ನಿಂತ ಆಳದ ನೀರಿಗೆ ಬಿದ್ದು ಮೂವರ ಸಾವು
09:37 PM Jun 18, 2024 IST
|
Samyukta Karnataka
ವಿಜಯಪುರ(ಮುದ್ದೇಬಿಹಾಳ): ಆಳವಾದ ತೆಗ್ಗಿನಲ್ಲಿ ನಿಂತ ನೀರಿನಲ್ಲಿ ಬಿದ್ದು ಮೂವರು ಪ್ರಾಣ ಕಳೆದುಕೊಂಡಿರುವ ಘಟನೆ ತಾಲೂಕಿನ ಹಡಲಗೇರಿ ಗ್ರಾಮದಲ್ಲಿ ನಡೆದಿದೆ.
ಮೊದಲು ಇಬ್ಬರು ನೀರಿಗೆ ಬಿದ್ದಿರುವರೆನ್ನಲಾಗಿದ್ದು, ಮತ್ತೊಬ್ಬ ಅವರಿಬ್ಬರಬ್ಬರನ್ನು ಬದುಕಿಸಲು ಹೋಗಿ ಪ್ರಾಣ ಕಳೆದುಕೊಂಡಿರಬಹುದೆನ್ನಲಾಗಿದೆ. ಒಟ್ಟು ಮೂವರು ಜನ ನೀರಿನಲ್ಲಿ ಪ್ರಾಣ ಕಳೆದುಕೊಂಡಿದ್ದಾರೆ. ಹಡಲಗೇರಿ ಗ್ರಾಮದ ನೀಲಮ್ಮ ಖಿಲಾರಹಟ್ಟಿ(೧೭), ಮುತ್ತಪ್ಪ ಖಿಲಾರಹಟ್ಟಿ(೨೪) ಮತ್ತು ಹಳ್ಳೂರ ಗ್ರಾಮದ ಯಲ್ಲಪ್ಪ ಯಾಳವಾರ(೩೦) ಮೃತ ದುರ್ದೈವಿಗಳು.
ಪ್ರಕರಣದ ಹಿನ್ನೆಲೆ ಸಂಶಯಾಸ್ಪದವಾಗಿದ್ದು ಪೊಲೀಸ್ ತನಿಖೆಯಿಂದ ಹೊರಬರಬೇಕಿದೆ. ಘಟನಾ ಸ್ಥಳಕ್ಕೆ ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ಸಂಜೀವ ತಿಪರೆಡ್ಡಿ ಭೇಟಿ ನೀಡಿ ಪರಿಶೀಲಿಸಿದ್ದು ಕಾನೂನು ಕ್ರಮ ಕೈಗೊಂಡಿದ್ದಾರೆ.
Next Article