ಪರ‍್ಯಾಯ ಇಂಧನ: ಆರ್ಥಿಕ ಬೆಳವಣಿಗೆಗೆ ಶಕ್ತಿ
೨೦೭೦ರ ವೇಳೆಗೆ ಇಂಗಾಲ ಹೊರಸೂಸುವಿ ಕೆಯನ್ನು ನಿವ್ವಳ-ಶೂನ್ಯಕ್ಕೆ ತರುವ ಭಾರತದ ಮಹತ್ವಾಕಾಂಕ್ಷಿ ಗುರಿಯು ನವೀಕರಿಸಬಹುದಾದ ಇಂಧನ ಮೂಲಗಳ ವಿಸ್ತರಣೆ ಮತ್ತು ಏಕೀಕರಣದ ಮೇಲೆ ಕೇಂದ್ರೀಕೃತವಾಗಿದೆ. ಇದು ಸುಸ್ಥಿರ ಅಭಿವೃದ್ಧಿ ಪಥಕ್ಕೆ ಕೊಂಡೊಯ್ಯುವ ದೇಶದ ಬದ್ಧತೆಯ ಪ್ರಮುಖ ಅಂಶವಾಗಿದೆ.
ವೇಗವಾಗಿ ವಿಸ್ತರಿಸುತ್ತಿರುವ ಜನಸಂಖ್ಯೆಯೊಂದಿಗೆ ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿರುವ ಭಾರತವು, ಇಂಗಾಲದ ಹೊರಸೂಸುವಿಕೆ ಕಡಿಮೆ ಮಾಡುವ ಕಾಲಘಟ್ಟದಲ್ಲೇ ಹೆಚ್ಚುತ್ತಿರುವ ಇಂಧನ ಬಳಕೆಯನ್ನು ಎದುರಿಸುವ ಸಂಯೋಜಿತ ಸವಾಲನ್ನು ಸಹ ಎದುರಿಸುತ್ತಿದೆ. ನವೀಕರಿಸಬಹುದಾದ ಇಂಧನವು ಈ ಅಂಶಗಳನ್ನು ಸಮತೋಲನಗೊಳಿಸಲು ಅತ್ಯಂತ ಕಾರ್ಯಸಾಧು ಪರಿಹಾರವಾಗಿದೆ.
ಹವಾಮಾನ ಬದಲಾವಣೆಯನ್ನು ನಿಯಂತ್ರಣಕ್ಕೆ ತರುವ ಭಾರತದ ಸಂಕಲ್ಪವನ್ನು ಗ್ಲಾಸ್ಗೋದಲ್ಲಿ ಜರುಗಿದ ಸಿಒಪಿ೨೬ ಶೃಂಗಸಭೆಯ ಘೋಷಣೆಯಲ್ಲಿ ಒತ್ತಿ ಹೇಳಲಾಯಿತು. ಅಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು “ಪಂಚಾಮೃತ” ಉಪಕ್ರಮದ ಅಡಿ, ಪ್ರಮುಖ ಪಂಚ ಗುರಿಗಳನ್ನು ನೀಡಿದರು. ಅದರಲ್ಲಿ ನವೀಕರಿಸಬಹುದಾದ ಇಂಧನವು ನಿರ್ಣಾಯಕ ಅಂಶವಾಗಿದೆ. ದೇಶವು ೨೦೩೦ರ ವೇಳೆಗೆ ೫೦೦ ಗಿಗಾವ್ಯಾಟ್ ಉರವಲುಯೇತರ(ನಾನ್-ಫಾಸಿಲ್) ಇಂಧನ ಉತ್ಪಾದನೆ ಸಾಮರ್ಥ್ಯ ಸಾಧಿಸಲು ಶಪಥ ಅಥವಾ ವಾಗ್ದಾನ ಮಾಡಿತು.
