For the best experience, open
https://m.samyuktakarnataka.in
on your mobile browser.

ಪತ್ರಕರ್ತರಲ್ಲಿ ಓದು ಅಭ್ಯಾಸವೇ ಇಲ್ಲವಾಗುತ್ತಿರುವುದು ಶೋಚನೀಯ

07:37 PM Jul 29, 2024 IST | Samyukta Karnataka
ಪತ್ರಕರ್ತರಲ್ಲಿ ಓದು ಅಭ್ಯಾಸವೇ ಇಲ್ಲವಾಗುತ್ತಿರುವುದು ಶೋಚನೀಯ

ಕಲಬುರಗಿ: ಪತ್ರಕರ್ತರಲ್ಲಿ ಓದು ಅಭ್ಯಾಸವೇ ಇಲ್ಲವಾಗುತ್ತಿರುವುದು ಶೋಚನೀಯ ಎಂದು ಮುಖ್ಯಮಂತ್ರಿಗಳ ಮಾಧ್ಯಮ‌ ಸಲಹೆಗಾರರಾದ ಕೆ.ವಿ. ಪ್ರಭಾಕರ್ ಹೇಳಿದರು.
ಕಾರ್ಯನಿರತ ಪತ್ರಕರ್ತರ ಸಂಘದ ಕಲಬುರಗಿ ಜಿಲ್ಲಾ ಘಟಕ ಆಯೋಜಿಸಿದ್ದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಹಿಪಾಲ ರೆಡ್ಡಿಯವರ "ಬೆಳಕು ತಾಕಿದ ಬೆರಳು", ಮನೋಜಕುಮಾರ ಗುದ್ದಿ ಅವರ "ಗಾಂಧೀಜಿಯ ಹಂತಕ", ಸಂಗಮನಾಥ ರೇವತಗಾಂವ ಅವರ "ಕೊರೋನಾ ಕನವರಿಸುವ ವಚನಗಳು" ಕೃತಿಗಳನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು.
ಮೊಬೈಲು ಗೀಳು ಹೆಚ್ಚಾದ ಬಳಿಕ ಇತರೆ ಕ್ಷೇತ್ರಗಳಂತೆ ಪತ್ರಕರ್ತರೂ‌ ಓದುವ ಅಭ್ಯಾಸದಿಂದ ದೂರವಾಗಿದ್ದಾರೆ. ಏನನ್ನೂ ಓದದೆ ಎಲ್ಲವನ್ನೂ ಬರೆಯುತ್ತೇವೆ ಎನ್ನುವವರು ಹೆಚ್ಚಾಗುತ್ತಿರುವುದು ಪತ್ರಿಕಾ ವೃತ್ತಿಗೆ ತಗುಲಿರುವ ಶಾಪ ಎಂದು ಬೇಸರ ವ್ಯಕ್ತಪಡಿಸಿದರು.
ಪತ್ರಿಕೋದ್ಯಮದಿಂದ ರಾಜಕಾರಣದವರೆಗೆ ಎಲ್ಲಾ ಕ್ಷೇತ್ರಗಳಲ್ಲೂ ಗುಣಮಟ್ಟ ಕಡಿಮೆ ಆಗುತ್ತಿದೆ. ಬಿ.ಆರ್. ಪಾಟೀಲರಂತಹ ಮುತ್ಸದ್ದಿ ರಾಜಕಾರಣಗಳು ಈಗಿನ ತಲೆಮಾರಿನಲ್ಲಿ ಕಾಣಿಸುತ್ತಲೇ ಇಲ್ಲ. ಅಧಿವೇಶನಕ್ಕೆ ಶಾಸಕರುಗಳನ್ನು ಕರೆ ತರುವುದೇ ದೊಡ್ಡ ಸಾಹಸ ಎನ್ನುವಂತಾಗಿದೆ ಎಂದರು. ಅಧ್ಯಯನಶೀಲತೆಯಿಂದ ಯುವ ಜನಾಂಗ ಮತ್ತು ಮಕ್ಕಳು ದೂರವಾಗುತ್ತಿರುವುದು ಎಲ್ಲಾ ಕ್ಷೇತ್ರಗಳ ಗುಣಮಟ್ಟ ಕುಸಿಯಲು ಕಾರಣವಾಗಿದೆ ಎಂದು ಅಭಿಪ್ರಾಯಪಟ್ಟರು.

Tags :