ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ನ. ೧ರಿಂದ ಜಾತಿ ಜನಗಣತಿ ಅನುಷ್ಠಾನ ಆಗಲಿ

01:00 PM Oct 04, 2024 IST | Samyukta Karnataka

ಕೊಪ್ಪಳ: ಜನಗಣತಿ ಬಿಡುಗಡೆ ಮಾಡುವುದರಿಂದ ನಿಜವಾದ ಸಾಮಾಜಿಕ ನ್ಯಾಯ ಸಿಗಲಿದೆ. ಮುಂದಿನ ವಾರದೊಳಗೆ ಸಂಪುಟ ಸಭೆಯಲ್ಲಿ ಅನುಮೋದನೆ ಪಡೆಯಬೇಕು. ನ. ೧ರಿಂದ ಅನುಷ್ಠಾನ ಗೊಳಿಸಬೇಕು ಎಂದು ಮುಖ್ಯಮಂತ್ರಿಗಳ ಆರ್ಥಿಕ‌ ಸಲಹೆಗಾರ ಬಸವರಾಜ ರಾಯರಡ್ಡಿ ಹೇಳಿದರು.

ತಾಲ್ಲೂಕಿನ ಬಸಾಪುರ ಖಾಸಗಿ ವಿಮಾನ ನಿಲ್ದಾಣದಲ್ಲಿ ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಿಂದಿನ ಕಾಂಗ್ರೆಸ್ ಸರ್ಕಾರವಿದ್ದಾಗ ಜಾತಿ ಜನಗಣತಿ ಆರಂಭಿಸಲಾಯಿತು. ಬಜೆಟಿನಲ್ಲಿ ೧೬೫ ಕೋಟಿ ರೂ. ಮೀಸಲಿಟ್ಟು, ಕಾಂತರಾಜ್ ನೇತೃತ್ವದ ಶಾಶ್ವತ ಹಿಂದುಳಿದ ವರ್ಗಗಳ ಆಯೋಗ ರಚಿಸಲಾಗಿತ್ತು. ಈ ಆಯೋಗದ ವರದಿಯು ಅಪೂರ್ಣವಾಗಿತ್ತು. ಇದನ್ನು ಕುಮಾರಸ್ವಾಮಿ ನೇತೃತ್ವದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಮತ್ತು ಬಿಜೆಪಿ ಸರ್ಕಾರಗಳು ವರದಿ ಅನುಷ್ಠಾನ ಗೊಳಿಸಲಿಲ್ಲ. ಈಗ ಜಯಪ್ರಕಾಶ ಹೆಗಡೆ ಶಾಶ್ವತ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿದ್ದು, ಇವರು ಕೂಡಾ ಸಮೀಕ್ಷೆ ಮಾಡಿ, ಸರ್ಕಾರಕ್ಕೆ ಫೆ. ೨೯ರಂದು ವರದಿ ನೀಡಿದೆ. ಆದರೆ ಈವರೆಗೂ ಅನುಷ್ಠಾನ ಮಾಡಿಲ್ಲ. ಈ ಕುರಿತು ಸಿಎಂ ಸಿದ್ದರಾಮಯ್ಯರೊಂದಿಗೆ ಜನಗಣತಿ ಬಗ್ಗೆ ೨ ಗಂಟೆ ಚರ್ಚಿಸಿ, ಅನುಷ್ಠಾನಕ್ಕೆ ಒತ್ತಾಯಿಸಿದ್ದೇವೆ. ಅವರು ನೋಡೋಣ, ಮಾಡೋಣ ಎನ್ನುತ್ತಿದ್ದಾರೆ ಎಂದರು.

ಇದು ಜಾತಿ ಜನಗಣತಿ ಅಲ್ಲ, ಆರ್ಥಿಕ, ಶೈಕ್ಷಣಿಕ ಮತ್ತು ಸಾಮಾಜಿಕ ಜನರ ಸಮಗ್ರ ಗಣತಿಯಾಗಿದೆ. ಒಳ ಮೀಸಲಾತಿ ನೀಡಲೂ ಅನುಕೂಲ ಆಗಲಿದೆ. ಇದರಿಂದಾಗಿ ನೀವು ಬಿಡುಗಡೆ ಮಾಡಲೇಬೇಕು. ನಿಮ್ಮನ್ನು ಬಿಟ್ಟರೇ ಬೇರಾ ಯಾರು ಬದ್ಧತೆ ಇರುವ ರಾಜಕಾರಣಿ ಇಲ್ಲ. ಇದು ಬಡವರ ಪರವಾದ ಗಣತಿಯಾಗಿದೆ ಎಂದು ನಾನೂ ಕೂಡಾ ಮನವರಿಕೆ ಮಾಡಿದ್ದೇನೆ. ಲಿಂಗಾಯತ ಶಾಸಕನಾಗಿ ಹೇಳುತ್ತಿದ್ದೇನೆ‌. ಜಾತಿ ಗಣತಿ ಜಾರಿ ಮಾಡಬೇಕು‌. ಇದರಲ್ಲಿ ತಪ್ಪು ಮಾಡಿದ್ದರೆ ಸರಿಪಡಿಸಲು ಅನುಕೂಲ ಆಗುತ್ತದೆ ಎಂದರು.