ವಾಸ್ತವವೆಂದರೆ, ಭಾರತವು ಅದೇ ವರ್ಷದಲ್ಲಿ ನವೀಕರಿಸಬಹುದಾದ ಇಂಧನ ಮೂಲಗಳಿಂದ ಶೇಕಡ ೫೦ರಷ್ಟು ಇಂಧನ ಅಗತ್ಯತೆಗಳನ್ನು ಪೂರೈಸಿತು. ಸೌರಶಕ್ತಿಯ ಉತ್ಪಾದನೆ ಶೇಕಡ ೫೮ರಷ್ಟು ಮತ್ತು ಪವನಶಕ್ತಿಯ ಉತ್ಪಾದನೆ ಶೇಕಡ ೨೦ರಷ್ಟು ಆಯಿತು. ಈ ಗುರಿಗಳು ಭಾರತದ ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು ೧ ಶತಕೋಟಿ ಟನ್‌ಗಳಷ್ಟು ಕಡಿಮೆ ಮಾಡುವ ಮತ್ತು ೨೦೩೦ರ ವೇಳೆಗೆ ಭಾರತದ ಆರ್ಥಿಕತೆಯಲ್ಲಿ ಇಂಗಾಲ ತೀವ್ರತೆಯನ್ನು ೪೫% ಕಡಿಮೆ ಮಾಡುವ ದೂರದೃಷ್ಟಿಯನ್ನು ಹೊಂದಿದೆ.
ಪ್ರಧಾನ ಮಂತ್ರಿ ಅವರ ದಿಟ್ಟ ನಾಯಕತ್ವದ ಸರ್ಕಾರವು ನವೀಕರಿಸಬಹುದಾದ ಇಂಧನ ವಲಯದಲ್ಲಿ ಕಳೆದ ೧೦ ವರ್ಷಗಳಲ್ಲಿ ಪರಿವರ್ತನೀಯ ಬದಲಾವಣೆಗಳಿಗೆ ತೆರೆದುಕೊಂಡಿರುವ ಒಂದು ವಲಯವಾಗಿದೆ.
ಭಾರತವು ನವೀಕರಿಸಬಹುದಾದ ಇಂಧನ ಸ್ಥಾಪಿತ ಸಾಮರ್ಥ್ಯದಲ್ಲಿ ಜಾಗತಿಕವಾಗಿ ೪ನೇ ಸ್ಥಾನಕ್ಕೆ ಏರಲು ಸಹಾಯ ಮಾಡಿದೆ. ಪವನಶಕ್ತಿ ಸ್ಥಾಪಿತ ಸಾಮರ್ಥ್ಯದಲ್ಲಿ ೪ನೇ ಸ್ಥಾನ ಮತ್ತು ಸೌರಶಕ್ತಿ ಉತ್ಪಾದನೆ ಸಾಮರ್ಥ್ಯದಲ್ಲಿ ವಿಶ್ವದಲ್ಲೇ ೫ನೇ ಸ್ಥಾನದಲ್ಲಿದೆ. ಸೌರಶಕ್ತಿ ಉತ್ಪಾದನೆ ಸಾಮರ್ಥ್ಯದಲ್ಲಿ ಭಾರತವು ೨೦೧೪ರ ವರೆಗೆ ಕೇವಲ ೧೨.