For the best experience, open
https://m.samyuktakarnataka.in
on your mobile browser.

ಪಿಎಸ್‌‍ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ

11:38 AM Sep 12, 2024 IST | Samyukta Karnataka
ಪಿಎಸ್‌‍ಐ ನೇಮಕಾತಿ ಪರೀಕ್ಷೆ ಮುಂದೂಡಿಕೆ

ಬೆಂಗಳೂರು: ಇದೇ 22 ರಂದು ನಡೆಯಬೇಕಿದ್ದ ಪಿಎಸ್‌‍ಐ ನೇಮಕಾತಿ ಪರೀಕ್ಷೆಯನ್ನು ಸೆ.28ಕ್ಕೆ ರಾಜ್ಯಸರ್ಕಾರ ಮುಂದೂಡಿದೆ.
ಈ ಕುರಿತಂತೆ ನಗರದಲ್ಲಿ ಗೃಹಸಚಿವ ಡಾ.ಜಿ.ಪರಮೇಶ್ವರ್‌ ಮಾತನಾಡಿದ್ದು ಸೆ.22ರಂದು ವಿವಿಧ ಇಲಾಖೆಯ ಪರೀಕ್ಷೆಗಳು ನಡೆಯುವುದರಿಂದ ಪಿಎಸ್ಐ ನೇಮಕಾತಿ ಪರೀಕ್ಷೆ ಮುಂದೂಡುವಂತೆ ಅಭ್ಯರ್ಥಿಗಳು ಹಾಗೂ ಬಿಜೆಪಿ ನಾಯಕರು ಒತ್ತಾಯಿಸಿದ್ದರು. ಈ ಹಿನ್ನೆಲೆಯಲ್ಲಿ
ಸೆ.22ರಂದು ನಿಗದಿಯಾಗಿದ್ದ ಪಿಎಸ್‌ಐ ಪರೀಕ್ಷೆ ಮುಂದೂಡಲಾಗಿದೆ. ಸೆ.28ರಂದು ಪಿಎಸ್‌ಐ ಹುದ್ದೆ ನೇಮಕಾತಿ ಪರೀಕ್ಷೆ ನಡೆಯಲಿದೆ ಎಂದು ತಿಳಿಸಿದರು.

Tags :