ಹಿಂದೆ ಜಾತಿಗಣತಿಯು ೧೯೩೧ನಲ್ಲಿ ಮಿಲ್ಲರ್ ಕಮಿಷನ್ ಆಗಿತ್ತು. ಮಂಡಲ ವರದಿಯಿಂದ ಸುಫ್ರಿಂಕೋರ್ಟ್ ಬೇರೆ ಯಾವ ಜಾತಿಯವರು ಎಷ್ಟಿದ್ದಾರೆ ಎಂದು ಗೊತ್ತಿದೆಯಾ? ಎಂದು ಪ್ರಶ್ನಿಸಿದ್ದು, ಜಾತಿ ಜನರಿಗೆ ಸೌಲಭ್ಯ ಕೊಡಬೇಕಾದರೆ ಗಣತಿ ಅವಶ್ಯಕವಾಗಿದೆ ಎಂದಿದೆ. ರಾಜ್ಯದ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರೆಲ್ಲರೂ ಶೇ.೫೦ರಷ್ಟು ಮೀಸಲಾತಿ ಪಡೆಯುತ್ತಿದ್ದೇವೆ. ಇನ್ನುಳಿದ ಬ್ರಾಹ್ಮಣರು, ವೈಶ್ಯರು, ಆರ್ಯರಿಗೆ ಶೇ.೫೦ರಷ್ಟು ಮೀಸಲಾತಿ ಮಾಡಿದ್ದಾರೆ. ಹಾಗಾಗಿ ಶೇ.೫೦ರಷ್ಟಿರುವ ಎಸ್ಸಿ, ಎಸ್ಟಿ, ಹಿಂದುಳಿದ ವರ್ಗದವರ ಮೀಸಲಾತಿ ಹೆಚ್ಚಿಸಬೇಕು ಎಂದರು.

ಮುಡಾ ಹಗರಣಕ್ಕೆ ಸಿಎಂ ವಿಚಲಿತರಾಗದಿರಲಿ: ಮುಡಾ ಹಗರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಚಲಿತರಾಗುವ ಅವಶ್ಯಕತೆ ಇಲ್ಲ. ಏಕೆಂದರೆ ಇದೊಂದು ರಾಜಕೀಯ ಆಟ. ಬಿಜೆಪಿಯವರು ಆಟವಾಡಿದ್ದಾರೆ ಎಂದು ಬಸವರಾಜ ರಾಯರಡ್ಡಿ ಹೇಳಿದರು.

ಸೈಟ್ ವಾಪಾಸ್ ಕೊಡುವುದು ಅನಾವಶ್ಯಕವಾಗಿ ಪತ್ನಿ ಮಾಡಿದ ತೀರ್ಮಾನ‌ವಾಗಿದೆ. ನ್ಯಾಯಾಲಯದ ತೀರ್ಪಿನಲ್ಲಿ ಪ್ರಾಶುಕ್ಯುಷನ್ ಎಂದು ನಮೂದಾಗಿದೆ. ಯಾವ ಪ್ರಾಶುಕ್ಯುಷನ್ ಎಂದು ಗೊತ್ತಿದಿದೆ. ಹೊಸ ಕಾನೂನಿನ ಪ್ರಾಶುಕ್ಯುಷನ್ ಕೊಡಬೇಡಿ ಎಂದಿದೆ. ಕೇವಲ ಪ್ರಾಥಮಿಕ ತನಿಖೆ ಮಾಡಲಿ ಎಂದಿದ್ದಾರೆ‌. ಇದಕ್ಕೆ ರಾಜೀನಾಮೆ ನೀಡಬೇಕಾ?. ರಾಜೀನಾಮೆ ನೀಡಬಾರದು. ಇನ್ನುಳಿದ ಅವಧಿ ಸಿದ್ದರಾಮಯ್ಯರೇ ಮುಖ್ಯಮಂತ್ರಿ ಆಗಿರಬೇಕು ಎಂದರು.

Tags :
#ಕೊಪ್ಪಳ
Next Article