ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ: ಜ.14 ರಂದು ಚಾಲನೆ
ರಾಷ್ಟ್ರೀಯ ಬಸವ ಪ್ರತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ಫೆಬ್ರುವರಿ 12ಕ್ಕೆ
ಬೆಳಗಾವಿ:ನಮ್ಮ ಪಂಚಮಸಾಲಿ ಮೀಸಲಾತಿಗಾಗಿ ಒತ್ತಾಯಿಸಿ, ಪ್ರತಿಭಟಿಸುತ್ತಿದ್ದ ವೇಳೆ ನಮ್ಮ ಸಮುದಾಯದ ಜನರ ಮೇಲೆ ಲಾಠಿ ಪ್ರಹಾರ ಮಾಡಿ ಮಾರಣಾಂತಿಕೆ ಹಲ್ಲೆ ನಡೆಸಿದ ಸರಕಾರದ ನೀತಿ ವಿರುದ್ಧ ಹಾಗೂ ಮೀಸಲಾತಿ ಕೊಡುವು ದಿಲ್ಲ ಎಂದು ಹೇಳಿ ಸಿಎಂ ಸಿದ್ದರಾಮಯ್ಯ ನಂಬಿಕೆ ದ್ರೋಹ ಮಾಡಿರುವುದನ್ನು ಖಂಡಿಸಿ, ರಾಜ್ಯದ ಪ್ರತಿ ಗ್ರಾಮಗಳಿಗೂ ಭೇಟಿ ನೀಡುವ ಪಂಚಮಸಾಲಿ ಪ್ರತಿಜ್ಞಾ ಕ್ರಾಂತಿ ಎಂಬ 8ನೇ ಹಂತದ ಅಭಿಯಾನವನ್ನು ಜ.14 ರಂದು ಬೆಳಗ್ಗೆ 11. ಗಂಟೆಗೆ ಕೂಡಲಸಂಗಮದ ಪಂಚಮಸಾಲಿ ಪೀಠದಿಂದ
ಚಾಲನೆ ನೀಡಲಾಗುವುದು ಎಂದು ಶ್ರೀ ಬಸವಜಯ ಮೃತ್ಯುಂಜಯ ಸ್ವಾಮೀಜಿ ಅವರು ಹೇಳಿದರು.
ನಗರದ ಕನ್ನಡ ಸಾಹಿತ್ಯ ಭವನದಲ್ಲಿ ಶನಿವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಈಗಾಗಲೇ ಮೀಸಲಾತಿ ಕೊಡುವುದಿಲ್ಲ ಎಂದು ಅಧಿವೇಶನದಲ್ಲಿ ಘೋಷಣೆ ಮಾಡಿದೆ. ಹೀಗಾಗಿ ನಾವು ಪ್ರತಿ ಗ್ರಾಮಗಳಿಗೆ ಭೇಟಿ ನೀಡಿವ ಮೂಲಕ ಗ್ರಾಮ, ತಾಲೂಕು ಸಭೆಗಳನ್ನು ನಡೆಸಿ ಸರಕಾರದ ದೌರ್ಜನ್ಯ, ನಿರ್ಲಕ್ಷದ ಬಗ್ಗೆ ಹೇಳಿ ಜಾಗೃತಿ ಮೂಡಿಸಲಾಗುವುದು. ಪ್ರತಿ ವಿಧಾನ ಸಭಾ ಕ್ಷೇತ್ರವಾರು ಸಭೆಗಳನ್ನು ನಡೆಸಿ, ಜನರ ಸಲಹೆ ಸೂಚನೆಗಳನ್ನು ಕ್ರೂಡೀಕರಣ ಮಾಡುವ ಮೂಲಕ ಅಂತಿಮವಾಗಿ ಪಂಚಮಸಾಲಿ ಹೋರಾಟದ ಮುಂದಿನ ನಿರ್ಧಾರದ ರೂಪರೇಷಗಳನ್ನು ಸಿದ್ಧಪಡಿಸಲಾಗುವುದು ಎಂದು ಹೇಳಿದರು.
ಅದೇ ದಿನ ಪಂಚಮಸಾಲಿ ಮೀಸಲಾತಿ ಹೋರಾಟದಲ್ಲಿ ಮಾರಣಾಂತಿಕ ಹಲ್ಲೆಗೊಳಗಾದ ವ್ಯಕ್ತಿಗಳನ್ನು ಅಹ್ವಾನಿಸಿ
ಅವರಿಗೆ ಪಂಚಮಸಾಲಿ ಮೀಸಲಾತಿ ವೀರ ಎಂಬ ಬಸವ ರಕ್ಷ ಪತ್ರ ಪ್ರಧಾನ ಮಾಡಲಾಗುವುದು. 15 ನೇ ಕೃಷಿ ಸಂಕ್ರಾಂತಿ ಹಾಗೂ ಪ್ರತಿ ವರ್ಷ ಈ ದಿನ ನೀಡಲಾಗುವ ರಾಷ್ಟ್ರೀಯ ಬಸವ ಪ್ರತಿ ಪ್ರಶಸ್ತಿ ಪ್ರಧಾನ ಕಾರ್ಯಕ್ರಮ ವನ್ನು ಫೆಬ್ರುವರಿ 12ಕ್ಕೆ ಮುಂದೂಡಲಾಗಿ, ಅಂದು ಪಂಚ ಮಸಾಲಿ ಪ್ರತಿಜ್ಞಾ ಕ್ರಾಂತಿ ಐತಿಹಾಸಿಕ ಅಭಿಯಾನಕ್ಕೆ ಮಾತ್ರ ಚಾಲನೆ ನೀಡಲಾಗುವುದು.ಈ ಅಭಿಯಾನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮುದಾಯದವರೆಲ್ಲರೂ ಆಗಮಿಸುವ ಮೂಲಕ ಸಾಕ್ಷಿ ಯಾಗಬೇಕು ಎಂದ ನಾಡಿನ ಜನರಿಗೆ ಕರೆ ನೀಡಿದರು.