For the best experience, open
https://m.samyuktakarnataka.in
on your mobile browser.

ನೈಜ ಭಾರತವನ್ನು ಕಟ್ಟುವ ತಾಕತ್ತು ತೋರಿಸಿಕೊಟ್ಟ ಮೇಕ್ ಇನ್ ಇಂಡಿಯಾ

10:42 AM Sep 26, 2024 IST | Samyukta Karnataka
ನೈಜ ಭಾರತವನ್ನು ಕಟ್ಟುವ ತಾಕತ್ತು ತೋರಿಸಿಕೊಟ್ಟ ಮೇಕ್ ಇನ್ ಇಂಡಿಯಾ

ಬೆಂಗಳೂರು: ಆಡು ಮುಟ್ಟದ ಸೊಪ್ಪಿಲ್ಲ, ಪ್ರಧಾನಿ ನರೇಂದ್ರ ಮೋದಿಯವರು ಕನಸು ಕಂಡು ಕಾರ್ಯಕ್ರಮ ಕೊಡದ ಕ್ಷೇತ್ರವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ ವಿಜಯೇಂದ್ರ ಹೇಳಿದ್ದಾರೆ.
ನವ ಭಾರತ ನಿರ್ಮಾಣಕ್ಕಾಗಿ ಮಹತ್ವದ ಮೇಕ್ ಇನ್ ಇಂಡಿಯಾ ಯೋಜನೆ ಜಾರಿಗೆ ತಂದು ಇಂದಿಗೆ 10 ವರ್ಷಗಳು ಆಗಿರುವ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‌ ಮಾಡಿದ್ದು ಅಣ್ಣ ಬಸವಣ್ಣನವರ ವಿಚಾರಧಾರೆಗಳಿಂದ ಪ್ರೇರಣೆ ಪಡೆದಿರುವ ಮಾನ್ಯ ಪ್ರಧಾನಿಗಳು 12 ನೇ ಶತಮಾನದ ಕಾಯಕ ಶ್ರೇಷ್ಠ ಸಂಸ್ಕೃತಿಯ ಮೂಲಕ, ದೇಶೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾ ಯೋಜನೆಯ ಮೂಲಕ ಕೌಶಲ್ಯ ಭಾರತದ ಕನಸನ್ನು ನನಸುಗೊಳಿಸಿದ್ದಾರೆ. ಸ್ವಾಮಿ ವಿವೇಕಾನಂದರು ಕನಸು ಕಂಡ ‘ಪರಂಪರೆಯ ಭಾರತವನ್ನು ಕಟ್ಟುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಯನ್ನಿಟ್ಟಿದ್ದು ನಮ್ಮ ಮೋದಿ ಅವರು, ಭಾರತೀಯ ಉತ್ಪನ್ನ ಕ್ಷೇತ್ರವನ್ನು ಮಸುಕಾಗಿಸಿ ನಮ್ಮ ಯುವಜನರ ಉದ್ಯೋಗದ ಅವಕಾಶವನ್ನು ಕಸಿಯುತ್ತಿದ್ದ ವಿದೇಶಿ ಉತ್ಪನ್ನಗಳು ಮೂಲೋತ್ಪಾಟನೆ ಆಗಬೇಕೆಂದು ಸ್ವದೇಶಿ ಚಳುವಳಿಗೆ ಚಾಲನೆ ನೀಡಿದ್ದ ಮಹಾತ್ಮ ಗಾಂಧಿ ಅವರ ಆಶಯಕ್ಕೆ ವಿರುದ್ಧವಾಗಿ ನಮ್ಮ ದೇಶೀಯ ಉದ್ಯಮ ಕ್ಷೇತ್ರ ತತ್ತರಿಸಿ ಹೋಗುವಂತೆ ಮಾಡಿದ್ದ ಕಾಂಗ್ರೆಸ್ ಗೆ ಸ್ವಾವಲಂಬಿ ಭಾರತದ ಮೂಲಕ ಮಹಾತ್ಮ ಗಾಂಧೀಜಿ ಅವರ ಸ್ವದೇಶಿ ಚಳುವಳಿಯನ್ನು ಅರ್ಥಪೂರ್ಣವಾಗಿ ಕಟ್ಟಿಕೊಟ್ಟಿದ್ದು ಮೋದಿಜೀ ಅವರ ಸರ್ಕಾರ ಎಂಬುದು ಹೆಮ್ಮೆಯ ಸಂಗತಿ. ಮೇಕ್​ ಇನ್​ ಇಂಡಿಯಾ ಈಗ ಚಂದ್ರನವರೆಗೂ ತಲುಪಿದೆ. ಭಾರತವು ವಿಶ್ವದ ಅತಿದೊಡ್ಡ ಮೊಬೈಲ್ ರಫ್ತು ರಾಷ್ಟ್ರಗಳಲ್ಲೊಂದಾಗಿ ಹೊರಹೊಮ್ಮಿದೆ, ಸ್ಥಳೀಯ ಉತ್ಪಾದನೆಯಲ್ಲಿ ಹೆಚ್ಚಳ ಕಂಡಿದ್ದು, ಆಮದು ಇಳಿಕೆಯಾಗಿ, ಬೃಹತ್ ರಫ್ತಿನ ಗುರಿಯೆಡೆಗೆ ಸಾಗುತ್ತಿದ್ದೇವೆ ಎಂದಿದ್ದಾರೆ.

Tags :