ನಾನೂರು ಗಡಿ ದಾಟಲು ನಿಮ್ಮೂರ ಗ್ಯಾರಂಟಿ ಕೊಡಿ
ಕಲಬುರಗಿ: ಲೋಕಸಮರಕ್ಕೆ ಮುಹೂರ್ತ ಘೋಷಣೆಯಾಗುತ್ತಿದ್ದ ವೇಳೆಯೇ ಪ್ರಧಾನಿ ನರೇಂದ್ರ ಮೋದಿ ಶನಿವಾರ ಇಲ್ಲಿಯ ಎನ್.ವಿ. ಮೈದಾನದಲ್ಲಿ ಬಿಜೆಪಿಯ ಮೊದಲ ಪ್ರಚಾರ ಸಭೆ ಸಂಕಲ್ಪ ಸಮಾವೇಶ'ವನ್ನುದ್ದೇಶಿಸಿ ಮಾತನಾಡುವ ಮೂಲಕ ರಣಕಹಳೆ ಮೊಳಗಿಸಿದರು. ಕಳೆದ ಹತ್ತು ವರ್ಷಗಳಿಂದಲೂ ತಮ್ಮ ರಾಜಕೀಯ ಎದುರಾಳಿಯಾಗಿರುವ ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರ ತವರಿನಿಂದಲೇ ರಾಜ್ಯದಲ್ಲಿ ಮತಬೇಟೆ ಆರಂಭಿಸಿದ ಮೋದಿ ಕಾಂಗ್ರೆಸ್ ಮತ್ತು ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.
ಅಬ್ ಕೀ ಬಾರ್ ಚಾರ್ ಸೌ ಪಾರ್' ಎಂದು ದೃಢವಿಶ್ವಾಸದೊಂದಿಗೆ ಘೋಷಣೆ ಮೊಳಗಿಸಿ ನೆರೆದಿದ್ದ ಸಹಸ್ರಾರು ಜನರನ್ನು ಹುರಿದುಂಬಿಸಿ ಮೋಡಿ ಮಾಡಿದರು.ನನ್ನ ಮಾತನ್ನು ಕನ್ನಡದಲ್ಲೂ ಕೇಳಿ': ಕನ್ನಡ ಭಾಷೆ ಬಗ್ಗೆ ತಾವು ಹೆಚ್ಚಿನ ಗೌರವ ಹೊಂದಿದ್ದು, ಅದಕ್ಕಾಗಿ ಕನ್ನಡಿಗರು ತಮ್ಮ ಭಾಷಣವನ್ನು ಕನ್ನಡದಲ್ಲೂ ಕೇಳುವಂತಾಗಲೆಂದು ಸಾಮಾಜಿಕ ಜಾಲತಾಣ,
ಎಕ್ಸ್'ನಲ್ಲಿ ವ್ಯವಸ್ಥೆ ಮಾಡಲಾಗಿದೆ. ನಮೋ ಇನ್ ಕನ್ನಡ' ಮೂಲಕ ಜನರು ತಮ್ಮನ್ನು ಸಂಪರ್ಕಿಸಬಹುದು. ಆ ಮೂಲಕ ನಿಮ್ಮ ಸೇವೆಗೆ ಹಾಜರಾಗಲು ಸಾಧ್ಯವಾಗುತ್ತದೆ. ಅಲ್ಲದೇ ನೀವು ಕೂಡ
ಮೋದಿ ನನ್ನ ಜೇಬಿನಲ್ಲಿದ್ದಾರೆ' ಎಂದು ಹೇಳಿಕೊಳ್ಳಬಹುದೆಂದರು.