For the best experience, open
https://m.samyuktakarnataka.in
on your mobile browser.

ನ್ಯಾಯಲಯಕ್ಕೆ ಹಾಜರಾದ ಸಿಎಂ

11:18 AM Feb 17, 2024 IST | Samyukta Karnataka
ನ್ಯಾಯಲಯಕ್ಕೆ ಹಾಜರಾದ ಸಿಎಂ

ದೆಹಲಿ: ಮದ್ಯ ನೀತಿಯಲ್ಲಿ ಅಕ್ರಮ ಹಣ ವರ್ಗಾವಣೆ ನಡೆಸಲಾಗಿದೆ ಎಂಬ ಪ್ರಕರಣಕ್ಕೆ ಸಂಬಂಧಸಿದಂತೆ ಮುಖ್ಯಮಂತ್ರಿ ಅರವಿಂದ್​​​ ಕೇಜ್ರಿವಾಲ್ ಅವರು ಇಂದು ದೆಹಲಿ ನ್ಯಾಯಲಯಕ್ಕೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾಗಿದ್ದಾರೆ. ಈ ಮುಂಚೆ ಅವರಿಗೆ ಆರು ಬಾರಿ ಇಡಿ ಅವರಿಗೆ ಸಮನ್ಸ್​​​ ನೀಡಿತ್ತು. ಕೇಜ್ರಿವಾಲ್ ಪರ ವಾದ ಮಂಡಿಸಿದ ಹಿರಿಯ ವಕೀಲ ರಮೇಶ್ ಗುಪ್ತಾ, ಮುಂದಿನ ವಿಚಾರಣೆಯ ದಿನಾಂಕದಂದು ದೆಹಲಿ ಮುಖ್ಯಮಂತ್ರಿ ಖುದ್ದು ಹಾಜರಾಗಲಿದ್ದಾರೆ ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಇಂದು ವಿಶ್ವಾಸಮತ ಯಾಚನೆ: ದೆಹಲಿಯಲ್ಲಿ ವಿಧಾಸಭೆ ಕಲಾಪ ನಡೆಯುತ್ತಿದ್ದು, ಬಜೆಟ್​​​ ಮಂಡನೆಗೂ ಮುನ್ನ ವಿಶ್ವಾಸಮತ ಯಾಚನೆ ನಡೆಸಲಿದ್ದಾರೆ ಎಂದು ಹೇಳಿದ್ದಾರೆ. ದೆಹಲಿ ಸರ್ಕಾರಕ್ಕೆ ಸರಿಯಾದ ಸಂಖ್ಯಾ ಬಲ ಇಲ್ಲ ಎಂಬ ಆರೋಪವನ್ನು ಮಾಡಲಾಗಿದ್ದು. ಎಎಪಿ ನಾಯಕರು ನಮ್ಮ ಜತೆಗೆ ಇದ್ದರೆ, ಹಾಗೂ ಸರ್ಕಾರಕ್ಕೆ ಸಂಪೂರ್ಣ ಬಲವಿದೆ ಎಂಬುದನ್ನು ಜನರ ಮುಂದೆ ಸಾಬೀತು ಮಾಡಬೇಕಿದೆ ಅದಕ್ಕಾಗಿ ವಿಶ್ವಾಸಮತ ಯಾಚನೆ ನಡೆಸಲಿದ್ದೇನೆ ಎಂದು ಹೇಳಿದ್ದಾರೆ.

ವಿಚಾರಣೆ ಮಾರ್ಚ್ 16ಕ್ಕೆ: ನ್ಯಾಯಾಲಯವು ಪ್ರಕರಣದ ವಿಚಾರಣೆಯನ್ನು ಮಾರ್ಚ್ 16ಕ್ಕೆ ಮುಂದೂಡಿದೆ.