For the best experience, open
https://m.samyuktakarnataka.in
on your mobile browser.

ನಿವೃತ್ತ ನೌಕರರ ಮರುನೇಮಕ ಯಾವ ಪುರುಷಾರ್ಥಕ್ಕೆ

10:42 AM Jan 24, 2025 IST | Samyukta Karnataka
ನಿವೃತ್ತ ನೌಕರರ ಮರುನೇಮಕ ಯಾವ ಪುರುಷಾರ್ಥಕ್ಕೆ

ಪ್ರತಿಭಾವಂತ ಯುವಕ, ಯುವತಿಯರು ಉದ್ಯೋಗವಿಲ್ಲದೆ ಇರುವಾಗ ಮತ್ತೆ ನಿವೃತ್ತರಿಗೆ ಮಣೆ ಹಾಕುವುದು ಆಡಳಿತಾತ್ಮಕ ವೈಫಲ್ಯ

ಬೆಂಗಳೂರು: ನಿವೃತ್ತ ನೌಕರರನ್ನು ಮರುನೇಮಕ ಮಾಡಿಕೊಳ್ಳುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರಶ್ನಿಸಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ನಿವೃತ್ತರನ್ನು ನೇಮಕ ಮಾಡಿಕೊಂಡರೆ ಉತ್ತರದಾಯಿತ್ವದ ಕೊರತೆ ಹಾಗೂ ಗುಣಮಟ್ಟದ ಕೆಲಸ ಪಡೆಯಲು ಸಾಧ್ಯವಾಗುವುದಿಲ್ಲ ಎಂದು ಖುದ್ದು ಮುಖ್ಯ ಮಂತ್ರಿಗಳು ಲಿಖಿತ ರೂಪದಲ್ಲಿ ಮುಖ್ಯ ಕಾರ್ಯದರ್ಶಿಗಳಿಗೆ ತಿಳಿಸಿದ್ದರು. ಇದಲ್ಲದೆ, ನಿವೃತ್ತಿ ಹೊಂದಿದ ನೌಕರರನ್ನು ಮರುನೇಮಕ ಮಾಡಿಕೊಂಡರೆ ಬೊಕ್ಕಸಕ್ಕೆ ಹೊರೆಯಾಗುತ್ತದೆ ಹಾಗೂ ಅವರಲ್ಲಿ ಕಾರ್ಯಕ್ಷಮತೆಯ ಗುಣಮಟ್ಟ ಇರುವುದಿಲ್ಲ ಎಂದು ಹೇಳಿದ್ದರು.

ಈಗ KPTCL ನಲ್ಲಿ 60 ನಿವೃತ್ತ ನೌಕರರನ್ನು ಮರುನೇಮಕ ಮಾಡಿಕೊಳ್ಳುತ್ತಿರುವುದು ಯಾವ ಪುರುಷಾರ್ಥಕ್ಕೆ ಎಂದು ಮುಖ್ಯ ಮಂತ್ರಿಗಳು ಹೇಳಬೇಕು. ಪ್ರತಿಭಾವಂತ ಯುವಕ, ಯುವತಿಯರು ಉದ್ಯೋಗವಿಲ್ಲದೆ ಇರುವಾಗ ಮತ್ತೆ ನಿವೃತ್ತರಿಗೆ ಮಣೆ ಹಾಕುವುದು ಆಡಳಿತಾತ್ಮಕ ವೈಫಲ್ಯ ಅಲ್ಲದೆ ಪ್ರತಿಭಾವಂತ ಯುವ ಉದ್ಯೋಗಾಕಾಂಕ್ಷಿಗಳಿಗೆ ಮಾಡುವ ಅನ್ಯಾಯವೇ ಸರಿ. ಯುವಕರನ್ನು ಈ ಹುದ್ದೆಗೆ ನೇಮಿಸಿ ಅವರಿಗೆ ಸೂಕ್ತ ತರಬೇತಿ ನೀಡಿದರೆ ಅವರು ಬದ್ಧತೆಯಿಂದ ಕೆಲಸ ಮಾಡಬಲ್ಲರು. ಈ ಆದೇಶವನ್ನು ಸರ್ಕಾರ ಕೂಡಲೇ ಹಿಂಪಡೆಯಬೇಕು ಹಾಗೂ ಅರ್ಹ ಯುವಕರನ್ನು ನೇಮಿಸಿಕೊಳ್ಳಬೇಕು ಎಂದಿದ್ದಾರೆ.

Tags :