ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನೈರುತ್ಯ ರೈಲ್ವೆ: ಹಲವು ರೈಲುಗಳ ಸಂಚಾರ ಭಾಗಶಃ ರದ್ದು

07:37 PM Aug 19, 2024 IST | Samyukta Karnataka

ಹುಬ್ಬಳ್ಳಿ : ಅರಸೀಕೆರೆ ಯಾರ್ಡ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು, ಸಮಯ ಮರುನಿಗದಿ & ನಿಯಂತ್ರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ವಲಯ ತಿಳಿಸಿದೆ.

ಹಳ್ಳಿಗುಡಿ ಹಾಲ್ಟ್: ರೈಲುಗಳ ತಾತ್ಕಾಲಿಕ ನಿಲುಗಡೆ ಮುಂದುವರಿಕೆ

ಶ್ರೀ ಸಿದ್ಧಾರೂಢ ಸ್ವಾಮೀಜಿ ಹುಬ್ಬಳ್ಳಿ ಮತ್ತು ಸಿಂಧನೂರು ನಿಲ್ದಾಣಗಳ ನಡುವೆ ಪ್ರದಿದಿನ ಸಂಚರಿಸುವ ಪ್ಯಾಸೆಂಜರ್ ಸ್ಪೆಷಲ್ ರೈಲುಗಳಿಗೆ (ರೈಲು ಸಂಖ್ಯೆ 07381/07382) ಹಳ್ಳಿಗುಡಿ ಹಾಲ್ಟ್ ನಿಲ್ದಾಣದಲ್ಲಿ ಒಂದು ನಿಮಿಷದ ತಾತ್ಕಾಲಿಕ ನಿಲುಗಡೆ ಸೌಲಭ್ಯವನ್ನು ಸೆಪ್ಟೆಂಬರ್ 1, 2024 ರಿಂದ ಫೆಬ್ರವರಿ 28, 2025 ರವರೆಗೆ ಅಸ್ತಿತ್ವದಲ್ಲಿರುವ ಸಮಯದೊಂದಿಗೆ ಆರು ತಿಂಗಳವರೆಗೆ ಮುಂದುವರಿಸಲಾಗುತ್ತಿದೆ.

ರೈಲುಗಳ ಸಂಚಾರ ಭಾಗಶಃ ರದ್ದು

ಅರಸೀಕೆರೆ ಯಾರ್ಡ್‌ನಲ್ಲಿ ಸುರಕ್ಷತೆಗೆ ಸಂಬಂಧಿಸಿದ ಕಾಮಗಾರಿ ಕೈಗೊಳ್ಳುವ ಸಲುವಾಗಿ, ಈ ಕೆಳಗಿನ ರೈಲುಗಳನ್ನು ಭಾಗಶಃ ರದ್ದು, ಸಮಯ ಮರುನಿಗದಿ & ನಿಯಂತ್ರಿಸಲಾಗುತ್ತಿದೆ, ಅವುಗಳ ಈ ಕೆಳಗಿನಂತಿವೆ:

