For the best experience, open
https://m.samyuktakarnataka.in
on your mobile browser.

ನಿಷೇಧವಿದ್ದರೂ ಎಗ್ಗಿಲ್ಲದೆ ಸಾಗಿದೆ ಕ್ಯಾಟ್ ಫಿಶ್ ಸಾಕಣೆ ಹಾಗು ಮಾರಾಟ..!

06:55 PM Oct 04, 2024 IST | Samyukta Karnataka
ನಿಷೇಧವಿದ್ದರೂ ಎಗ್ಗಿಲ್ಲದೆ ಸಾಗಿದೆ ಕ್ಯಾಟ್ ಫಿಶ್ ಸಾಕಣೆ ಹಾಗು ಮಾರಾಟ

ಸರ್ಕಾರವೇ ನಿಷೇಧ ಮಾಡಿರುವ ಕ್ಯಾಟ್ ಫಿಶ್‌ಗಳು ಇದೀಗ ಕಳೆದೊಂದು ತಿಂಗಳಿಂದ ಬಾಗಲಕೋಟೆ ಜಿಲ್ಲೆ ರಬಕವಿ-ಬನಹಟ್ಟಿ ತಾಲೂಕಿನ ಬನಹಟ್ಟಿಯಲ್ಲಿ ಕಾಣಿಸುತ್ತಿವೆ. 2000ದಲ್ಲಿ ಸರ್ಕಾರವೇ ಈ ಮೀನು ತಳಿಗಳನ್ನು ತಿನ್ನುವದು, ಬೆಳೆಸುವದು ಮತ್ತು ಮಾರಾಟ ಮಾಡುವದನ್ನು ನಿಷೇಧ ಮಾಡಿದರೂ ಕಾನೂನಿನ ಭಯವಿಲ್ಲದೆ ರಾಜಾರೋಷವಾಗಿ ರಸ್ತೆ ಮೇಲೆ ಮಾರಾಟ ಮಾಡುತ್ತಿದ್ದಾರೆ.

ಇಲ್ಲಿನ ಸತ್ಕಾರ ಕಾಂಪ್ಲೆಕ್ಸ್ ಬಳಿ ಬಹಿರಂಗವಾಗಿಯೇ ಮಾರಾಟ ಮಾಡುತ್ತಿದ್ದಾರೆ. ಸುತ್ತಲೂ ಈ ಕ್ಯಾಟ್ ಫಿಶ್‌ಗಳ ಸಾಕಾಣಿಕೆಯ ಅಡ್ಡೆಗಳಿದ್ದು, ಕೃಷಿ ಹೊಂಡಗಳೇ ಪ್ರಮುಖ ಕಾರಣವಾಗಿವೆ. ಅವ್ಯಾಹತವಾಗಿ ಕಾನೂನು ಗಾಳಿಗೆ ತೂರಿ ನಿಷೇಧಿತ ಮೀನುಗಳ ಸಾಕಾಣಿಕೆ ಹಾಗು ಮಾರಾಟ ನಡೆಯುತ್ತಿದ್ದರೂ ಅಧಿಕಾರಿಗಳು ಕ್ರಮ ಜರುಗಿಸದಿರುವದು ವಿಪರ್ಯಾಸ.

ಮಾಂಗೂರು ಮೀನು: ಮಾಂಗೂರು ಜಾತಿಯ ಕ್ಯಾಟ ಫಿಶ್‌ಗಳ ಮಾರಾಟ ನಿಷೇಧದ ಮಧ್ಯೆಯೂ ಬಹಿರಂಗವಾಗಿ ನಡೆಯುತಿದೆ.

ಹೆಚ್ಚಿನ ಲಾಭ: ಸಾಮಾನ್ಯ ಮೀನುಗಳಿಗಿಂತ ಕಡಿಮೆ ಬೆಲೆಗೆ ಮಾರುಕಟ್ಟೆಯಲ್ಲಿ ಜನರಿಗೆ ದೊರೆಯುವದರ ಜೊತೆಗೆ ವ್ಯಾಪಾರಿಗಳಿಗೆ ಅಧಿಕ ಲಾಭದ ಆಸೆಗಾಗಿ ಜನರ ಜೀವನದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ.

ನಿಷೇಧವೇಕೆ?: ಈ ಕ್ಯಾಟ್ ಫಿಶ್ ಮಂಸಹಾರಿ ಪ್ರವೃತ್ತಿ ಹೊಂದಿವೆ. ನೀರಿನಲ್ಲಿರುವ ಜಲಚರಗಳನ್ನು ತಿನ್ನುವದರಿಂದ ಕೆಲ ಜಲ ಸಂತಿಗಳು ಅಳವಿನಂಚಿನಲ್ಲಿವೆ. ಈ ಮೀನು ಸಾಕಾಣಿಕೆ ಮಾಡಲು ಕೋಲಿ ತ್ಯಾಜ್ಯ ಮತ್ತು ಮಾಂಸವನ್ನು ಬಳಸುವರು. ಇದು ನೀರು ಅಲ್ಲದೆ ಬರಿ ಕೆಸರಿನಲ್ಲಿ ವಾಸ ಮಾಡುವ ಸಾಮರ್ಥ್ಯ ಹೊಂದಿದೆ. ನೀರಿನಲ್ಲಿ ಇರುವ ಆಮ್ಲಜನಕವಲ್ಲದೆ ವಾತಾವರಣದಲ್ಲಿರುವ ಆಮ್ಲಜನಕವನ್ನೂ ಸೇವಿಸುತ್ತದೆ.

ಆರೋಗ್ಯದ ಮೇಲೆ ಪರಿಣಾಮ: ವಿಷಕಾರಿ ಅಂಶ ಅಧಿಕವಾಗಿದ್ದು, ದೇಹದ ಮೇಲೆ ಹೆಚ್ಚು ಪರಿಣಾಮದಿಂದ ಸೇವಿಸಿದವರಿಗೆ ಹೃದ್ರೋಗ ಸಮಸ್ಯೆ ಹೆಚ್ಚಾಗುತ್ತದೆ.