ಪಿಜಿ ದಂತವೈದ್ಯಕೀಯ ಕೋರ್ಸ: ಆನ್‌ಲೈನ್ ನೋಂದಣಿ ದಿನಾಂಕ ವಿಸ್ತರಣೆ
08:47 PM Jul 10, 2024 IST | Samyukta Karnataka
ಬೆಂಗಳೂರು: ಪಿಜಿ ದಂತವೈದ್ಯಕೀಯ ಕೋರ್ಸುಗಳಿಗೆ ಆನ್‌ಲೈನ್ ಮೂಲಕ ನೋಂದಣಿ ದಿನಾಂಕವನ್ನು ವಿಸ್ತರಿಸಲಾಗಿದೆ ಎಂದು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.
ಪಿಜಿ ದಂತವೈದ್ಯಕೀಯ ಕೋರ್ಸುಗಳಿಗೆ ಆನ್‌ಲೈನ್ ಮೂಲಕ ನೋಂದಣಿ ಮಾಡಿಕೊಳ್ಳುವ ದಿನಾಂಕವನ್ನು 11-07-2024 ಮ.12.00 ರವರೆಗೆ ಹಾಗು ಶುಲ್ಕ ಪಾವತಿಸಲು ದಿನಾಂಕವನ್ನು 11-07-2024 ರ ಮಧ್ಯಾಹ್ನ 3.00 ರ ವರೆಗೆ ವಿಸ್ತರಿಸಲಾಗಿದೆ. ನೋಂದಣಿ ಮಾಡಿರುವ ಅಭ್ಯರ್ಥಿಗಳು ದಿನಾಂಕ 12-07-2024 ರ ಮಧ್ಯಾಹ್ನ 12.00 ರೊಳಗೆ ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕು, ದಾಖಲೆಗಳ ಪರಿಶೀಲನೆಯ ಹೆಚ್ಚಿನ ವಿವರಗಳಿಗಾಗಿ ಪ್ರಾಧಿಕಾರದ ವೆಬ್‌ಸೈಟ್ ನೋಡಲು ತಿಳಿಸಿದ್ದಾರೆ.