೫ ಗಿಗಾವ್ಯಾಟ್ ಉತ್ಪಾದನೆ ನಡೆಸಿತ್ತು. ಆದರೆ, ಮೋದಿ ಸರ್ಕಾರದ ಅಡಿ, ನಾವು ೨೦೨೪ ಮೇ ತಿಂಗಳವರೆಗೆ ಅನ್ವಯವಾಗುವಂತೆ, ೮೪ ಗಿಗಾವ್ಯಾಟ್ ಗಿಂತ ಹೆಚ್ಚಿನ ಉತ್ಪಾದನೆ ಸಾಧಿಸಿದ್ದೇವೆ. ಕೇವಲ ೧೦ ವರ್ಷಗಳಲ್ಲಿ ಉತ್ಪಾದನೆ ೩೦ ಪಟ್ಟು ಹೆಚ್ಚಾಗಿದೆ. ಪವನಶಕ್ತಿಯ ಸ್ಥಾಪಿತ ಸಾಮರ್ಥ್ಯದಲ್ಲಿ ಸಹ ೧೦ ವರ್ಷಗಳಲ್ಲಿ ೨೧ ಗಿಗಾವ್ಯಾಟ್ ನಿಂದ ೪೬ ಗಿಗಾವ್ಯಾಟ್ ಗೆ ಅಂದರೆ, ೨.೨ ಪಟ್ಟು ಭಾರಿ ಜಿಗಿತ ಕಂಡಿದ್ದೇವೆ. ನವೀಕರಿಬಸಬಹದಾದ ಇಂಧನಗಳು ಜನರಿಗೆ ಕೈಗೆಟಕುವ ದರದಲ್ಲಿ ಸಿಗುವಂತೆ ಮಾಡುವ ಉದ್ದೇಶದಿಂದ, ಗ್ರಿಡ್-ಸಂಪರ್ಕಿತ ಸೌರವಿದ್ಯುತ್ ಸ್ಥಾವರಗಳಿಗೆ ೨೦೧೦-೧೧ ರಲ್ಲಿ ಇದ್ದ ಬೆಲೆ ೧೦.೯೫ ರೂ.ನಿಂದ ೨೦೨೩-೨೪ರ ಅವಧಿಯಲ್ಲಿ ೨.೬೦ ರೂ.ಗೆ ಇಳಿಕೆ ಮಾಡಿ, ೭೬% ಸುಂಕ ತಗ್ಗಿಸಲಾಗಿದೆ. ನವೀಕರಿಸಬಹುದಾದ ಇಂಧನ ವಲಯನ್ನು ಮುಂಚೂಣಿಗೆ ತರಲು ಪ್ರಧಾನ ಮಂತ್ರಿ ಮೋದಿ ಅವರು ಮುನ್ನಡೆದು, ರಾಜಮಾರ್ಗ ತೋರಿದ್ದಾರೆ. ಅದು ಈಗ ದೇಶಕ್ಕೆ ಸಮೃದ್ಧ ಲಾಭಾಂಶ ತರುತ್ತಿದೆ. ಇದು ಆತ್ಮನಿರ್ಭರ ಭಾರತ ನಿರ್ಮಾಣಕ್ಕೆ ಕಾರಣವಾಗುತ್ತದೆ.
೧೦ ವರ್ಷಗಳಲ್ಲಿ ಇಂಧನದ ಅಗತ್ಯ ಪೂರೈಸಲು ಹೊಸ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಅಭಿವೃದ್ಧಿ ಮತ್ತು ನಿಯೋಜನೆಯು ಕಾರ್ಯಾಚರಣೆ ಮಾದರಿಯಲ್ಲಿದೆ. ದೇಶದಲ್ಲಿ ನವೀಕರಿಸಬಹುದಾದ ಇಂಧನದ ೨೦೦ ಗಿಗಾವ್ಯಾಟ್ ಸ್ಥಾಪಿತ ಸಾಮರ್ಥ್ಯದ ಸುಮಾರು ೫೫% ಸೌರಶಕ್ತಿಯಿಂದಲೇ ಬರುತ್ತದೆ. ಸುಮಾರು ೩೦% ಮತ್ತೊಂದು ಗಣನೀಯ ಭಾಗವು ಪವನಶಕ್ತಿಯಿಂದ ಬರುತ್ತದೆ.
