For the best experience, open
https://m.samyuktakarnataka.in
on your mobile browser.

ಪಾಪ...ಪ್ರಲ್ಹಾದ ಜೋಶಿ ಪಾತ್ರ ಏನೂ ಇಲ್ಲ: ಅವರು ತುಂಬಾ ಒಳ್ಳೆಯವರು

09:02 PM Oct 19, 2024 IST | Samyukta Karnataka
ಪಾಪ   ಪ್ರಲ್ಹಾದ ಜೋಶಿ ಪಾತ್ರ ಏನೂ ಇಲ್ಲ  ಅವರು ತುಂಬಾ ಒಳ್ಳೆಯವರು

ಗೋಪಾಲ್ ಜೋಶಿ ಪ್ರಕರಣದ ದೂರುದಾರೆ ಸುನೀತಾ ಚವ್ಹಾಣ ಸ್ಪಷ್ಟನೆ

ಹುಬ್ಬಳ್ಳಿ: ಗೋಪಾಲ್ ಜೋಶಿ ಅವರಿಂದ ಆಗಿರುವ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಅವರ ಪಾತ್ರ ಏನೂ ಇಲ್ಲ!

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆಂದು ಗೋಪಾಲ್ ಜೋಶಿ ವಿರುದ್ಧ ಎಫ್ ಐಆರ್ ದಾಖಲಿಸಿರುವ ಸ್ವತಃ ದುರುದಾರೆಯೇ ನೀಡಿದ ಸ್ಪಷ್ಟನೆಯಿದು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೂರುದಾರೆ ಸುನೀತಾ ಚೌಹಾಣ್, ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ವಿನಾಕಾರಣ ಎಳೆದು ತರಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಪಾಪ ಪ್ರಲ್ಹಾದ ಜೋಶಿ ಅವರ ಪಾತ್ರ ಇದರಲ್ಲಿ ಏನೂ ಇಲ್ಲ. ಅವರು ತುಂಬಾ ಒಳ್ಳೆಯವರು. ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇವರು ಎಂದು ಸುನೀತಾ ಚವ್ಹಾಣ ಸ್ಪಷ್ಟಪಡಿಸಿದರು.

ಪ್ರಲ್ಹಾದ ಜೋಶಿ ಅವರನ್ನು ನಾನು ಭೇಟಿ ಮಾಡಬೇಕಿತ್ತು. ಆದರೆ, ಅದಕ್ಕೆ ಇವರು ಬಿಡಲಿಲ್ಲ. ಈ ವಂಚನೆ ಪ್ರಕರಣದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರದ್ದಾಗಲಿ, ದೇವಾನಂದ ಚವ್ಹಾಣ ಅವರದ್ದಾಗಲಿ ಯಾವ ಪಾತ್ರವೂ ಇಲ್ಲವೆಂದು ಹೇಳಿದರು.

ಅಮಿತ್ ಶಾರನ್ನು ಎಳೆದು ತರುವುದು ಸರಿ ಕಾಣುವುದಿಲ್ಲ: ತಾವು ದಾಖಲಿಸಿರುವ ಈ ಪ್ರಕರಣದಲ್ಲಿ ಮಾದ್ಯಮಗಳು ಅಮಿತ್ ಶಾ ಮತ್ತು ಪ್ರಲ್ಹಾದ ಜೋಶಿ ಅವರನ್ನು ಎಳೆದು ತರುವುದು ನನಗೆ ಸರಿ ಕಾಣುವುದಿಲ್ಲ ಎಂದು ಸುನೀತಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

25 ಲಕ್ಷ ಅಷ್ಟೇ ಕೊಟ್ಟಿದ್ದೇನೆ: ಬಿಜೆಪಿ ಟಿಕೆಟ್ ಗಾಗಿ ಗೋಪಾಲ್ ಜೋಶಿ ಅವರಿಗೆ ನಾನು ಕೊಟ್ಟಿರುವುದು 25 ಲಕ್ಷ ಮಾತ್ರ. 2 ಕೋಟಿ ಎಲ್ಲಾ ಸುಳ್ಳು. 2 ಕೋಟಿ ಅಂತೆಲ್ಲಾ ಹೇಳುತ್ತಾರಷ್ಟೇ! ಎಂದು ಸ್ವತಃ ದುರುದಾರೆ ಸುನೀತಾ ಅವರೇ ಮಧ್ಯಮಗಳೆದುರು ಸ್ಪಷ್ಟಪಡಿಸಿದರು.

ಟಿಕೆಟ್ ಸಿಗದಿದ್ದಾಗ ಕೊಟ್ಟ ಹಣ ವಾಪಸ್ ನೀಡಿರಲಿಲ್ಲ. ಹೀಗಾಗಿ ಅನಿವಾರ್ಯವಾಗಿ ದೂರು ಕೊಟ್ಟಿದ್ದೇನೆ. ಆದರೆ, ಇದರಲ್ಲಿ ಬಿಜೆಪಿ ಹೈಕಮಾಂಡ್ ಹೆಸರನ್ನ ವಿನಾಕಾರಣ ದುರ್ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಸುನೀತಾ ಚವ್ಹಾಣ ತೀವ್ರ ಬೇಸರ ಹೊರ ಹಾಕಿದರು. ಗೋಪಾಲ್ ಜೋಶಿ ಹೊರತಾಗಿ ಪ್ರಲ್ಹಾದ ಜೋಶಿ, ಅಮಿತ್ ಶಾ ಸೇರಿದಂತೆ ಬಿಜೆಪಿ ಹೈಕಮಾಂಡ್ ಅನ್ನು ಇದಕ್ಕೆ ತಳುಕು ಹಾಕಬೇಡಿ ಎಂದು ಮಾದ್ಯಮದವರಲ್ಲಿ ಮನವಿ ಮಾಡಿದರು.

