For the best experience, open
https://m.samyuktakarnataka.in
on your mobile browser.

ನಿತೀಶ್ `ಕೈ' ಬಿಡುವ ಬಗ್ಗೆ ಮೊದಲೇ ಗೊತ್ತಿತ್ತು

08:01 PM Jan 28, 2024 IST | Samyukta Karnataka
ನಿತೀಶ್  ಕೈ  ಬಿಡುವ ಬಗ್ಗೆ ಮೊದಲೇ ಗೊತ್ತಿತ್ತು

ಕಲಬುರಗಿ: ನಿತೀಶಕುಮಾರ ಹೊರ ಹೋಗುವ ಬಗ್ಗೆ ಐದು ದಿನ ಮುಂಚಿತವಾಗಿಯೇ ನನಗೆ ಮಾಹಿತಿ ಇತ್ತು. ಕೊನೆ ಘಳಿಗೆಯವರೆಗೆ ನಾವು ಬಹಿರಂಗಪಡಿಸದೆ ಹಾಗೇ ಸುಮ್ಮನೆ ಇದ್ದೆವು ಎಂದು ಇಂಡಿಯಾ ಮೈತ್ರಿಕೂಟದ ಅಧ್ಯಕ್ಷ, ಎಐಸಿಸಿ ಅಧ್ಯಕ್ಷರೂ ಆದ ಡಾ. ಮಲ್ಲಿಕಾರ್ಜುನ ಖರ್ಗೆ ಹೇಳಿದರು.
ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಏನು ಬೆಳವಣಿಗೆ ಆಗುತ್ತೆ ಕಾದು ನೋಡೋಣ. ಆದರೆ ಹೋದವರನ್ನು ಮತ್ತೆ ಕರೆತರುವ ಪ್ರಯತ್ನವಿಲ್ಲ. ಹೋದವರು ಹೋಗಲಿ. ದೇಶದಲ್ಲಿ ಆಯಾ ರಾಮ್, ಗಯಾ ರಾಮ ಎನ್ನುವ ಜನ ಬಹಳಷ್ಟಿದ್ದಾರೆ. ಹೀಗಾಗಿ, ತಾವು ಗಂಭೀರವಾಗಿ ಪರಿಗಣಿಸಿಲ್ಲ, ನಾವು ಹೋರಾಟ ಮಾಡುವವರು ಮುಂದುವರಿಸೋಣ ಎಂದರು. ಬಿಹಾರ ರಾಜ್ಯದಲ್ಲಿ ಕ್ಷಿಪ್ರ ರಾಜಕೀಯ ಬೆಳವಣಿಗೆಯಿಂದಾಗಿ ಅಲ್ಲಿನ ಆರ್‌ಜೆಡಿ ವರಿಷ್ಠ ಲಾಲೂಪ್ರಸಾದ ಯಾದವ ಜತೆ ಸಂಪರ್ಕದಲ್ಲಿದ್ದು, ಬಿಹಾರದಲ್ಲಿ ನಮ್ಮ ಪಕ್ಷ ಮತ್ತು ಅವರ ಪಕ್ಷದ ಸಂಖ್ಯಾಬಲ ಬಗ್ಗೆ ಚರ್ಚಿಸಿದ್ದೇವೆ ಎಂದರು.