ಸೌರ ಮಾಡ್ಯೂಲ್‌ಗಳ ದೇಶೀಯ ಉತ್ಪಾದನೆ ಹೆಚ್ಚಿಸಲು ಮತ್ತು ಆಮದುಗಳ ಮೇಲಿನ ಅವಲಂಬನೆ ಕಡಿಮೆ ಮಾಡಲು ಭಾರತವು ಉತ್ಪಾದನೆ ಸಂಪರ್ಕಿತ ಉತ್ತೇಜನಾ(ಪಿಎಲ್‌ಐ) ಯೋಜನೆಯಂತಹ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ. ಇದರ ಜತೆಗೆ, ಹಸಿರು ಹೈಡ್ರೋಜನ್‌ನಲ್ಲಿ ಹಸಿರು ಹೈಡ್ರೋಜನ್ ಪರಿವರ್ತನೆಗಾಗಿ ಕಾರ್ಯತಂತ್ರ ಮಧ್ಯಸ್ಥಿಕೆಗಳು ಕಾರ್ಯಕ್ರಮವು ಎಲೆಕ್ಟ್ರೋಲೈಸರ್‌ಗಳ ಉತ್ಪಾದನೆ ಮತ್ತು ಹಸಿರು ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹ ನೀಡುತ್ತದೆ. ಭಾರತದ ಹಸಿರು ಹೈಡ್ರೋಜನ್ ಕಥೆಯೇ ಸ್ಫೂರ್ತಿದಾಯಕವಾಗಿದೆ. ಭಾರತವು ತನ್ನದೇ ಆದ ಲಸಿಕೆ ಉತ್ಪಾದಿಸುವ ಮೂಲಕ ಕೋವಿಡ್ ಲಸಿಕೆ ಸಾಧನೆಯಂತೆ, ಭಾರತವು ಹಸಿರು ಹೈಡ್ರೋಜನ್ ಉಪಕ್ರಮಗಳನ್ನು ಪ್ರವರ್ತಿಸುತ್ತಿದೆ. ಇದು ಮತ್ತೆ ಕೆಲಸ ಮಾಡುತ್ತಿರುವ ಮೋದಿ ಮ್ಯಾಜಿಕ್!
ರಾಷ್ಟ್ರೀಯ ಹಸಿರು ಹೈಡ್ರೋಜನ್ ಮಿಷನ್, ಪಿಎಂ-ಸೂರ್ಯ ಘರ್ ಮುಫ್ತ್ ಬಿಜ್ಲಿ ಯೋಜನೆ, ಪಿಎಂ-ಕುಸುಮ್ ಯೋಜನೆ ಮತ್ತು ಕಡಲಾಚೆಯ ಪವನಶಕ್ತಿ ಯೋಜನೆಗಳು ಸೇರಿದಂತೆ ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತವು ಹಲವಾರು ಪ್ರಮುಖ ಯೋಜನೆಗಳನ್ನು ಮುನ್ನಡೆಸುತ್ತಿದೆ. ವಾಸ್ತವವಾಗಿ, ದೇಶದಲ್ಲಿ ಇವಿ(ವಿದ್ಯುಚ್ಛಾಲಿತ ವಾಹನಗಳು) ಮೂಲಸೌಕರ್ಯ ಅಳವಡಿಸಿಕೊಳ್ಳುವ ವಿಷಯಕ್ಕೆ ಬಂದಾಗ, ಉರವಲು ಇಂಧನ ಮೂಲಗಳನ್ನು ಬಳಸದೆ, ಭವಿಷ್ಯದಲ್ಲಿ ವಿದ್ಯುಚ್ಛಾಲಿತ ವಾಹನಗಳನ್ನು ಚಾರ್ಜ್ ಮಾಡಲು ನವೀಕರಿಸಬಹುದಾದ ಮೂಲಗಳನ್ನು ಮಾತ್ರ ಬಳಸುವುದಕ್ಕೆ ದಾರಿ ಮಾಡಿಕೊಡಲು ಪ್ರಧಾನಿ ಉತ್ಸುಕರಾಗಿದ್ದಾರೆ. ಪ್ರಧಾನ ಮಂತ್ರಿ ಸೂರ್ಯ ಘರ್ ಯೋಜನೆಯು ನಾಗರಿಕರು ತಮ್ಮ ವಾಹನಗಳಿಗೆ ಶಕ್ತಿ ತುಂಬಲು ಮೇಲ್ಛಾವಣಿಯ ಸೌರಶಕ್ತಿ ಬಳಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಭಾರತದ ನವೀಕರಿಸಬಹುದಾದ ಇಂಧನ ವಲಯದ ಪ್ರಯಾಣವನ್ನು ಪಟ್ಟಿ ಮಾಡುತ್ತಿರುವ ಮಾಪನ, ಅಳತೆ ಮತ್ತು ವೇಗಕ್ಕೆ ಸರಿಸಾಟಿಯಿಲ್ಲ. ಪ್ರಧಾನಿ ಮೋದಿ ಅವರ ನೇರ ಹಸ್ತಕ್ಷೇಪದ ಪರಿಣಾಮ ಇದಾಗಿದೆ. ಈಗ, ಭಾರತವು ಈ ಜಾಗದಲ್ಲಿ ಕೇವಲ ಆಟಗಾರನಾಗದೇ ಈ ವಲಯವನ್ನು ಮುನ್ನಡೆಸುತ್ತಿದ್ದೇವೆ! ಕಳೆದ ೧೦ ವರ್ಷಗಳಲ್ಲಿ ನಮಗೆ ಜಾಗತಿಕ ಮನ್ನಣೆ ನೀಡಿದೆ.
