ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪುಸಿಕ್ಯಾಟ್ ಪುಸಿಕ್ಯಾಟ್ ತಿಂಡಿಬೇಕೆ

03:10 PM Oct 02, 2024 IST | Samyukta Karnataka

ವಿಶ್ವ ಪತ್ರಿಕೆಯಲ್ಲಿ ಸುದ್ದಿ ಓದಿ ನಗುತ್ತಿದ್ದ, ವಿಶಾಲು ಕಾಫಿಯನ್ನು ಮುಂದೆ ತಂದಿಟ್ಟು ಬಹಳ ಹೊತ್ತಾಗಿತ್ತು.
"ರೀ ಏನ್ ಆಗಿದೆ ನಿಮ್ಗೆ? ಪೇಪರ್ ಓದಿ ಒಳಗೊಳಗೇ ನಗ್ತೀರಲ್ಲ” ಎಂದು ರೇಗಿದಳು.
"ಮದುವೆ ಮುಗಿದ ಮೂರು ತಿಂಗಳಿಗೆ ವಾಲಗದವರು ಬಂದ್ರಂತೆ"
"ಅಷ್ಟು ಲೇಟ್ ಆಗಿ ಬಂದ್ರೆ ಏನು ಪ್ರಯೋಜನ? ಅವರು ಬರೋ ಹೊತ್ಗೆ ಮದುಮಗಳಿಗೆ ಮೂರು ತಿಂಗಳಾಗಿರುತ್ತೆ" ಎಂದಳು.
"ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ಶುರು ಮಾಡಿ ಅಂತ ಈಗ ಇಷ್ಟು ಲೇಟಾಗಿ ಹೇಳ್ತಿದ್ದಾರೆ" ಎಂದ ವಿಶ್ವ.
"ನಿರ್ಧಾರ ಒಳ್ಳೇದು ತಾನೇ?" ಎಂದಳು ವಿಶಾಲು
"ಶೈಕ್ಷಣಿಕ ವರ್ಷ ಅರ್ಧ ಮುಗಿದ್ಮೇಲೆ ಈಗ ಮತ್ತೆ ೩೭೦ ಶಾಲೆಗಳಲ್ಲಿ ಇಂಗ್ಲೀಷ್ ಮೀಡಿಯಂ ರ‍್ತಿದ್ದಾರೆ, ಸೌತ್ ಇಂಡಿಯನ್ ಊಟ ಅರ್ಧ ತಿಂದ ಮೇಲೆ, ಸಾಕು ಅಲ್ಲಿಗೆ ಬಿಡಿ, ಕೈ ತೊಳ್ಕೊಂಡ್ ಬನ್ನಿ ನಾರ್ಥ್ ಇಂಡಿಯನ್ ಊಟ ರೆಡಿ ಇದೆ" ಅಂದಂತಾಯ್ತು.
"ಊಟ ಬೇರೆ ಪಾಠ ಬೇರೆ, ಎಲ್ಲರಿಗೂ ಬೇಕಾಗಿರೋದೇ ಇಂಗ್ಲೀಷ್ ಮೀಡಿಯಮ್ಮು” ಎಂದಳು ವಿಶಾಲು. ಆ ವೇಳೆಗೆ ನಾನು ಅಲ್ಲಿಗೆ ಹೋದೆ. ವಿಶ್ವನಿಗೆ ಖುಷಿಯಾಯ್ತು.
"ಬಾ ಗೆಳೆಯ ನಿನಗೊಂದು ಶುಭ ಸಮಾಚಾರ, ಇಂಗ್ಲೀಷ್ ಮೀಡಿಯಂಗೆ ಮಕ್ಕಳನ್ನ ಸೇರಿಸಬಹುದು ಅಂತ ನನ್ನ ಹೆಂಡ್ತಿ ವಿಶಾಲು ಪರ್ಮಿಷನ್ ಕೊಟ್ಟಿದ್ದಾಳೆ" ಎಂದ.
"ನಾನಲ್ಲ, ಸರ್ಕಾರ ಕೊಟ್ಟಿರೋದು" ಎಂದಳು ವಿಶಾಲು.
"ನಾನಂತೂ ಸ್ವಾಗತ ಮಾಡ್ತೀನಿ ವಿಶ್ವ” ಎಂದೆ.
