For the best experience, open
https://m.samyuktakarnataka.in
on your mobile browser.

ಪಾತ್ರ ಇದೆಯೂ ಇಲ್ಲವೋ ಎಂದು ನ್ಯಾಯಾಲಯ ನಿರ್ಧಾರ ಮಾಡಲಿದೆ

04:06 PM May 28, 2024 IST | Samyukta Karnataka
ಪಾತ್ರ ಇದೆಯೂ ಇಲ್ಲವೋ ಎಂದು ನ್ಯಾಯಾಲಯ ನಿರ್ಧಾರ ಮಾಡಲಿದೆ

ಬೆಂಗಳೂರು: ಅವ್ಯವಹಾರದಲ್ಲಿ ತಮ್ಮ ಪಾತ್ರ ಇದೆಯೂ ಇಲ್ಲವೋ ಎಂದು ನಿರ್ಧಾರ ಮಾಡಬೇಕಾಗಿರೋದು ನ್ಯಾಯಾಲಯ ಎಂದು
ವಾಲ್ಮೀಕಿ ನಿಗಮದಲ್ಲಿ ನಡೆದಿರುವ 87 ಕೋಟಿ ಭ್ರಷ್ಟಾಚಾರದ ಬಗ್ಗೆ ಸ್ವತಃ ಸಚಿವರೇ ಒಪ್ಪಿಕೊಂಡಿದ್ದಾರೆ. ಸಚಿವ ಬಿ ನಾಗೇಂದ್ರ ಅವರೇ, ತಾವೇ ಒಪ್ಪಿಕೊಂಡಂತೆ ಈ ಹಗರಣ ನಡೆದಿರುವುದು ಸತ್ಯ. ಆದರೆ ಈ ಅವ್ಯವಹಾರದಲ್ಲಿ ತಮ್ಮ ಪಾತ್ರ ಇದೆಯೂ ಇಲ್ಲವೋ ಎಂದು ನಿರ್ಧಾರ ಮಾಡಬೇಕಾಗಿರೋದು ನ್ಯಾಯಾಲಯ. ತಮಗೆ ತಾವೇ ಕ್ಲೀನ್ ಚಿಟ್ ಕೊಟ್ಟುಕೊಳ್ಳಲು ಇದು ತಮ್ಮ ಮನೆಯ ಆಸ್ತಿಯಲ್ಲ. ಪರಿಶಿಷ್ಟ ಪಂಗಡಗಳ ಜನರ ಕಲ್ಯಾಣಕ್ಕೆ ಸೇರಬೇಕಾದ ಹಣ. ಸಿಎಂ ಸಿದ್ದರಾಮಯ್ಯನವರೇ, ಮೃತ ಅಧಿಕಾರಿ ಡೆತ್ ನೋಟ್ ನಲ್ಲಿ ಸಚಿವರ ಹೆಸರು ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡು 24 ಗಂಟೆ ಕಳೆದರೂ ಇನ್ನೂ ಸಚಿವರ ರಾಜೀನಾಮೆ ಪಡೆದುಕೊಂಡಿಲ್ಲ. ಸಚಿವರ ರಾಜೀನಾಮೆ ಕೇಳಿದರೆ ತಮ್ಮ ಕುರ್ಚಿಯೇ ಅಲುಗಾಡಬಹುದು ಎಂಬ ಭಯವೇ? ಅಥವಾ ಈ ಭ್ರಷ್ಟಾಚಾರದಲ್ಲಿ ತಮ್ಮ ಪಾಲೂ ಇದೆಯೇ? ಎಂದು ಪ್ರಶ್ನಿಸಿದ್ದಾರೆ.