ಇಂಡಿಯಾವು ಸರಿಯಾದ ಶಬ್ದಗಳನ್ನೇ ಮಾಡುತ್ತಿದೆ. ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯವು RE-INVEST-2024 ಸಮ್ಮೇಳನ ಆಯೋಜಿಸಲು ಇದು ಕಾರಣವಾಗಿದೆ. ೨೦೨೪ರ ಸೆಪ್ಟೆಂಬರ್ ೧೬-೧೮ರಂದು ಗುಜರಾತ್‌ನ ಗಾಂಧಿನಗರದಲ್ಲಿ ಇದನ್ನು ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ. ಈ ವಲಯದ ಉತ್ತಮ ಅಭ್ಯಾಸಗಳ ಕಲಿಕೆಗಳನ್ನು ವಿನಿಮಯ ಮಾಡಿಕೊಳ್ಳುವ ಮತ್ತು ೨೦೩೦ರ ವೇಳೆಗೆ ನಾವು ೫೦೦ ಗಿಗಾವ್ಯಾಟ್ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯ ಸಾಧಿಸುವತ್ತ ಸಾಗುತ್ತಿರುವಾಗ ಹೊಸ ಮೈತ್ರಿಗಳನ್ನು ರೂಪಿಸುವ ಗುರಿಯೊಂದಿಗೆ ಜರ್ಮನಿ, ಡೆನ್ಮಾರ್ಕ್, ಆಸ್ಟ್ರೇಲಿಯಾ, ನಾರ್ವೆ ಮತ್ತು ಯುಎಇಯಿಂದ ಪ್ರತಿನಿಧಿಗಳು ಸಮ್ಮೇಳನಗಳು ಭಾಗವಹಿಸುವರು.
ಈ ಕಾರ್ಯಕ್ರಮದಲ್ಲಿ ವಿವಿಧ ರಾಜ್ಯ ಸರ್ಕಾರಗಳು, ಬ್ಯಾಂಕುಗಳು, ಹಣಕಾಸು ಸಂಸ್ಥೆಗಳು, ಹೂಡಿಕೆದಾರರು ಮತ್ತು ಖಾಸಗಿ ಪಾಲುದಾರರು ತಮ್ಮ ಬದ್ಧತೆಗಳನ್ನು ಶಪಥ್-ಪಾತ್ರ ರೂಪದಲ್ಲಿ ನವೀಕರಿಸಬಹುದಾದ ಇಂಧನ ವಲಯಕ್ಕೆ ತಮ್ಮ ಯೋಜನೆಗಳು ಮತ್ತು ಗುರಿಗಳನ್ನು ನಿರ್ದಿಷ್ಟಪಡಿಸುತ್ತಾರೆ.
ನವೀಕರಿಸಬಹುದಾದ ಇಂಧನ ಖರೀದಿ ಮತ್ತು ಉತ್ಪಾದನೆ ಬಾಧ್ಯತೆಗಳ ಮೂಲಕ ನವೀಕರಿಸಬಹುದಾದ ಇಂಧನ ಬಳಕೆಯನ್ನು ಸರ್ಕಾರ ಉತ್ತೇಜಿಸುತ್ತಿದೆ.
