ಪುರಾಣ ಪ್ರಸಿದ್ಧ ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಮುಳುಗಡೆ
ಶ್ರೀರಂಗಪಟ್ಟಣ ; ಕೆ ಆರ್ ಎಸ್ ಜಲಾಶಯದಿಂದ ಬುಧವಾರ ಸಂಜೆ 1,70,000 ಕ್ಯೂಸೆಕ್ಸ್ ನೀರನ್ನು ಬಿಟ್ಟಿದ ಪರಿಣಾಮ ಶ್ರೀರಂಗಪಟ್ಟಣದ ಐತಿಹಾಸಿಕ ವಲ್ಲೆಸ್ಲಿ ಸೇತುವೆ ಮುಳುಗಡೆಗೊಂಡು ಸೇತುವೆ ಮೇಲೆ ಕಾವೇರಿ ನೀರು ಹರಿಯಿತು ಜೊತೆಗೆ ಪಶ್ಚಿಮ ವಾಹಿನಿ ಕೆ ಆರ್ ಎಸ್ ಗೆ ಹೋಗುವ ರಸ್ತೆ ಜಲಾವೃತ್ತಗೊಂಡು ರಸ್ತೆ ಸಂಚಾರ ಅಸ್ತವ್ಯಸ್ತಗೊಂಡಿತು,
ಇಂದು ನೀರಿನ ಪ್ರಮಾಣ ಕಡಿಮೆಗೊಂಡಿದ್ದು ಅಣೆಕಟ್ಟೆಯಿಂದ 1,50,000 ಕ್ಯೂಸೆಕ್ ನೀರನ್ನು ಕಾವೇರಿ ನದಿಗೆ ಬಿಡಲಾಗುತಿದೆ,
ಇನ್ನೂ ಬುಧವಾರ ನೀರಿನ ಮಟ್ಟ ಹೆಚ್ಚಾಗಿದ್ದರಿಂದ ವೆಲ್ಲೆಸ್ಲಿ ಸೇತುವೆಯ ತಡೆ ಗೋಡೆಗಳು ಕುಸಿದು ಹಾಗೂ ಡಾಂಬರ ರಸ್ತೆ ದುರಸ್ತಿಗೊಂಡು ಸಂಚಾರವನ್ನು ಈ ರಸ್ತೆಯಲ್ಲಿ ನಿರ್ಭಂಧಿಸಲಾಗಿದೆ, ಜೊತೆಗೆ ವೆಲ್ಲೆಸ್ಲಿ ಸೇತುವೆ ಹತ್ತಿರದ ಲೇಔಟ್ ಒಂದಕ್ಕೆ ಕಾವೇರಿ ನೀರು ನುಗ್ಗಿದ್ದು ಸಂಚರಿಸಲು ಜನರು ಮನೆಯಿಂದ ರಸ್ತೆಗೆ ತೆಪ್ಪದ ಮೊರೆ ಹೋದರು,
ನೀರಿನ ಪ್ರಮಾಣ ಹೆಚ್ಚಾದಲ್ಲಿ ಶ್ರೀರಂಗಪಟ್ಟಣದ ಸುತ್ತಮುತ್ತಲಿನ ಹಳ್ಳಕೊಳ್ಳ ತಗ್ಗು ಪ್ರದೇಶಗಳಲ್ಲಿ ನೀರು ತುಂಬಿಕೊಂಡು ಅಪಾರ ಆಸ್ತಿ ಪಾಸ್ತಿ ಹಾಗೂ ಬೆಳೆ ನಷ್ಟವಾಗುವ ಸಂಭವವಿದ್ದು ಸ್ಥಳೀಯರಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.