ನಿಮ್ಮ (ಅ)ಜ್ಞಾನ ಸಂಪತ್ತನ್ನು ಸಮಾಜದ ಒಳಿತಿಗೆ ಬಳಸಿ
ರಾಮ ದೇವರ ಪ್ರತಿಷ್ಠಾಪನೆ ತಪ್ಪು, ದೇವಸ್ಥಾನ ಕಟ್ಟುವಲ್ಲಿ ಆಸ್ಪತ್ರೆ ಕಟ್ಟಿಸಬೇಕು ಎಂದು ಉಚಿತ ಸಲಹೆ ನೀಡುವ ಲಲಿತಮ್ಮ ನಾಯಕರು ತಮ್ಮ ಮನೆಯನ್ನು ವಸತಿರಹಿತ ದಲಿತರಿಗೆ ನೀಡುವ ಮೂಲಕ ಮೇಲ್ಪಂಕ್ತಿ ಹಾಕಿಕೊಡಲಿ
ಬೆಂಗಳೂರು: ಖೊಟ್ಟಿ ವಿಚಾರವಾದಿಗಳು, ಸ್ವಯಂಘೋಷಿತ ಸಾಕ್ಷಿಪ್ರಜ್ಞೆಗಳು ಹಾಗೂ ಅವರ ತಲೆ ಬುಡವಿಲ್ಲದ ವಾದ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದು 1995-ರಲ್ಲಿ ಸನ್ಮಾನ್ಯ ದೇವೆ ಗೌಡರು ಮುಖ್ಯ ಮಂತ್ರಿಗಳಾಗಿದ್ದಾಗ ಅವರ ಸಂಪುಟದ ಸಹೋದ್ಯೋಗಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವೆಯಾಗಿದ್ದ ಲಲಿತಮ್ಮ ನಾಯಕರ ಮಗ ವಿಶ್ವಜಿತ್ ನಾಯಕರು ಹಾಗೂ ಅವನ ಪುಂಡ ಸ್ನೇಹಿತರು ಸಂವಿಧಾನ ಶಿಲ್ಪಿ, ಸಾಮಾಜಿಕ ಕ್ರಾಂತಿಸೂರ್ಯ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ಥಳಿಗೆ ಬಿಯರ್ ಸುರಿದು ಪುಂಡಾಟ ಮೆರೆದಿದ್ದರು. ಎಂ.ಬಿ.ಬಿ.ಎಸ್ ಓದುತ್ತಿದ್ದ ಇವರ ಮಗ ಸೇರಿದಂತೆ ಇನ್ನು 6 ಜನ ವಿದ್ಯಾರ್ಥಿಗಳನ್ನು ತಕ್ಷಣಕ್ಕೆ ಜಾರಿಗೆ ಬರುವಂತೆ ಕಾಲೇಜು ಅಮಾನತ್ತು ಮಾಡಿತು ಹಾಗೂ ನ್ಯಾಯಾಲಯದಿಂದ ಆದೇಶ ತಂದರಷ್ಟೇ ನಿಮ್ಮ ಅಮಾನತನ್ನು ರದ್ದುಪಡಿಸಲಾಗುವುದು ಎಂಬುದನ್ನು ಸ್ಪಷ್ಟವಾಗಿ ತಿಳಿಸಿತು.
ಈ ಘಟನೆ ರಾಜ್ಯಪಾಲರವರೆಗೂ ಹೋದ ನಂತರ ಮತ್ತು ದಲಿತ ಸಂಘಟನೆಗಳು ಅಹರ್ನಿಶಿತಿ ಹೋರಾಟದ ಫಲವಾಗಿ ಲಲಿತಮ್ಮ ನವರು ರಾಜೀನಾಮೆ ನೀಡಬೇಕಾಯಿತು. ಸ್ವಂತ ಮಗನನ್ನೇ ನಿಭಾಯಿಸಲಾಗದ ಲಲಿತಮ್ಮನವರು ಹಿಂದೂಗಳಿಗೆ ಯಾರನ್ನು ಪೂಜಿಸಬೇಕು ಎಂದು ಪಾಠ ಮಾಡುತ್ತಾರೆ. ಪುಕ್ಕಟೆ ಪ್ರಚಾರಕ್ಕೆ ಇವರಿಗೆ ಹಿಂದೂ ಧರ್ಮವೇ ಬೇಕು. ಅನ್ಯ ಕೋಮಿನ ಅನಿಷ್ಟ ಆಚರಣೆಗಳನ್ನು ಟೀಕಿಸಲು ಇವರಿಗೆ ಸಂಕೋಚವೋ ? ಭಯವೋ ಗೊತ್ತಿಲ್ಲ.
ಕುವೆಂಪು ಹೇಳಿದ್ದು ತಪ್ಪು, ರಾಮ ದೇವರ ಪ್ರತಿಷ್ಠಾಪನೆ ತಪ್ಪು, ದೇವಸ್ಥಾನ ಕಟ್ಟುವಲ್ಲಿ ಆಸ್ಪತ್ರೆ ಕಟ್ಟಿಸಬೇಕು ಎಂದು ಉಚಿತ ಸಲಹೆ ನೀಡುವ ಲಲಿತಮ್ಮ ನಾಯಕರು ತಮ್ಮ ಮನೆಯನ್ನು ವಸತಿರಹಿತ ದಲಿತರಿಗೆ ನೀಡುವ ಮೂಲಕ ಮೇಲ್ಪಂಕ್ತಿ ಹಾಕಿಕೊಡಲಿ
ಹಿಂದೂಗಳ ಆರಾಧ್ಯ ದೈವ ಶಿವ, ಪಾರ್ವತಿಯರ ಬಗ್ಗೆ ಲಘುವಾಗಿ ಮಾತನಾಡುವ ಲಲಿತಮ್ಮನವರು ಅನ್ಯಕೋಮಿನವರ ಅರ್ಥರಹಿತ ಆಚರಣೆಗಳನ್ನು ಟೀಕಿಸಿದ್ದನ್ನು ನಾವು ನೋಡಿಲ್ಲ. ನಿಮ್ಮ ವ್ಯಂಗ್ಯ, ಅಪಹಾಸ್ಯ ಹಿಂದೂ ದೇವರ ಮೇಲಷ್ಟೇ ಯಾಕೆ ? ಈ ವೇದಿಕೆಯಲ್ಲಿ ನಡೆದ ಕಾರ್ಯಕ್ರಮಕ್ಕೂ ನಿಮ್ಮ ಭಾಷಣಕ್ಕೂ, ಹಿಂದೂ ದೇವರುಗಳ ಅವಹೇಳನಕ್ಕೂ ಏನು ಸಂಬಂಧ. ನಿಮ್ಮ (ಅ)ಜ್ಞಾನ ಸಂಪತ್ತನ್ನು ಸಮಾಜದ ಒಳಿತಿಗೆ ಬಳಸಿ. ಹಿಂದೂ ದೇವರಗಳನ್ನು ಅವಹೇಳನ, ಅಪಹಾಸ್ಯ, ಲೇವಡಿ ಮಾಡುವುದಕ್ಕಲ್ಲ ಎಂದಿದ್ದಾರೆ.