  1. ರೈಲು ಸಂಖ್ಯೆ 16214 ಎಸ್ಎಸ್ಎಸ್ ಹುಬ್ಬಳ್ಳಿ-ಅರಸಿಕೆರೆ ಡೈಲಿ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 26, ಸೆಪ್ಟೆಂಬರ್ 2, 9, 16, 21, 23, 28, 30, ಅಕ್ಟೋಬರ್ 5 ಮತ್ತು 14, 2024 ರಂದು ಬೀರೂರು-ಅರಸಿಕೆರೆ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
  2. ರೈಲು ಸಂಖ್ಯೆ 16213 ಅರಸೀಕೆರೆ-ಎಸ್‌ಎಸ್‌ಎಸ್ ಹುಬ್ಬಳ್ಳಿ ಡೈಲಿ ಎಕ್ಸ್‌ಪ್ರೆಸ್ ರೈಲು ಆಗಸ್ಟ್ 27, ಸೆಪ್ಟೆಂಬರ್ 3, 10, 17, 22, 24, 29, ಅಕ್ಟೋಬರ್ 1, 6 ಮತ್ತು 15, 2024 ರಂದು ಅರಸೀಕೆರೆ-ಬೀರೂರು ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
  3. ರೈಲು ಸಂಖ್ಯೆ 06213 ಅರಸೀಕೆರೆ-ಮೈಸೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಆಗಸ್ಟ್ 27, ಸೆಪ್ಟೆಂಬರ್ 3, 10, 17, 24, ಅಕ್ಟೋಬರ್ 1 ಮತ್ತು 15, 2024 ರಂದು ಅರಸೀಕೆರೆ-ಹಾಸನ ನಿಲ್ದಾಣಗಳ ನಡುವೆ ಭಾಗಶಃ ರದ್ದುಗೊಳಿಸಲಾಗುತ್ತಿದೆ.
  1. ರೈಲು ಸಂಖ್ಯೆ 06274 ಅರಸೀಕೆರೆ-ಕೆಎಸ್‌ಆರ್ ಬೆಂಗಳೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಆಗಸ್ಟ್ 27, ಸೆಪ್ಟೆಂಬರ್ 3, 10, 17, 24, ಅಕ್ಟೋಬರ್ 1 ಮತ್ತು 15, 2024 ರಂದು ಅರಸೀಕೆರೆ ನಿಲ್ದಾಣದಿಂದ 155 ನಿಮಿಷ ತಡವಾಗಿ ಪ್ರಯಾಣ ಹೊರಡಲಿದೆ.
  1. ಆಗಸ್ಟ್ 31, ಸೆಪ್ಟೆಂಬರ್ 21, 28, ಅಕ್ಟೋಬರ್ 5 ಮತ್ತು 12, 2024 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 16545 ಯಶವಂತಪುರ-ಸಿಂಧನೂರು ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಮಾರ್ಗ ಮಧ್ಯ 30 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.
  2. ಆಗಸ್ಟ್ 31, ಸೆಪ್ಟೆಂಬರ್ 21, 28, ಅಕ್ಟೋಬರ್ 5 ಮತ್ತು 12, 2024 ರಂದು ಪ್ರಾರಂಭವಾಗುವ ರೈಲು ಸಂಖ್ಯೆ 20653 ಕೆಎಸ್ಆರ್ ಬೆಂಗಳೂರು-ಬೆಳಗಾವಿ ಎಕ್ಸ್‌ಪ್ರೆಸ್ ರೈಲನ್ನು ಮಾರ್ಗ ಮಧ್ಯ 20 ನಿಮಿಷಗಳವರೆಗೆ ನಿಯಂತ್ರಿಸಲಾಗುತ್ತದೆ.

ಸೋಲಾಪುರ-ಹುಬ್ಬಳ್ಳಿ ಪ್ಯಾಸೆಂಜರ್ ಸ್ಪೆಷಲ್ ರೈಲಿನ ನಿಯಂತ್ರಣ

ಆಗಸ್ಟ್ 20 ಮತ್ತು 22, 2024 ರಂದು ಸೋಲಾಪುರದಿಂದ ಪ್ರಯಾಣ ಬೆಳೆಸುವ ರೈಲು ಸಂಖ್ಯೆ 07331 ಸೋಲಾಪುರ-ಎಸ್ಎಸ್ಎಸ್ ಹುಬ್ಬಳ್ಳಿ ಡೈಲಿ ಪ್ಯಾಸೆಂಜರ್ ಸ್ಪೆಷಲ್ ರೈಲು ಕುಸುಗಲ್ ಮತ್ತು ಹೆಬಸೂರ ನಿಲ್ದಾಣಗಳ ನಡುವೆ ಹಳಿ ನಿರ್ವಹಣಾ ಕಾಮಗಾರಿ ನಿಮಿತ್ತ 60 ನಿಮಿಷಗಳ ಕಾಲ ಮಾರ್ಗ ಮಧ್ಯದಲ್ಲಿ ನಿಯಂತ್ರಿಸಲಾಗುತ್ತಿದೆ ಎಂದು ನೈಋತ್ಯ ರೈಲ್ವೆ ಮುಖ್ಯ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಂಜುನಾಥ ಕನಮಡಿ ತಿಳಿಸಿದ್ದಾರೆ.

Tags :
#Trains
Next Article