ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪಾಳು ಬಿದ್ದ ಬಹುವೆಚ್ಚದ ಪ್ರವಾಸಿ ಮಂದಿರ..

12:15 AM Mar 05, 2024 IST | Samyukta Karnataka

ಆರ್.ಎಸ್. ಹಿರೇಮಠ
ಕುಳಗೇರಿ ಕ್ರಾಸ್: ಕಾಮಗಾರಿ ಅಪೂರ್ಣವಾಗಿದ್ದನ್ನೂ ಲೆಕ್ಕಿಸದೆ ವಿಧಾನಸಭೆ ಚುನಾವಣೆಗೆ ಮೊದಲು ಅಂದರೆ ಎರಡು ವರ್ಷಗಳ ಹಿಂದೆ ಬಾದಾಮಿ ಕ್ಷೇತ್ರದ ಶಾಸಕರಾಗಿದ್ದ ಈಗಿನ ಮುಖ್ಯಮಂತ್ರಿ ಸಿದ್ದರಾಮಯ್ಯನವರು ತರಾತುರಿಯಲ್ಲಿ ಉದ್ಘಾಟಿಸಿದ್ದ ಕುಳಗೇರಿ ಕ್ರಾಸ್‌ನಲ್ಲಿರುವ ಬಹುವೆಚ್ಚದ ಪ್ರವಾಸಿ ಮಂದಿರ ಈಗ ಪಾಳು ಬಿದ್ದು ಧೂಳು ಸುರಿಯುತ್ತಿದೆ.
ಲೋಕೋಪಯೋಗಿ ಇಲಾಖೆಯಿಂದ ಸುಮಾರು ೧.೫ ಕೋಟಿ ರೂ. ವೆಚ್ಚದಲ್ಲಿ ಕಟ್ಟಿಲಾದ ಈ ಪ್ರವಾಸಿ ಮಂದಿರ ಸುಣ್ಣ-ಬಣ್ಣಗಳಿಂದ ಅಲಂಕಾರಗೊಂಡು ಹೊರ ನೋಟಕ್ಕೆ ಕಾಮಗಾರಿ ಪೂರ್ಣಗೊಂಡಂತೆ ಕಾಣುವ ಕಟ್ಟಡದಲ್ಲಿ ಮುಳ್ಳು, ಕಸ/ಕಡ್ಡಿ ತುಂಬಿಕೊಂಡಿದೆ.
ಉದ್ಘಾಟನೆಯಾಗಿ ಎರಡು ವರ್ಷ ಕಳೆದರೂ ಬಾಗಿಲು ತೆರೆಯದೆ ಪ್ರವಾಸಿ ಮಂದಿರದ ಕಟ್ಟಡ ಹಾಳಾಗಿ ಹೋಗುತ್ತಿದೆ. ಬೂತದ ಬಂಗಲೆಯಂತೆ ಕಾಣುತ್ತಿರುವ ಈ ಪ್ರವಾಸಿ ಮಂದಿರದಲ್ಲಿ ಕುಡುಕರ ಹಾವಳಿ ಹೆಚ್ಚಿದೆ. ಅಲ್ಲದೆ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಯಾಗಿದೆ.
ಇದ್ದೂ ಇಲ್ಲದಂತಾದ ಪ್ರವಾಸಿ ಮಂದಿರ
ಬ್ರಿಟಿಷರ ಕಾಲದ ಪ್ರವಾಸಿ ಮಂದಿರ ಹಳೆಯದಾಗಿದ್ದರ ಪರಿಣಾಮ ಸೋಲಾರ, ಫರ್ನೀಚರ್ ಹೀಗೆ ಸುಸಜ್ಜಿತ ನೂತನ ಕಟ್ಟಡ ನಿರ್ಮಿಸಲು ಒಂದೂವರೆ ಕೋಟಿ ರೂ. ಸರ್ಕಾರದ ಅನುದಾನ ಬಳಸಿ ನೂತನ ಪ್ರವಾಸಿ ಮಂದಿರ ನಿರ್ಮಿಸಲಾಗಿದೆ. ಆದರೆ ಅನುದಾನ ದುರ್ಬಳಕೆಯಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ಪಿಡಬ್ಲೂö್ಯಡಿ ಅಧಿಕಾರಿಗಳ ನಿರ್ಲಕ್ಷö್ಯದಿಂದ ಅಧಿಕಾರಿ, ಜನಪ್ರತಿನಿಧಿಗಳು ಮತ್ತು ಸಾರ್ವಜನಿಕರ ಅನುಕೂಲಕ್ಕಾಗಿ ನಿರ್ಮಿಸಿದ ಪ್ರವಾಸಿ ಮಂದಿರದ ಲಾಭ ಸಿಗುತ್ತಿಲ್ಲ.
ಕೋಟಿಗಟ್ಟಲೆ ಖರ್ಚು ಮಾಡಿ ನಿರ್ಮಿಸಿದ ಕಟ್ಟಡ ನೋಡಿದರೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಸರ್ಕಾರದ ದುಡ್ಡು ಹೇಗೆ ಪೋಲು ಆಗುತ್ತದೆ ಎಂಬುದು ಎದ್ದು ಕಾಣುತ್ತದೆ. ಜಿಲ್ಲೆಯ ಅಧಿಕಾರಿಗಳು ಸಹ ಮೌನವಾಗಿರುವುದು ಏಕೆ ಎಂಬುದು ಗೊತ್ತಾಗುತ್ತಿಲ್ಲ ಎನ್ನುತ್ತಿದ್ದಾರೆ ಪ್ರಜ್ಞಾವಂತರು.
ಅಧಿಕಾರಿಗಳ ಹಾರಿಕೆ ಉತ್ತರ
ಈ ಕುರಿತು ಪಿಡಬ್ಲ್ಯೂಡಿ ಅಧಿಕಾರಿಗಳನ್ನು ಕೇಳಿದರೆ ಸರ್ಕಾರದಲ್ಲಿ ದುಡ್ಡಿಲ್ಲ, ಗುತ್ತಿಗೆದಾರನಿಗೆ ಬಿಲ್ ಜಮಾ ಆಗಿಲ್ಲ, ಸ್ವಲ್ಪ ತಡೀರಿ ಎಂದು ಕೆಲವು ತಿಂಗಳಿಂದ ಹಾರಿಕೆ ಉತ್ತರ ಕೊಡುತ್ತ ಕಾಲದೂಡುತ್ತಿದ್ದಾರೆ.
ಯಾರದೋ ದುಡ್ಡು ಎಲ್ಲಮ್ಮನ ಜಾತ್ರೆ ಎನ್ನುವಂತಾಗಿದೆ. ಈ ಕಟ್ಟಡದ ಬಗ್ಗೆ ಬೇಜವಾಬ್ದಾರಿ ತೋರುತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಅಗತ್ಯವೆನಿಸಿದ್ದು ಇನ್ನಾದರೂ ಈ ಪ್ರವಾಸಿಮಂದಿರವನ್ನು ಸಾರ್ವಜನಿಕ ಸೇವೆಗೆ ಮುಕ್ತ ಮಾಡುವರೆ ಎಂದು ಜನತೆ ಕಾಯ್ದಿದ್ದಾರೆ.

