ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನೈಋತ್ಯ ರೈಲ್ವೆ: ಸರಕು, ಪಾರ್ಸೆಲ್ ಸಾರಿಗೆ ವಿಭಾಗದಲ್ಲಿ ಅತ್ಯುತ್ತಮ ಕಾರ್ಯಕ್ಷಮತೆ

07:46 PM Feb 06, 2024 IST | Samyukta Karnataka

ಹುಬ್ಬಳ್ಳಿ: ನೈಋತ್ಯ ರೈಲ್ವೆಯು ೨೦೨೩ರ ಎಪ್ರಿಲ್‌ನಿಂದ ೨೦೨೪-ಜನವರಿ ಅವಧಿಯಲ್ಲಿ ಸರಕು ಸಾಗಣೆ ಮತ್ತು ಪಾರ್ಸೆಲ್ ಸಾರಿಗೆ ವಿಭಾಗಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.
ಸರಕು ಸಾಗಣೆ ವಿಭಾಗದಲ್ಲಿ ಕಳೆದ ಜನವರಿಯವರೆಗೆ ೪೦.೯೬ ಮಿಲಿಯನ್ ಟನ್ ಸರಕು ಸಾಗಣೆ ಮಾಡಲಾಗಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ೮.೭೬ರಷ್ಟು ಸರಕು ಸಾಗಣೆ ಪ್ರಮಾಣ ಹೆಚ್ಚಳವಾಗಿದೆ.
ಕಳೆದ ಜನವರಿ ತಿಂಗಳಲ್ಲಿ ಗರಿಷ್ಠ ೪.೮೨ ಮಿಲಿಯನ್ ಟಜ್ ಸರಕು ಲೋಡ್ ಮಾಡಲಾಗಿದ್ದು, ಇದು ೨೦೨೩ರ ಮಾರ್ಚ್ ತಿಂಗಳಲ್ಲಿ ಮಾಡಲಾಗಿದ್ದ ಲೋಡ್ ನಂತರ ಅತೀ ಹೆಚ್ಚು ಲೋಡ್ ಮಾಡಿದ ತಿಂಗಳಾಗಿದೆ. ಜನವರಿ ೩೧ರಂದು ಒಂದೇ ದಿನ ೩೪೩೧ ವ್ಯಾಗನ್‌ಗಳನ್ನು ಲೋಡ್ ಮಾಡಿದ್ದು, ಎರಡನೇ ಅತೀ ಹೆಚ್ಚು ಏಕ ದಿನ ಲೋಡ್ ಸಾಧನೆ ಮಾಡಿದೆ.
ಆಟೋಮೊಬೈಲ್ ಕಂಪನಿಗಳಿಗೆ ಆದ್ಯತೆಯ ಸಾರಿಗೆ
ಆಟೋಮೊಬೈಲ್ ತಯಾರಕರಿಗೆ ಆದ್ಯತೆಯ ಸಾರಿಗೆ ಆಯ್ಕೆಯಾಗಿ ಹೊರಹೊಮ್ಮಿದ್ದು, ಜನವರಿ ೨೦೨೪ ರ ಹೊತ್ತಿಗೆ ೫೫೮ ಆಟೋಮೊಬೈಲ್ ರೇಕ್‌ಗಳನ್ನು ಸಾಗಿಸಿದೆ. ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ೩೭.೧% ಹೆಚ್ಚಾಗಿದೆ.
ಆಟೋಮೊಬೈಲ್ ಉದ್ಯಮಗಳಾದ ಟಿವಿಎಸ್, ಕಿಯಾ, ಮಾರುತಿ ಸುಜುಕಿ, ಟಾಟಾ ಮತ್ತು ಟೊಯೋಟಾ ಕಂಪನಿಗಳು ನೈಋತ್ಯ ರೈಲ್ವೆ ಸರಕು ವಿಭಾಗವನ್ನು ಆದ್ಯತೆಯ ಮೇಲೆ ಬಳಸಿಕೊಂಡಿದೆ. ಕಳೆದ ಜನವರಿ ತಿಂಗಳಲ್ಲಿ ೬೯ ಆಟೋಮೊಬೈಲ್ ರೇಕ್‌ಗಳನ್ನು (ಬೆಂಗಳೂರು-೬೫ ರೇಕ್‌ಗಳು, ಮೈಸೂರು-೩ ರೇಕ್‌ಗಳು, ಹುಬ್ಬಳ್ಳಿ-೧ ರೇಕ್) ಲೋಡ್ ಮಾಡಲಾಗಿದೆ.