"ನಮ್ಮ ಯಜಮಾನರಿಗೆ ನಗು ರ‍್ತಾ ಇದೆಯಂತೆ, ಲೂಸ್ ಥರ ನಗಬಾರದು ಅಂತ ಅವರಿಗೆ ಬುದ್ಧಿ ಹೇಳಿ" ಎಂದಳು.
"ವಿಶ್ವ ನಗೋ ಟೈಮಲ್ಲಿ ನಗಬೇಕು, ಒಳ್ಳೇ ವಿಷಯ ಇದ್ದಾಗ ಗಂಭೀರವಾಗಿರಬೇಕು, ಮುಂಚೆ ಕಾಫಿ ಕುಡಿ" ಎಂದೆ.
"ನಮ್ಮ ಯಜಮಾನ್ರು ಕಾಫಿ ಲೋಟದಲ್ಲಿ ನೊಣ ಬೀಳೋವರೆಗೂ ಕುಡಿಯೋದಿಲ್ಲ”
"ಯಾವಾಗಿನಿಂದ?"
"ಚೈನಾಗೆ ಟೂರ್ ಹೋಗಿ ಬಂದಾಗಿನಿಂದ" ಎಂದಳು ವಿಶಾಲು, ವಿಶ್ವ ಗಡಿಬಿಡಿಯಿಂದ ಕಾಫಿ ಕುಡಿದು ಮುಗಿಸಿದ.
"ಲೇಟ್ ಆಗಿ ಶುರು ಆಗೋದರಿಂದ ತೊಂದ್ರೆ ಅಂತೂ ಇದೆ. ದಿಢೀರ್ ಅಂತ ವರ್ಷದ ಮಧ್ಯದಲ್ಲಿ ಇವರು ಇಂಗ್ಲೀಷ್ ಮೀಡಿಯಂ ಶುರು ಮಾಡಿದರೆ, ಟೀರ‍್ಸ್ನ ಎಲ್ಲಿಂದ ರ‍್ತಾರೆ, ಪಠ್ಯಪುಸ್ತಕಗಳು ಎಲ್ಲಿವೆ? ಸಮಸ್ಯೆ ಅಲ್ವಾ?" ಎಂದ ವಿಶ್ವ.
"ರೀ ಹ್ಯಾಗೋ ಮ್ಯಾನೇಜ್ ಮಾಡ್ತರ‍್ರೀ, ಈಗಿನ್ನು ಒಂದನೇ ಕ್ಲಾಸ್ ಅಲ್ವಾ, ಏನೂ ತೊಂದ್ರೆ ಆಗಲ್ಲ, ಎಳೇ ಮಕ್ಕಳಿಗೆ ಇಂಗ್ಲೀಷ್ ಬುಕ್ ಯಾವುದು ಕನ್ನಡ ಬುಕ್ ಯಾವುದು ಗೊತ್ತಿರೊಲ್ಲ” ಎಂದು ವಿಶಾಲು ಹೇಳಿದಳು. ಆದರೆ ವಿಶ್ವ ಒಪ್ಪಲಿಲ್ಲ.
"ಮಾಸ್ತರುಗಳಿಗೆ ಕನ್‌ಫ್ಯೂಸ್ ಆಗುತ್ತೆ. ನಾಯಿ ಮರಿ, ನಾಯಿ ಮರಿ ತಿಂಡಿ ಬೇಕೇ ಹೇಳಿಕೊಡುವವರು ಪುಸಿಕ್ಯಾಟ್ ಪುಸಿಕ್ಯಾಟ್ ತಿಂಡಿ ಬೇಕೆ ಅಂತಾರೆ" ಎಂದು ವಿಶ್ವ ಪೇಚಾಡಿದ.
"ನಾಯಿ ಮರಿಗಿಂತ ಬೆಕ್ಕಿನ ಮರಿ ಚಿಕ್ಕದಿರುತ್ತೆ, ಹೇಳ್ಕೊಳ್ಳಿ ಬಿಡಿ" ಎಂದಳು ವಿಶಾಲು.
"ಇದು ಸೈಜಿನ ಪ್ರಶ್ನೆ ಅಲ್ಲ ವಿಶಾಲು, ವ್ಯವಸ್ಥೆಯ ಪ್ರಶ್ನೆ ಇದು, ಹೊಸದಾಗಿ ೩೭೩ ಇಂಗ್ಲೀಷ್ ಮೇಸ್ಟ್ರುಗಳನ್ನ ನಾವೆಲ್ಲಿಂದ ರ‍್ತೀವಿ, ಅವರಿಗೆ ಇಂಗ್ಲೀಷ್ ಗೊತ್ತಿದ್ರೆ ಸಾಲ್ದು, ಸ್ಪೋಕನ್ ಇಂಗ್ಲೀಷ್ ಗೊತ್ತಿರಬೇಕು" ಎಂದ.
