ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನಾಮಪತ್ರ ಸಲ್ಲಿಸಲು ಚಕ್ಕಡಿ ಏರಿ ಹೊರಟ ಮುತ್ತಣ್ಣವರ

01:18 PM Apr 16, 2024 IST | Samyukta Karnataka

ಕಳಸಾ ಬಂಡೂರಿ ಯೋಜನೆಯ ಜಾಗೃತಿಗೋಸ್ಕರ 20 ಕೀಲೋ ಮೀಟರವರೆಗೂ ಎತ್ತಿನ ಚಕ್ಕಡಿಯನ್ನು ಏರಿ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಮುತ್ತಣ್ಣವರ ಅವರು ನಾಮಪತ್ರ ಸಲ್ಲಿಸಲು ಧಾರವಾಡಕ್ಕೆ ತೆರಳಿದರು‌.

ಹುಬ್ಬಳ್ಳಿ : ಹುಬ್ಬಳ್ಳಿಯಿಂದ ದಾರವಾಡದವರೆಗೆ ಕಳಸಾ ಬಂಡೂರಿ ಯೋಜನೆಯ ಜಾಗೃತಿಗೋಸ್ಕರ 20 ಕೀಲೋ ಮೀಟರ ವರೆಗೂ ಎತ್ತಿನ ಚಕ್ಕಡಿಯನ್ನು ಏರಿ ಧಾರವಾಡ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಶಿವಾನಂದ ಮುತ್ತಣ್ಣವರ ಅವರು ನಾಮಪತ್ರ ಸಲ್ಲಿಸಲು ಧಾರವಾಡಕ್ಕೆ ತೆರಳಿದರು‌. ಇಲ್ಲಿನ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ ಮೂರ್ತಿ ಸೇರಿ ವಿವಿಧ ಮಹಾನ್ ನಾಯಕರಿಗೆ ಮಾಲಾರ್ಪಣೆ ಮಾಡಿ ಎತ್ತಿನ ಬಂಡಿಯಲ್ಲಿ ಮೆರವಣಿಗೆ ಮೂಲಕ ಧಾರವಾಡಕ್ಕೆ ತೆರಳಿದರು.
ಶಿವಾಜಿ ಚೌಕ ದಿಂದ ಮೆರವಣಿಗೆ ಮೂಲಕ ಅಪಾರ ಅಭಿಮಾನಿಗಳೊಂದಿಗೆ ಸಾಗಿ ನಾಮಪತ್ರ ಸಲ್ಲಿಸಲಿದ್ದಾರೆ.
ವಿವಿಧ ಮಹಿಳಾ ಸಂಘಟನೆಗಳು ಸ್ತ್ರೀಶಕ್ತಿ ಸಂಘದ ಪದಾಧಿಕಾರಿಗಳು ನೂರಾರು ಡೊಳ್ಳು ಕುಣಿತದ ಜಾನಪದ ಕಲಾವಿದರ ತಂಡಗಳು, ಝಾಂಜ ಮೇಳ, ಕುದುರೆ ಕುಣಿತ, ಜಾನಪದ ಬೊಂಬೆ ಕುಣಿತ,ದಾಲಪಟಾ ಕಲಾವಿದರ ಕತ್ತಿ ವರಸೆ, ಜಗ್ಗಲಗಿ ಹಿಗೆ ಕನ್ನಡ ನಾಡು ನುಡಿಯ ಸಾಂಸ್ಕೃತಿಕವನ್ನು ಎತ್ತಿಹಿಡಿಯವ ಕಲಾವಿದರು ಭಾಗವಹಿಸಲಿದ್ದಾರೆ‌.

Next Article