ಕಟ್ಟಡ ಪೂರ್ಣ ಮುಗಿಸಿದ್ದೇನೆ ನನಗೆ ಸರ್ಕಾರದಿಂದ ಪೇಮೆಂಟ್(ಬಿಲ್) ಆಗಿಲ್ಲ. ಈಗಾಗಲೇ ಈ ಬಿಲ್ಡಿಂಗ್ ತಾತ್ಕಾಲಿಕ ವಿದ್ಯುತ್ ಬಿಲ್ ತಿಂಗಳಿಗೊಮ್ಮೆ ನಾನೇ ತುಂಬುತ್ತಿದ್ದೇನೆ. ಈ ತಿಂಗಳಲ್ಲಿ ಬಿಲ್ ಬರಬಹುದು ಕಾದು ನೋಡುವೆ.

- ಸುರೇಶ ತಿರಕನ್ನವರ, ಗುತ್ತಿಗೆದಾರ

ಗುತ್ತಿಗೆದಾರನಿಗೆ ಬಿಲ್ ಬಾಕಿ ಇದೆಯಂತೆ. ಪೂರ್ಣ ಪೇಮಂಟ್ ಆಗಿಲ್ವಂತೆ. ಅದಕ್ಕೆ ನೂತನ ಪ್ರವಾಸಿ ಮಂದಿರದ ಬೀಗ ತೆರೆದಿಲ್ಲ. ಸದ್ಯದಲ್ಲೇ ಕಾಮಗಾರಿ ಪೂರ್ಣಗೊಳಿಸುತ್ತೇವೆ.

- ಎಂ.ಆರ್.ಚಿತ್ತರಗಿ, ಸೆಕ್ಷೆನ್ ಆಫೀಸರ್

Next Article