For the best experience, open
https://m.samyuktakarnataka.in
on your mobile browser.

ನಿರ್ಮಾಣ ಹಂತದ ಸೇತುವೆ ಮೂರನೇ ಬಾರಿ ಕುಸಿತ: ವಿಡಿಯೋ ವೈರಲ್‌

04:21 PM Aug 17, 2024 IST | Samyukta Karnataka
ನಿರ್ಮಾಣ ಹಂತದ ಸೇತುವೆ ಮೂರನೇ ಬಾರಿ ಕುಸಿತ  ವಿಡಿಯೋ ವೈರಲ್‌

ಬಿಹಾರ: ಗಂಗಾ ನದಿಯ ಮೇಲೆ ನಿರ್ಮಾಣಗೊಳ್ಳುತ್ತಿರುವ ಚತುಷ್ಪಥ ಸೇತುವೆ ಶನಿವಾರ ಮೂರನೇ ಬಾರಿಗೆ ಕುಸಿದಿದೆ.

ಎಸ್. ಪಿ. ಸಿಂಗ್ಲಾ ಕಂಪನಿ ಕಳೆದ ಒಂಬತ್ತು ವರ್ಷಗಳಿಂದ ಈ ಸೇತುವೆ ನಿರ್ಮಾಣ ಕಾರ್ಯ ನಡೆಸುತ್ತಿದ್ದು, ಖಗರಿಯಾ ಮತ್ತು ಭಾಗಲ್ಪುರ್ ಜಿಲ್ಲೆಗಳನ್ನು ಸಂಪರ್ಕಿಸಲು ಭಾಗಲ್ಪುರ ಜಿಲ್ಲೆಯ ಸುಲ್ತಂಗಂಜ್‌ನಲ್ಲಿ ಈ ಸೇತುವೆಯನ್ನು ನಿರ್ಮಿಸಲಾಗುತ್ತಿದೆ. ಸುಲ್ತಂಗಂಜ್‌ನಿಂದ ಅಗುವಾನಿ ಘಾಟ್ ಕಡೆಯ ಒಂಬತ್ತು ಮತ್ತು ಹತ್ತನೇ ಕಂಬಗಳ ನಡುವಿನ ಭಾಗವು ಕುಸಿದು ಬಿದ್ದಿದೆ. ಮೊದಲ ಬಾರಿಗೆ ಈ ಸೇತುವೆ ಏಪ್ರಿಲ್ 27, 2022ರಂದು ಕುಸಿದಿತ್ತು, ಬಳಿಕ ಜೂನ್ 4, 2023ರಂದು ಮತ್ತೆ ಸೇತುವೆಯ ಒಂದು ಭಾಗ ಕುಸಿದಿತ್ತು ಇದೀಗ ಮತ್ತೆ ಒಂಬತ್ತು ಮತ್ತು ಹತ್ತನೇ ಪಿಲ್ಲರ್ ನಡುವಿನ ಭಾಗ ಕುಸಿದು ಬಿದ್ದಿದೆ ಇದರೊಂದಿಗೆ ಒಟ್ಟು ಮೂರನೇ ಬಾರಿ ಸೇತುವೆ ಕುಸಿದು ಬಿದ್ದಂತಾಗಿದೆ.

ಭಾಗಲ್ಪುರ್-ಸುಲ್ತಂಗಂಜ್ ಅಗುವಾನಿ ಸೇತುವೆಯು ಉತ್ತರ ಮತ್ತು ದಕ್ಷಿಣ ಬಿಹಾರವನ್ನು ಸಂಪರ್ಕಿಸುವ ಬಿಹಾರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ. ಈ ಯೋಜನೆಯ ಆರಂಭಿಕ ಮೌಲ್ಯ 1710.77 ಕೋಟಿ ರೂ. ಮುಖ್ಯಮಂತ್ರಿ ನಿತೀಶ್ ಕುಮಾರ್ 23 ಫೆಬ್ರವರಿ 2014 ರಂದು ಸೇತುವೆ ಕಾಮಗಾರಿಗೆ ಚಾಲನೆ ನೀಡಿದ್ದರು. ಈ ಸೇತುವೆ ಮತ್ತು ರಸ್ತೆ ನಿರ್ಮಾಣದೊಂದಿಗೆ, NH 31 ಮತ್ತು NH 80 ಸಂಪರ್ಕಗೊಳ್ಳಲಿದೆ. ಈ ಸೇತುವೆಯ ಒಟ್ಟು ಉದ್ದವು 3.16 ಕಿಲೋಮೀಟರ್‌ ಆಗಿದೆ.

Tags :