ಭಾರತವು ೨೦೩೦ರ ವೇಳೆಗೆ ಉರವಲು ರಹಿತ ಇಂಧನ ಉತ್ಪಾದಿಸುವ ಇಂಧನ ಸಂಪನ್ಮೂಲಗಳಿಂದ ತನ್ನ ಸಂಚಿತ ವಿದ್ಯುತ್ ಶಕ್ತಿಯ ಸ್ಥಾಪಿತ ಸಾಮರ್ಥ್ಯವನ್ನು ೫೦% ಸಾಧಿಸಲು ಬಯಸುತ್ತದೆ. ಸರ್ಕಾರವು ಪ್ರತಿವರ್ಷ ೫೦ ಗಿಗಾವ್ಯಾಟ್ ಸಾಮರ್ಥ್ಯದ ಇಂಧನ ಹರಾಜು ನಡೆಸಲು ಯೋಜಿಸಿದೆ. ನವೀಕರಿಸಬಹುದಾದ ಸೌರ, ಪವನ, ಸೌರ-ಪವನ ಹೈಬ್ರಿಡ್, ಆರ್ ಟಿ ಸಿ ಆರ್ ಇ ಇಂಧನ ಇತ್ಯಾದಿಗಳಿಗೆ ಇಂಧನ ಅನುಷ್ಠಾನ(ಇಂಪ್ಲಿಮೆಂಟಿಂಗ್) ಏಜೆನ್ಸಿಗಳಾಗಿಎನ್ ಟಿಪಿಸಿ ನಿಯಮಿತ ಕಂಪನಿಗಳಿಗೆ ಬಿಡ್‌ಗಳನ್ನು ಕರೆಯಲು ಸೂಚಿಸಿದೆ.
ಬೆಳವಣಿಗೆ ಕಾಣುತ್ತಿರುವ ನವೀಕರಿಸಬಹುದಾದ ಇಂಧನ ಯೋಜನೆಗಳಿಗೆ ಗಮನಾರ್ಹ ಹೂಡಿಕೆಗಳು ಬೇಕಾಗುತ್ತವೆ. ಸೌರ ಮತ್ತು ಪವನಶಕ್ತಿ ವೆಚ್ಚವು ಗಣನೀಯವಾಗಿ ಕಡಿಮೆಯಾಗಿದೆಯಾದರೂ, ಪ್ರಮುಖ ಯೋಜನೆಗಳಿಗೆ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಹಣಕಾಸು ಒದಗಿಸುವ ಅಗತ್ಯವಿದೆ.
ಭಾರತ ಮತ್ತು ಫ್ರಾನ್ಸ್‌ನಿಂದ ಸಂಸ್ಥಾಪಿತವಾದ ಇಂಟರ್ ನ್ಯಾಷನಲ್ ಸೋಲಾರ್ ಅಲೈಯನ್ಸ್ ಯಂತಹ ಉಪಕ್ರಮಗಳು ವಿಶ್ವಾದ್ಯಂತ, ವಿಶೇಷವಾಗಿ ಅಭಿವೃದ್ಧಿಶೀಲ ರಾಷ್ಟ್ರಗಳಲ್ಲಿ ಸೌರಶಕ್ತಿ ಬಳಕೆ ಉತ್ತೇಜಿಸಲು ಪ್ರಯತ್ನಿಸುತ್ತವೆ.
