ಪರಶುರಾಮ ಪ್ರತಿಮೆ ದಿಢೀರ್ ಮಾಯ!
ಉಡುಪಿ: ತೀವ್ರ ಚರ್ಚೆಗೆ ಕಾರಣವಾಗಿದ್ದ ಕಾರ್ಕಳ ಬೈಲೂರು ಪರಶುರಾಮ ಥೀಮ್ ಪಾರ್ಕ್ ನಲ್ಲಿದ್ದ ಪರಶುರಾಮ ಪ್ರತಿಮೆ ದಿಢೀರ್ ಮಾಯವಾಗಿದೆ!
ಈ ಪ್ರದೇಶದಲ್ಲಿ ಕಾಮಗಾರಿ ನಡೆಯುತ್ತಿರುವುದರಿಂದ ಪ್ರವಾಸಿಗರಿಗೆ ನವೆಂಬರ್ ವರೆಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಇದೀಗ ಗುರುವಾರ ರಾತ್ರಿ ದಿಢೀರಾಗಿ ಪರಶುರಾಮ ಪ್ರತಿಮೆ ತೆಗೆಯಲಾಗಿದ್ದು, ಇದು ಹಲವು ಸಂದೇಹ, ಚರ್ಚೆಗೆ ಕಾರಣವಾಗಿದೆ.
ಈ ಬಗ್ಗೆ ಪ್ರತಿಕ್ರಯಿಸಿರುವ ಕಾಂಗ್ರೆಸ್ ಮುಖಂಡ ಶುಭದ ರಾವ್, ನಾವು ಈ ಪ್ರತಿಮೆ ನಕಲಿ ಎಂದು ಈ ಹಿಂದಿನಿಂದಲೂ ಹೇಳುತ್ತಾ ಬಂದಿದ್ದೆವು. ನಮ್ಮ ಮಾತು ಈಗ ನಿಜವಾಗಿದೆ.
ಕಾರ್ಕಳ ಶಾಸಕ ಸುನಿಲ್ ಕುಮಾರ್ ತನ್ನ ಲಾಭಕ್ಕಾಗಿ ಜನರಿಗೆ ದ್ರೋಹ ಮಾಡಿದ್ದಾರೆ. ನಕಲಿ ಪ್ರತಿಮೆಯನ್ನು ನಿರೀಕ್ಷೆಯಂತೆಯೇ ತೆರವು ಮಾಡಲಾಗಿದೆ. ಅದಕ್ಕೆ ಶಾಸಕರು ಉತ್ತರ ಕೊಡಬೇಕು ಎಂದು ಹೇಳಿದ್ದಾರೆ.
ಪರಶುರಾಮ ನಕಲಿ ಎಂದು ಕಾಂಗ್ರೆಸ್ ನಾಯಕರು ಆರೋಪಿಸಿದ್ದರು.
ಜಿಲ್ಲಾ ಉಸ್ತುವಾರಿ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸ್ಥಳಕ್ಕೆ ಭೇಟಿ ನೀಡಿದ್ದರು.
ಚುನಾವಣೆ ಹಿನ್ನೆಲೆಯಲ್ಲಿ ತುರ್ತಾಗಿ ಕಾಮಗಾರಿ ನಡೆಸಲಾಗಿತ್ತು ಎಂದು ಕಾಮಗಾರಿ ನಿರ್ವಹಿಸಿರುವ ನಿರ್ಮಿತಿ ಕೇಂದ್ರದ ಅಧಿಕಾರಿಗಳು ತಿಳಿಸಿದ್ದರು.
ಕಳೆದ ಜನವರಿಯಲ್ಲಿ ಅಂದಿನ ಮುಖ್ಯಮಂತ್ರಿ ಬಸವರಾಜ ಬೊಮ್ನಾಯಿ 33 ಅಡಿ ಎತ್ತರದ ಪರಶುರಾಮ ಪ್ರತಿಮೆಯುಳ್ಳ ಪರಶುರಾಮ ಥೀಂ ಪಾರ್ಕ್ ಉದ್ಘಾಟಿಸಿದ್ದರು.