ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪಂಚ ಪ್ರಶ್ನೆಗಳಿಗೆ ಈವರೆಗೂ ಉತ್ತರ ಬಂದಿಲ್ಲ...

11:36 AM Aug 05, 2024 IST | Samyukta Karnataka

ನಿಮ್ಮ ಎಸ್ ಐಟಿ ಎಷ್ಟು ನಿಷ್ಪಕ್ಷಪಾತಿ ಎಂದು ತಿಳಿಯಲು ಇದಕ್ಕಿಂತ ಪುರಾವೆ ಬೇಕೆ?

ಬೆಂಗಳೂರು: ನಮ್ಮ ಪಂಚ ಪ್ರಶ್ನೆಗಳಿಗೆ ಸಿದ್ದರಾಮಯ್ಯ ಅವರಿಂದ ಈವರೆಗೂ ಉತ್ತರ ಬಂದಿಲ್ಲ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಹೇಳಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಐದು ಪ್ರಶ್ನೆಗಳ ಸಹಿತ ಪೋಸ್ಟ್ ಮಾಡಿದ್ದು ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಅವರಿಗೆ ಕೇಳಿದ ಪ್ರಶ್ನೆಗಳಿಗೆ ಈವರೆಗೂ ಉತ್ತರ ಬಂದಿಲ್ಲ.

1.) ದೇವನಹಳ್ಳಿ ಬಳಿಯ ಖಾಸಗಿ ಹೋಟೆಲ್ ಒಂದರಲ್ಲಿ ಮಾಜಿ ಸಚಿವ ನಾಗೇಂದ್ರ ಅವರು ನಿಗಮದ ಎಲ್ಲ ಅಧಿಕಾರಿಗಳನ್ನು ಕರೆದು, "ಯಾವುದೇ ಕಾರಣಕ್ಕೂ ನನ್ನ ಹೆಸರನ್ನು ಎಲ್ಲಿಯೂ ಹೇಳಬೇಡಿ. ನಾನು ಅಧಿಕಾರದಲ್ಲಿ ಇದ್ದರೆ ಮಾತ್ರ ನಿಮ್ಮನ್ನೆಲ್ಲ ಬಚಾವ್ ಮಾಡಲು ಸಾಧ್ಯ" ಎಂದು ಎಚ್ಚರಿಕೆ ನೀಡಿದ್ದು ಸತ್ಯವಲ್ಲವೇ ಸಿದ್ದರಾಮಯ್ಯನವರೇ?

2.) ಎಚ್.ಡಿ.ರೇವಣ್ಣ ಅವರ ಕುಟುಂಬ ಸದಸ್ಯರ ಮೇಲೆ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಮಾತ್ರ ಆತುರದಲ್ಲಿ ಎಸ್ ಐಟಿ ರಚನೆ ಮಾಡಿ, ನೋಟೋಸ್ ನೀಡಿ, ವಿಚಾರಣೆ ಮಾಡಿ, ನ್ಯಾಯಾಂಗ ಬಂಧನಕ್ಕೂ ಕಳಿಸುತ್ತೀರಿ. ಆದರೆ ಅದೇ ಆಸಕ್ತಿ ವಾಲ್ಮೀಕಿ ನಿಗಮದ ಹಗರಣದಲ್ಲಿ ಯಾಕೆ ತೋರಿಸುತ್ತಿಲ್ಲ? ಇದು ಯಾವ ಸೀಮೆ ನ್ಯಾಯ ಸಿದ್ದರಾಮಯ್ಯನವರೇ?

3.) ಎಸ್ ಐಟಿ ನಿಮ್ಮ ಕೈಗೊಂಬೆ ಎನ್ನುವುದಕ್ಕೆ ಪರಶುರಾಮ್ ಮತ್ತು ಪದ್ಮನಾಭ್ ಅವರ ನಡುವೆ ನಡೆದಿರುವ ಫೋನ್ ಸಂಭಾಷಣೆಯೇ ಸಾಕ್ಷಿ. "ಸಿಬಿಐ, ಇಡಿ ಆದರೆ ನಮಗೆ ಜೈಲೇ ಗತಿ, ಎಸ್ ಐಟಿ ಆದರೆ ನೋಡಿಕೊಳ್ಳಬಹುದು" ಎಂದು ಪದ್ಮನಾಭ್ ಹೇಳಿರುವುದು ಸತ್ಯವಲ್ಲವೇ ಸಿದ್ದರಾಮಯ್ಯನವರೇ? ನಿಮ್ಮ ಎಸ್ ಐಟಿ ಎಷ್ಟು ನಿಷ್ಪಕ್ಷಪಾತಿ ಎಂದು ತಿಳಿಯಲು ಇದಕ್ಕಿಂತ ಪುರಾವೆ ಬೇಕೆ?

4.) ಎಸ್ ಐಟಿ ರಚನೆಯಾಗಿದ್ದು 31.05.2024 ರಂದು. ಆದರೆ ಎಸ್ ಐಟಿ ರಚನೆಯಾಗಿ 40 ದಿನ ಕಳೆದರೂ ಮಾಜಿ ಸಚಿವ ನಾಗೇಂದ್ರ ಅವರನ್ನಾಗಲಿ, ಶಾಸಕ ಬಸವರಾಜ ದದ್ದಲ್ ಅವರನ್ನಾಗಲಿ ವಿಚಾರಣೆ ಮಾಡಲಿಲ್ಲ. ವಿಚಾರಣೆ ಹೋಗಲಿ ಒಂದು ನೋಟಿಸ್ ಕೂಡಾ ಕೊಡಲಿಲ್ಲ. ಅಂದಮೇಲೆ ನಿಮಗೆ ಸತ್ಯ ಸಂಗತಿ ಹೊರಬರುವುದು ಬೇಕಾಗಿಯೇ ಇರಲಿಲ್ಲ. ಎಸ್ ಐಟಿ ರಚಿಸಿದ್ದೇ ಈ ಹಗರಣ ಮುಚ್ಚಿಹಾಕಲು ಅಲ್ಲವೇ ಸಿದ್ದರಾಮಯ್ಯನವರೇ?

5.) ಇಡಿ ಮಧ್ಯ ಪ್ರವೇಶವಾದ ನಂತರ ಕೇವಲ ನೆಪ ಮಾತ್ರಕ್ಕೆ ವಿಚಾರಣೆಯ ನಾಟಕ ಮಾಡಿದ್ದು ಸುಳ್ಳಾ ಸಿದ್ದರಾಮಯ್ಯನವರೇ? ವಿಚಾರಣೆಗೂ ಮುನ್ನ "ಎಸ್ ಐಟಿ ಮುಂದೆ ನೆಪ ಮಾತ್ರಕ್ಕೆ ಹೋಗಿ ಬಾ, ನಾನು ಅಧಿಕಾರಿಗಳಿಗೆ ಹೇಳಿಕೊಳ್ಳುತ್ತೇನೆ" ಎಂದು ಪ್ರಭಾವಿ ನಾಯಕರೊಬ್ಬರು ನಾಗೇಂದ್ರ ಅವರಿಗೆ ಅಭಯ ಕೊಟ್ಟಿದ್ದು ಸುಳ್ಳೇ ಸಿದ್ದರಾಮಯ್ಯನವರೇ? ಎಂದಿದ್ದಾರೆ.

Tags :
#AnswerMadiSiddaramaiah#cmsiddaramaiah#MUDAScam#ಉತ್ತರ_ಕೊಡಿ_ಸಿದ್ದರಾಮಯ್ಯbjpcongress
Next Article