ಇದಲ್ಲದೆ, ವಿದೇಶಿ ಹಣಕಾಸು ಸಂಸ್ಥೆಗಳು ಮತ್ತು ಹವಾಮಾನ ನಿಧಿಗಳು ಭಾರತದ ನವೀಕರಿಸಬಹುದಾದ ಇಂಧನ ರೂಪಾಂತರಕ್ಕೆ ಪ್ರಮುಖ ಬೆಂಬಲ ನೀಡುತ್ತಿವೆ. ಅಮೆರಿಕ, ಜರ್ಮನಿ ಮತ್ತು ಜಪಾನ್‌ನಂತಹ ದೇಶಗಳೊಂದಿನ ಸಹಭಾಗಿತ್ವವು ಭಾರತಕ್ಕೆ ಅತ್ಯಾಧುನಿಕ ತಂತ್ರಜ್ಞಾನಗಳಿಗೆ ಪ್ರವೇಶ ಪಡೆಯಲು ಅವಕಾಶ ಮಾಡಿಕೊಟ್ಟಿದೆ. ನವೀಕರಿಸಬಹುದಾದ ಇಂಧನ ವಲಯವು ಅಂತಾರಾಷ್ಟ್ರೀಯ ಹೂಡಿಕೆ ಆಕರ್ಷಿಸುತ್ತಿದೆ. ಅಂದಾಜಿನ ಪ್ರಕಾರ, ಭಾರತವು ೨೦೩೦ರ ವೇಳೆಗೆ ೫೦೦ ಗಿಗಾವ್ಯಾಟ್ ನವೀಕರಿಸಬಹುದಾದ ಇಂಧನ ಮತ್ತು ಉರವಲು ರಹಿತ ಇಂಧನ ಉತ್ಪಾದನೆ ಗುರಿ ಸಾಧಿಸಲು ಸರಿಸುಮಾರು ೩೦ ಲಕ್ಷ ಕೋಟಿ ರೂ. ಮೌಲ್ಯದ ಹೂಡಿಕೆಯ ಅಗತ್ಯವಿದೆ.
ನವೀಕರಿಸಬಹುದಾದ ಇಂಧನ ಯೋಜನೆಗಳು, ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಉದ್ಯೋಗಗಳನ್ನು ಸೃಷ್ಟಿಸುತ್ತವೆ, ಸ್ಥಳೀಯ ಆರ್ಥಿಕ ಬೆಳವಣಿಗೆ ಉತ್ತೇಜಿಸುತ್ತವೆ.
ನವೀಕರಿಸಬಹುದಾದ ಇಂಧನವು ವಾಯುಮಾಲಿನ್ಯ ಮತ್ತು ಸಾರ್ವಜನಿಕ ಆರೋಗ್ಯ ಕಾಳಜಿಗಳನ್ನು ಪರಿಹರಿಸಲು ವಿಶೇಷವಾಗಿ ಮುಖ್ಯವಾಗಿದೆ. ಇದು ಅನೇಕ ಭಾರತೀಯ ನಗರಗಳಲ್ಲಿ ಗಂಭೀರ ಸಮಸ್ಯೆಯಾಗಿದೆ. ಸ್ವಚ್ಛ ಇಂಧನ ಮೂಲಗಳಿಗೆ ಪರಿವರ್ತನೆ ಆಗುವುದರಿಂದ ಗಾಳಿಯ ಗುಣಮಟ್ಟ ಸುಧಾರಿಸುತ್ತದೆ. ಇದು ಉತ್ತಮ ಆರೋಗ್ಯ ಫಲಿತಾಂಶಗಳನ್ನು ನೀಡುತ್ತದೆ.
ಪ್ರಧಾನಿ ಮೋದಿ ಅವರ ಸದೃಢ ನಾಯಕತ್ವದಲ್ಲಿ, ಭಾರತವು ತನ್ನ ಆರ್ಥಿಕ ಅಭಿವೃದ್ಧಿಯಲ್ಲಿ ರಾಜಿ ಮಾಡಿಕೊಳ್ಳದೆ ನಿವ್ವಳ ಶೂನ್ಯ ಇಂಗಾಲ ಹೊರಸೂಸುವಿಕೆಯ ಗುರಿಯತ್ತ ಕಳೆದ ೧೦ ವರ್ಷಗಳಲ್ಲಿ ಗಮನಾರ್ಹ ಪ್ರಗತಿ ಸಾಧಿಸಿದೆ.
ನಮ್ಮ ಸ್ಥಾಪಿತ ನವೀಕರಿಸಬಹುದಾದ ಇಂಧನ ಸಾಮರ್ಥ್ಯವು ೨೦೧೪ ಮಾರ್ಚ್ ನಲ್ಲಿ ಇದ್ದ ೭೫.೫೨ ಗಿಗಾವ್ಯಾಟ್ ನಿಂದ ಈಗ ೨೦೩ ಗಿಗಾವ್ಯಾಟ್ ಗಿಂತ ಹೆಚ್ಚಿದೆ. ಇದು ೧೦ ವರ್ಷಗಳಲ್ಲಿ ಅಸಾಧಾರಣವಾದ ೧೬೫% ಹೆಚ್ಚಳವಾಗಿದೆ.
