ಪಾರಿವಾಳ ದ್ವೀಪಕ್ಕೆ ಡಿ.ಕೆ.ಶಿವಕುಮಾರ್ ಭೇಟಿ
12:53 PM Nov 22, 2024 IST
|
Samyukta Karnataka
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಕರಾವಳಿ ಜಿಲ್ಲೆಗಳ ಪ್ರವಾಸದಲ್ಲಿದ್ದು, ಪ್ರಮುಖ ದೇವಸ್ಥಾನಗಳಿಗೆ ತಮ್ಮ ಪತ್ನಿ ಜೊತೆಗೆ ತೆರಳಿ ದೇವರ ದರ್ಶನ ಪಡೆದಿದ್ದಾರೆ.
ಈ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ಚಿತ್ರಗಳನ್ನು ಹಂಚಿಕೊಂಡಿದ್ದು ಮುರುಡೇಶ್ವರದ ಸಮೀಪ ಇರುವ ನೇತ್ರಾಣಿ ದ್ವೀಪಕ್ಕೆ ಇಂದು ಪತ್ನಿ ಉಷಾ ಹಾಗೂ ಮೀನುಗಾರಿಕಾ ಸಚಿವರಾದ ಮಂಕಾಳ ಎಸ್.ವೈದ್ಯ ಅವರೊಂದಿಗೆ ಭೇಟಿ ನೀಡಿದ್ದಾರೆ. ನಿಸರ್ಗಕ್ಕೆ ಹತ್ತಿರವಾಗಿರುವ ಈ ಐಲ್ಯಾಂಡ್‌ಗೆ ಪಾರಿವಾಳ ದ್ವೀಪ ಎನ್ನುವ ಹೆಸರೂ ಕೂಡ ಇದೆ. ಕರ್ನಾಟಕದಲ್ಲಿ ಸ್ಕೂಬಾ ಡೈವಿಂಗ್‌ಗೆ ಅತ್ಯುತ್ತಮ ಸ್ಥಳವಾದ ನೇತ್ರಾಣಿ ದ್ವೀಪವು ಪಾರಿವಾಳಗಳಿಗೆ ಆಶ್ರಯ ತಾಣವೂ ಹೌದು. ಪ್ರಶಾಂತವಾದ ಈ ದ್ವೀಪ ಮನಸ್ಸಿಗೆ ಆಹ್ಲಾದಕರ ಅನುಭವ ನೀಡಿತು ಎಂದಿದ್ದಾರೆ.
Next Article