For the best experience, open
https://m.samyuktakarnataka.in
on your mobile browser.

ನಿರಂತರ ಶುದ್ಧ ಕುಡಿಯುವ ನೀರು…

04:10 PM Nov 09, 2024 IST | Samyukta Karnataka
ನಿರಂತರ ಶುದ್ಧ ಕುಡಿಯುವ ನೀರು…

ಬೆಂಗಳೂರು: ವಿಜಯಪುರ ಜಿಲ್ಲೆಯ ಜನತೆಗೆ ನಿರಂತರ ಶುದ್ಧ ಕುಡಿಯುವ ನೀರು ಪೂರೈಸಿವುದು ನಮ್ಮ ಬದ್ಧತೆಯಾಗಿದೆ ಎಂದು ಸಚಿವ ಎಂಬಿ.ಪಾಟೀಲ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಜಿಲ್ಲೆಯ ಪ್ರತಿ ಗ್ರಾಮ, ಪಟ್ಟಣ, ಹಾಗೂ ನಗರಗಳಿಗೆ ನಿರಂತರ ಶುದ್ಧ ಕುಡಿಯುವ ನೀರು ಪೂರೈಸಲು ಯೋಜನೆ ರೂಪಿಸಲಾಗುತ್ತಿದೆ… #ವಿಜಯಪುರ ನಗರಕ್ಕೆ #ಆಲಮಟ್ಟಿ ಹಿನ್ನೀರಿನಿಂದ ಕುಡಿಯುವ ನೀರು ಪೂರೈಸುವ ಸುಮಾರು 10.8 ಕಿ.ಮೀ ಉದ್ದದ ಕೊಳವೆ ಮಾರ್ಗ ಶಿಥಿಲವಾಗಿದ್ದು, ₹52 ಕೋಟಿ ವೆಚ್ಚದಲ್ಲಿ ಹೊಸದಾಗಿ M.S.ಪೈಪುಗಳನ್ನು ಅಳವಡಿಸಲಾಗುವುದು. #ಬಬಲೇಶ್ವರ ಮತ್ತು #ತಿಕೋಟಾ ಪಟ್ಟಣಗಳ ಪ್ರತಿ ವ್ಯಕ್ತಿಗೆ ದಿನಂಪ್ರತಿ ಪ್ರಸ್ತುತ ಇರುವ 55 ಲೀಟರ್'ಗಳನ್ನು ಹೆಚ್ಚಿಸಿ 135 ಲೀಟರ್ ನೀರು ಪೂರೈಸಲು ಯೋಜನೆ ರೂಪಿಸಲಾಗಿದೆ. #ಮುದ್ದೇಬಿಹಾಳ, #ಸಿಂದಗಿ, #ಬಸವನಬಾಗೇವಾಡಿ ಪಟ್ಟಣಗಳ ನೀರು ಪೂರೈಕೆ ಜಾಲಕ್ಕಾಗಿ ಹೊಸ ಟೆಂಡರ್ ಗಳ ಪ್ರಕ್ರಿಯೆ ಆರಂಭಿಸುವುಕ್ಕೂ ಸೂಚನೆ ನೀಡಲಾಗಿದೆ. ವಿಜಯಪುರ ನಗರಕ್ಕೆ 3ನೇ ಹಂತದ ಕುಡಿಯುವ ನೀರು ಪೂರೈಕೆ ಯೋಜನೆಗಾಗಿ ಆಲಮಟ್ಟಿ ಹಿನ್ನೀರಿನ ರಂಭಾಪುರಿ ಬಳಿ ಜಾಕ್ವೆಲ್ ನಿರ್ಮಾಣಕ್ಕಾಗಿ ವರದಿ ಸಿದ್ಧಪಡಿಸಲು 1.36 ಕೋಟಿ ರೂಪಾಯಿ ಒದಗಿಸಲಾಗುತ್ತಿದೆ. ವಿಜಯಪುರ ಜಿಲ್ಲೆಯ ಜನತೆಗೆ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಪೂರೈಸುವುದು ನಮ್ಮ ಆದ್ಯತೆಯಾಗಿದೆ ಎಂದಿದ್ದಾರೆ.

Tags :