ನವೀಕರಿಸಬಹುದಾದ ಇಂಧನಕ್ಕೆ ಸಾಗುವ ಭಾರತದ ಪರಿವರ್ತನೆಯು ಅದರ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಮಹತ್ವಾಕಾಂಕ್ಷೆಗೆ ಮತ್ತು ಹವಾಮಾನ ಕ್ರಿಯೆಯಲ್ಲಿ ಜಾಗತಿಕ ಸರದಾರನಾಗುವ ಪಾತ್ರಕ್ಕೆ ಪ್ರಮುಖವಾಗಿದೆ. ೨೦೭೦ರ ವೇಳೆಗೆ ನಿವ್ವಳ-ಶೂನ್ಯ ಇಂಗಾಲ ಹೊರಸೂಸುವಿಕೆ ಭವಿಷ್ಯದ ಭಾರತದ ದೃಷ್ಟಿಯನ್ನು ಸಾಕಾರಗೊಳಿಸಲು ಪ್ರಮುಖವಾಗಿದೆ.
ನವೀಕರಿಸಬಹುದಾದ ಇಂಧನವು ಒಂದು ಸಾಮೂಹಿಕ ಆಂದೋಲನವಾಗಬೇಕೆಂದು ನಾವು ಬಯಸುತ್ತೇವೆ. ಅಲ್ಲಿ ಸಾಮಾನ್ಯ ನಾಗರಿಕರು ಸಹ ಬ್ರ‍್ಯಾಂಡ್ ಅಂಬಾಸಿಡರ್ ಆಗಿರುತ್ತಾರೆ. ಏಕೆಂದರೆ ಇದು ಭವಿಷ್ಯದ ಪೀಳಿಗೆಯ ಸುರಕ್ಷತೆ ಒಳಗೊಂಡಿದೆ.
ನವೀಕರಿಸಬಹುದಾದ ಇಂಧನ ಕ್ಷೇತ್ರದ ಎಲ್ಲಾ ಪಾಲುದಾರರು ಮತ್ತು ಹೂಡಿಕೆದಾರರು, ರಾಜ್ಯ ಸರ್ಕಾರಗಳು ಮತ್ತು ಅಂತಾರಾಷ್ಟ್ರೀಯ ಪಾಲುದಾರರು ಈ ಪ್ರಮುಖ REINVEST ಶೃಂಗಸಭೆಯಲ್ಲಿ ಭಾಗವಹಿಸುವಂತೆ ನಾನು ಕೋರುತ್ತೇನೆ. ಇಲ್ಲಿ ಮುಖ್ಯಮಂತ್ರಿಗಳ ಸಮಗ್ರ ಸಭೆ, ಸಿಇಒ ದುಂಡುಮೇಜಿನ ಸಭೆ ಮತ್ತು ಹಲವಾರು ರಾಜ್ಯಗಳು, ದೇಶಗಳು ಮತ್ತು ತಾಂತ್ರಿಕ ಸೇರಿದಂತೆ ೪೪ ಅಧಿವೇಶನಗಳು ಜರುಗಲಿವೆ. ಕಲಾಪಗಳು, ಸಂವಾದಗಳು, ಆರ್ಷಕ ವಿಚಾರ ವಿನಿಮಯಗಳು ಇಲ್ಲಿ ನಡೆಯಲಿವೆ.ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ಮತ್ತು ವೇಗವಾಗಿ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರವಾಗಿ, ಭಾರತದ ನವೀಕರಿಸಬಹುದಾದ ಇಂಧನ ಪ್ರಯಾಣವು ಸುಸ್ಥಿರತೆಯ ರಾಜಮಾರ್ಗದಲ್ಲಿ ಸಾಗಲು ಇತರೆ ಉದಯೋನ್ಮುಖ ಆರ್ಥಿಕತೆಗಳಿಗೆ ಮಾದರಿಯಾಗಿ ಕಾರ್ಯ ನಿರ್ವಹಿಸುತ್ತದೆ.