ನಾನು ನೇರವಾಗಿ ಗೋಪಾಲ್ ಜೋಶಿ ಅವರಿಗೆ ದುಡ್ಡು ಕೊಟ್ಟಿದ್ದೇನೆ. ಹಣ ವಾಪಸ್ ಕೊಟ್ಟಿದ್ದರೆ ಇಷ್ಟೆಲ್ಲ ಆಗುತ್ತಿರಲಿಲ್ಲ. ಪೊಲೀಸ್ ಠಾಣೆ ಮೆಟ್ಟಿಲೇರುತ್ತಿರಲಿಲ್ಲ ಎಂದು ಸುನೀತಾ ಚೌವ್ಹಾಣ್ ಪ್ರತಿಕ್ರಿಯಿಸಿದರು.

ಗೋಪಾಲ್ ಜೋಶಿ ಪ್ರಕರಣದ ದೂರುದಾರೆ ಸುನೀತಾ ಚವ್ಹಾಣ ಸ್ಪಷ್ಟನೆ

ಹುಬ್ಬಳ್ಳಿ: ಗೋಪಾಲ್ ಜೋಶಿ ಅವರಿಂದ ಆಗಿರುವ ವಂಚನೆ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಅವರ ಪಾತ್ರ ಏನೂ ಇಲ್ಲ!

ಬಿಜೆಪಿ ಟಿಕೆಟ್ ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆಂದು ಗೋಪಾಲ್ ಜೋಶಿ ವಿರುದ್ಧ ಎಫ್ ಐಆರ್ ದಾಖಲಿಸಿರುವ ಸ್ವತಃ ದುರುದಾರೆಯೇ ನೀಡಿದ ಸ್ಪಷ್ಟನೆಯಿದು.

ಹುಬ್ಬಳ್ಳಿಯಲ್ಲಿ ಇಂದು ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ದೂರುದಾರೆ ಸುನೀತಾ ಚೌಹಾಣ್, ಈ ಪ್ರಕರಣದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಅವರನ್ನು ವಿನಾಕಾರಣ ಎಳೆದು ತರಲಾಗುತ್ತಿದೆ ಎಂದು ಆಕ್ಷೇಪಿಸಿದರು.

ಪಾಪ ಪ್ರಲ್ಹಾದ ಜೋಶಿ ಅವರ ಪಾತ್ರ ಇದರಲ್ಲಿ ಏನೂ ಇಲ್ಲ. ಅವರು ತುಂಬಾ ಒಳ್ಳೆಯವರು. ಅವರ ಹೆಸರನ್ನು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಇವರು ಎಂದು ಸುನೀತಾ ಚವ್ಹಾಣ ಸ್ಪಷ್ಟಪಡಿಸಿದರು.

ಪ್ರಲ್ಹಾದ ಜೋಶಿ ಅವರನ್ನು ನಾನು ಭೇಟಿ ಮಾಡಬೇಕಿತ್ತು. ಆದರೆ, ಅದಕ್ಕೆ ಇವರು ಬಿಡಲಿಲ್ಲ. ಈ ವಂಚನೆ ಪ್ರಕರಣದಲ್ಲಿ ಸಚಿವ ಪ್ರಲ್ಹಾದ ಜೋಶಿ ಅವರದ್ದಾಗಲಿ, ದೇವಾನಂದ ಚವ್ಹಾಣ ಅವರದ್ದಾಗಲಿ ಯಾವ ಪಾತ್ರವೂ ಇಲ್ಲವೆಂದು ಹೇಳಿದರು.

*ಅಮಿತ್ ಶಾರನ್ನು ಎಳೆದು ತರುವುದು ಸರಿ ಕಾಣುವುದಿಲ್ಲ:* ತಾವು ದಾಖಲಿಸಿರುವ ಈ ಪ್ರಕರಣದಲ್ಲಿ ಮಾದ್ಯಮಗಳು ಅಮಿತ್ ಶಾ ಮತ್ತು ಪ್ರಲ್ಹಾದ ಜೋಶಿ ಅವರನ್ನು ಎಳೆದು ತರುವುದು ನನಗೆ ಸರಿ ಕಾಣುವುದಿಲ್ಲ ಎಂದು ಸುನೀತಾ ಅವರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

*25 ಲಕ್ಷ ಅಷ್ಟೇ ಕೊಟ್ಟಿದ್ದೇನೆ:* ಬಿಜೆಪಿ ಟಿಕೆಟ್ ಗಾಗಿ ಗೋಪಾಲ್ ಜೋಶಿ ಅವರಿಗೆ ನಾನು ಕೊಟ್ಟಿರುವುದು 25 ಲಕ್ಷ ಮಾತ್ರ. 2 ಕೋಟಿ ಎಲ್ಲಾ ಸುಳ್ಳು. 2 ಕೋಟಿ ಅಂತೆಲ್ಲಾ ಹೇಳುತ್ತಾರಷ್ಟೇ! ಎಂದು ಸ್ವತಃ ದುರುದಾರೆ ಸುನೀತಾ ಅವರೇ ಮಧ್ಯಮಗಳೆದುರು ಸ್ಪಷ್ಟಪಡಿಸಿದರು.

Tags :