"ಈ ಕಾಲ್ದಲ್ಲಿ ಎಲ್ಲರಿಗೂ ಇಂಗ್ಲೀಷ್ ಬರುತ್ತೆ ಹೆಂಗೋ ಹೇಳಿಕೊಡ್ತಾರೆ, ಈಗ ಮನೆಗಳಲ್ಲಿ ಅವರವರ ತಾಯಂದಿರು ಮಕ್ಕಳಿಗೆ ಹೇಳಿಕೊಡಲ್ವಾ? ಮಕ್ಕಳ ಸ್ಕೂಲ್ ಮನೇನಲ್ಲಿ ಅಲ್ವೇ ಅಂತ ಕೈಲಾಸಂ ಆವತ್ತೇ ಹೇಳಿದ್ರು” ವಿಶಾಲು ಉವಾಚ.
"ಮನೆಯಲ್ಲೇ ಅಮ್ಮ ಸರಿಯಾಗಿ ಹೇಳ್ಕೊಡೋದಿದ್ದಿದ್ರೆ ಶಾಲೆಗ್ಯಾಕ್ ಕಳಿಸ್ತಾ ಇದ್ವಿ ಮಕ್ಕಳನ್ನ? ಟೀಚಿಂಗ್ ಟೆಕ್ನಿಕ್ಸ್ ಗೊತ್ತಿರಬೇಕು, ಪ್ರೈಮರಿ ಶಾಲೆಯಲ್ಲಿ ಟೀಚಿಂಗ್ ಮುಂಚಿನ್ಹಗ್ ಇಲ್ಲ, ನಾವು ಓದುತ್ತಿದ್ದಾಗಲೇ ಬೇರೆ ರೀತಿ, ಈಗಿನ ಸಿಲಬಸ್ಸೇ ಬೇರೆ". ಎಂದು ವಿಶ್ವ ವಾದ ಮಾಡಿದ. ಒಂದು ದೃಷ್ಟಿಯಲ್ಲಿ ಅವನ ಮಾತು ಸರಿ ಅನ್ನಿಸ್ತು.
"ಲೋಕಲ್ಲಾಗಿ ಯಾರಾದ್ರೂ ಇಂಗ್ಲೀಷ್ ಮೇಷ್ಟುçಗಳು ಸಿಗ್ತಾರಾ ಅಂತ ನೋಡ್ತಾರೆ, ಟೆಂಪೊರೆರಿ ಆಗಿ ಅವ್ರನ್ನ ಸೇವೆಯಲ್ಲಿ ಬಳಸಿಕೊಳ್ಳುತ್ತಾರೆ" ಎಂದೆ. ವಿಶ್ವ ಅದಕ್ಕೂ ಕ್ಯಾತೆ ತೆಗೆದ.
"ಇಂಗ್ಲೀಷ್ ಮೀಡಿಯಂ ಶಾಲೆಗಳಲ್ಲಿ ಫೀಸ್ ದುಬಾರಿ, ಬೆಂಗಳೂರಿನಲ್ಲಿ ಎಲ್.ಕೆ.ಜಿ. ಸೀಟ್‌ಗೆ ಎಷ್ಟಿದೆ ಫೀಸು ಗೊತ್ತಾ? ಮೊನ್ನೆ ನನ್ನ ಸ್ನೇಹಿತರೊಬ್ಬರು ಪ್ರತಿಷ್ಠಿತ ಶಾಲೆಯೊಂದಕ್ಕೆ ಹೋಗಿ ಮಗನಿಗಾಗಿ ಎಲ್.ಕೆ.ಜಿ ಸೀಟ್ ಕೇಳಿದ್ರು, ಫೀಸ್ ಸ್ಟçಕ್ಚರ್ ಇದ್ದ ಚೀಟಿ ನೋಡಿದ ಕೂಡ್ಲೇ ಮಗುವಿನ ಅಪ್ಪ ಜ್ಞಾನ ತಪ್ಪಿ ಬಿದ್ದರಂತೆ, ಯಾರೋ ಬಂದು ನೀರನ್ನು ಚಿಮುಕಿಸಿ ಎಬ್ಬಿಸಿ, ಪ್ರಾಣ ಉಳಿಸಿ ಮನೆಗೆ ಕಳಿಸಿದರು"
"ಯಾಕೆ ಹಾಗಾಯ್ತು"
"ಯಾಕೆಂದ್ರೆ ಖಾಸಗಿ ಶಾಲೇಲಿ ಎಲ್.ಕೆ.ಜಿ.ಗೆ ೯ ಲಕ್ಷ ಫೀಸು ಅಂತ ಇತ್ತು".
