ಸಂಪುಟದಿಂದ ಕಿತ್ತು ಹಾಕಬೇಕು' ಎಂಬ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿಕೆ ತಿರುಗೇಟು ನೀಡಿದರು.
ಜೋಶಿ ಅವರು ಹಿಂದು-ಮುಸ್ಲಿಂ ವಿಚಾರ ಬಿಟ್ಟರೆ ಬೇರೇನನ್ನೂ ಮಾತನಾಡುವುದಿಲ್ಲ. ಮುಸಲ್ಮಾನರು ಮತ ನೀಡಲ್ಲ ಅಂತ ಬಿಜೆಪಿಯವರು ಅವರನ್ನು ದ್ವೇಷ ಮಾಡುತ್ತಿದ್ದಾರೆ. ಒಂದು ವೇಳೆ ಮತ ಕೊಟ್ಟರೆ ಮಾತ್ರ ಮುಸಲ್ಮಾನರು ಒಳ್ಳೆಯವರು. ನಾನು ಯಾವತ್ತು ಕೋಮುದ್ವೇಷ ಹರಡಿಸುವಂತಹ ಕೆಲಸ ಮಾಡಿಲ್ಲ. ನಾನು ಶುದ್ಧ ಹಿಂದೂಸ್ತಾನಿ. ೨೪ ಕ್ಯಾರೆಟ್ ಗೋಲ್ಡ್. ನನ್ನನ್ನು ಹೇಗೆ ಕಿತ್ತು ಹಾಕುತ್ತಾರೆ ಎಂದು ಪ್ರಶ್ನಿಸಿದರು.

Next Article