ಕಬ್ಬಿಣದ ಅದಿರು, ಸಿಮೆಂಟ್, ಉಕ್ಕು, ಖನಿಜ ತೈಲ, ರಸಗೊಬ್ಬರ, ಆರ್‌ಎಂಎಸ್‌ಪಿ, ಕಲ್ಲಿದ್ದಲು, ಆಹಾರ ಧಾನ್ಯಗಳು, ಕಂಟೈನರ್‌ಗಳು ಮತ್ತು ಹಲವಾರು ಇತರ ಸರಕುಗಳ ಸಾಗಣೆ ಒಳಗೊಂಡಿದೆ. ಈ ಪ್ರಯತ್ನಗಳು ಸರಕು ಸಾಗಣೆ ಆದಾಯವನ್ನು ಕಳೆದ ಜನವರಿ ತಿಂಗಳ ಹೊತ್ತಿಗೆ ೪೦೫೫.೩೨ ಕೋಟಿಯಾಗಿದೆ. ಹಿಂದಿನ ವರ್ಷದ ಇದೇ ಅವಧಿಯಲ್ಲಿ ಗಳಿಸಿದ ಆದಾಯಕ್ಕೆ ಹೋಲಿಸಿದರೆ ೧೦.೩೬% ಹೆಚ್ಚಳವಾಗಿದೆ ಎಂದು ನೈಋತ್ಯ ರೈಲ್ವೆ ವಲಯ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಡಾ.ಮಂಜುನಾಥ್ ಕನಮಡಿ ತಿಳಿಸಿದ್ದಾರೆ.
ಗ್ರಾಹಕರ ಸ್ಪಂದನೆ, ಅಧಿಕಾರಿ ಸಿಬ್ಬಂದಿ ವರ್ಗ ಕಾರ್ಯ ಶ್ಲಾಘನೀಯ
ಅಸ್ತಿತ್ವದಲ್ಲಿರುವ ಗ್ರಾಹಕರನ್ನು ಉಳಿಸಿಕೊಳ್ಳುವ ಮತ್ತು ಹೊಸ ಗ್ರಾಹಕರನ್ನು ಆಕರ್ಷಿಸಲು ವ್ಯಾಪಾರಿಗಳು, ರೈತರು ಮತ್ತು ವಸ್ತು ತಯಾರಿಕಾ ಕಂಪನಿಗಳ ಆಶಯಕ್ಕೆ ಪೂರಕವಾಗಿ ಕಾರ್ಯನಿರ್ವಹಿಸಿದೆ. ಗ್ರಾಹಕರ ಹಿತಾಸಕ್ತಿಯೇ ಪ್ರಥಮ ಆದ್ಯತೆಯಾಗಿ ಕಾರ್ಯನಿರ್ವಹಿಸಿದೆ. ಈ ಸಕಾರಾತ್ಮಕ ವಿಧಾನವು ಆಟೋಮೊಬೈಲ್, ಕಬ್ಬಿಣದ ಅದಿರು ಲೋಡಿಂಗ್ ಹೆಚ್ಚಳಕ್ಕೆ ಕಾರಣವಾಗಿದೆ.. ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯ ಈ ದಿಶೆಯಲ್ಲಿ ಶ್ಲಾಘನೀಯ. ನೈಋತ್ಯ ರೈಲ್ವೆ ಸರಕು ವಿಭಾಗದ ಸೇವೆ ಮೇಲೆ ವಿಶ್ವಾಸವಿಟ್ಟು ಸಹಕರಿಸಿದ ಸರಕು ಸಾಗಣೆ ಮತ್ತು ಪಾರ್ಸೆಲ್ ಗ್ರಾಹಕರಿಗೆ ಕೃತಜ್ಞತೆ ಸಲ್ಲಿಸುತ್ತೇನೆ ಎಂದು ನೈಋತ್ಯ ರೈಲ್ವೆ ವಲಯ ಪ್ರಧಾನ ವ್ಯವಸ್ಥಾಕ ಸಂಜೀವ ಕಿಶೋರ ತಿಳಿಸಿದ್ದಾರೆ.

Next Article