For the best experience, open
https://m.samyuktakarnataka.in
on your mobile browser.

ಪತ್ರಿಕೆ ಪಾತ್ರ ಮಹತ್ವದ್ದು

04:33 PM Aug 23, 2024 IST | Samyukta Karnataka
ಪತ್ರಿಕೆ ಪಾತ್ರ ಮಹತ್ವದ್ದು

ಹುಬ್ಬಳ್ಳಿ: ಸ್ವಾತಂತ್ರ್ಯ ಹೋರಾಟದಲ್ಲಿ ಪತ್ರಿಕೆಗಳ ಮಹತ್ವ ಭಾರತದಲ್ಲಿ ಪೂಜ್ಯ ಮಹಾತ್ಮಾ ಗಾಂಧಿಗೆ ಗೊತ್ತಿತ್ತು. ಹೀಗಾಗಿ ಅವರು ಸ್ವಂತ ಪತ್ರಿಕೆ ಆರಂಭಿಸಿದ್ದರು. ಆ ಪತ್ರಿಕಾ ಶಕ್ತಿ ಕನ್ನಡ ನಾಡಿನಲ್ಲಿ ಏಕಮಾತ್ರ ಪತಿಕೆ ಕಂಡುಕೊಂಡಿದ್ದು ಸಂಯುಕ್ತ ಕರ್ನಾಟಕ ಹಲವಾರು ಸವಾಲು ಎದುರಿಸಿ ಬೆಳೆದು ನಿಂತಿದೆ. ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಸಂಸದ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.

ಅವರು ಇಂದು ಹುಬ್ಬಳ್ಳಿಯಲ್ಲಿ ಸಂಯುಕ್ತ ಕರ್ನಾಟಕ ದಿನಪತ್ರಿಕೆ ವತಿಯಿಂದ ಏರ್ಪಡಿಸಿದ್ದ ಆರೋಗ್ಯ ಹಬ್ಬ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿ ಕರ್ಮವೀರ, ಕಸ್ತೂರಿ ಮ್ಯಾಗಜಿನ್‌ಗಳು ಮನೆ ಮಾತಾಗಿವೆ. ಕರ್ನಾಟಕದ ಏಕೀಕರಣದಲ್ಲಿ ಸಂಯುಕ್ತ ಕರ್ನಾಟಕದ ಪಾತ್ರ ಎಷ್ಟಿತ್ತು ಎಂದರೆ, ಏಕೀಕರಣವನ್ನು ಸಂಯುಕ್ತ ಕರ್ನಾಟಕ ಪ್ರತಿಪಾದಿಸದಿದ್ದರೆ ಏಕೀಕರಣ ಆಗುತ್ತಿರಲಿಲ್ಲ. ಅಷ್ಟು ಮಹತ್ವದ ಪಾತ್ರವಹಿಸಿರುವ ಈ ಪತ್ರಿಕೆ ನಂತರ ಬಂದಿರುವ ಜಾಗತೀಕರಣ, ಉದಾರೀಕರಣದ ಏಳುಬೀಳು ಕಂಡು ಈಗ ಮತ್ತೆ ಪುಟಿದೇಳುವಂತಹ ಸುವರ್ಣಯುಗ ಶತಮಾನೋತ್ಸವ ಆಚರಿಸುತ್ತಿರುವ ಸಂಯುಕ್ತ ಕರ್ನಾಟಕಕ್ಕೆ ಬಂದಿದೆ. ಮುಳುಗುತ್ತಿರುವ ಹಡುಗನ್ನು ಮತ್ತೆ ದಡ ಸೇರಿಸುವ ಕೆಲಸವನ್ನು ಯು.ಬಿ. ವೆಂಕಟೇಶ ಅವರು ಮಾಡುತ್ತಿದ್ದಾರೆ ಎಂದರು.

ಮೊದಲು ಸಾಹಿತಿಗಳು ಪತ್ರಿಕೆ ನಡೆಸಬೇಕು ಎಂದಿತ್ತು ಇವತ್ತಿನ ಕಾಲದಲ್ಲಿ ಎಲ್ಲ ರೀತಿಯ ಆಡಳಿತ ಅವಶ್ಯಕತೆ ಇದೆ ಎಂದು ಯು.ಬಿ.ವೆಂಕಟೇಶ್ ತೋರಿಸಿದ್ದಾರೆ. ಬಹಳ ಕಷ್ಟದಲ್ಲಿತ್ತು. ಅದನ್ನು ಮೇಲೆತ್ತಿದ್ದಾರೆ. ಇನ್ನು ದೊಡ್ಡ ಪ್ರಮಾಣದಲ್ಲಿ ಮಾಡುವ ಇಚ್ಚೆ ಹೊಂದಿದ್ದಾರೆ. ನಮ್ಮ ಅವಧಿಯಲ್ಲಿ ಅವರಿಗೆ 5 ಎಕರೆ ಜಮೀನು ನೀಡಿದ್ದೇವೆ. ಬರುವ ದಿನಗಳಲ್ಲಿ ಒಳ್ಳೆಯ ಭವಿಷ್ಯ ಇದೆ. ಸಾಮಾಜಿಕ ಜವಾಬ್ದಾರಿಯನ್ನೂ ಉತ್ತಮವಾಗಿ ನಿರ್ವಹಿಸುತ್ತ ಬಂದಿದ್ದಾರೆ. ಎಂ.ಎಂ. ಜೋಶಿಯವರು ಇಡೀ ಜೀವನವನ್ನು ಬಡವರಿಗೆ ಬೆಳಕು ನೀಡಿದ್ದಾರೆ. ಬಹಳ ಜನರಿಗೆ ಅವರು ಸಾಕ್ಷಾತ್ ದೇವರಂತೆ ಕಂಡಿದ್ದಾರೆ. ಅವರು ಅತ್ಯಂತ ಸರಳ ವೈದ್ಯರು ಎಂದು ಹೇಳಿದರು.

ಎಲ್ಲರೂ ಸೇರಿ ನಮ್ಮ ಆರೋಗ್ಯ ಸುಧಾರಣೆ ಮಾಡೋಣ. ನಮ್ಮ ಸುತ್ತಲಿರುವವರ ಆರೋಗ್ಯ ಸುಧಾರಣೆ ಮಾಡೋಣ, ಆರೋಗ್ಯ ಆಪ್ ಯಶಸ್ವಿಯಾಗಲಿ ಇದು ಅರಿವು ಮೂಡಿಸುವಂಥದ್ದು, ತಜ್ಞರು ತಮ್ಮ ಅಭಿಪ್ರಾಯ ವ್ಯಕ್ತಪಡಿಸುವಂಥದ್ದು, ಸಂಯುಕ್ತ ಕರ್ನಾಟಕ ಉತ್ತಮ ಕಾರ್ಯ ಮಾಡಿದೆ. ಇದರಿಂದ ಬಹಳ ಸಂತೋಷ ತಂದಿದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಸಂಸದ ಜಗದೀಶ ಶೆಟ್ಟರ್, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ವಿಧಾನ ಸಭೆ ವಿರೋಧ ಪಕ್ಷದ ಉಪನಾಯಕ ಆರವಿಂದ ಬೆಲ್ಲದ, ವಿಧಾನ ಪರಿಷತ್ ಸದಸ್ಯ ಯು.ಬಿ. ವೆಂಕಟೇಶ ಹಾಗೂ ಮತ್ತಿತರರು ಹಾಜರಿದ್ದರು.

Tags :