"ಅದ್ರಲ್ಲಿ ಬಿಲ್ಡಿಂಗ್ ಫಂಡ್ಸ್ ಸೇರಿಕೊಳ್ಳುತ್ತೆ, ಕಂಪ್ಯೂಟರ್, ಲ್ಯಾಬು, ಸ್ಪೋರ್ಟ್ಸ್, ಆ್ಯನುಯಲ್ ಫಂಕ್ಷನ್ನು, ಲೈಬ್ರರಿ, ಯೂನಿಫಾರಮ್ಮು, ಬುಕ್ಸು ಇವೆಲ್ಲ ಸೇರಿಕೊಳ್ಳುತ್ತಲ್ಲ?" ಎಂದಳು ವಿಶಾಲು.
ಎಳೇ ಮಗೂಗೆ ಕಂಪ್ಯೂಟರ್ ಎಷ್ಟು ಮಾತ್ರ ಗೊತ್ತಿರುತ್ತೆ, ಅದಕ್ಕೆ ಮೌಸ್ ಯಾವುದು ರ‍್ಯಾಟ್ ಯಾವುದು ಅಂತ ಗೊತ್ತಿರಲ್ಲ ಎಂಬ ವಿಷಯ ಚರ್ಚೆಗೆ ಬಂತು.
"ಅಷ್ಟೊಂದು ದುಬಾರಿ ಹಣ ಖಾಸಗಿಯವರಿಗೆ ಕೊಡೋ ಬದಲು ಸರ್ಕಾರಿ ಶಾಲೆಯಲ್ಲಿ ಸಲೀಸಾಗಿ ಇಂಗ್ಲೀಷ್ ಹೇಳಿಕೊಟ್ರೆ ಬಡವರಿಗೆ ಸಹಾಯ ಆಗುತ್ತೆ" ಎಂದೆ. ವಿಶ್ವ ನನ್ನ ಮುಖ ನೋಡಿದ.
"ಹೌದು ವಿಶ್ವ, ಸರ್ಕಾರ ಒಳ್ಳೆ ನಿರ್ಧಾರ ತಗೊಂಡಿದೆ, ಯಾಕೆ ಅಂದ್ರೆ ಇವತ್ತು ಎಲ್ಲಾ ತಂದೆ ತಾಯಿಯಂದಿರು ತಮ್ಮ ಮಕ್ಕಳು ಇಂಗ್ಲೀಷ್ ಶಾಲೆ ಸೇರಬೇಕು ಅಂತ ಆಸೆ ಪಡ್ತಾರೆ, ಆದರೆ ಇಂಗ್ಲೀಷ್ ಶಾಲೆಗೆ ಕಟ್ಟಬೇಕಾದ ಹಣ ಅವರ ಹತ್ತಿರ ಇರೋದಿಲ್ಲ, ಸಾಲಗೀಲ ಮಾಡಿ ಸೇರಿಸಿಬಿಡ್ತಾರೆ, ಆಮೇಲೆ ಬೇಡ ಅವರ ಕಥೆ, ಮೂರು ಮೂರು ತಿಂಗಳಿಗೂ ಫೀಸ್ ಕಟ್ಟಬೇಕಲ್ಲ?" ಎಂದೆ.
"ನೀವೆಲ್ಲರೂ ಇಂಗ್ಲೀಷ್ ಮೀಡಿಯಂ ಪರವಾಗಿ ಇದ್ದೀರ, ಅಂದ್ಮೇಲೆ ಕನ್ನಡ ಉದ್ಧಾರ ಹೇಗೆ ಆಗಬೇಕು, ಕನ್ನಡ ಮೀಡಿಯಂ ಶಾಲೆಗಳನ್ನ ಉಳಿಸಿಕೊಳ್ಳಬೇಕು ಅಂತ ಸರ್ಕಾರ ಆಗಾಗ ಹೇಳ್ತಿರುತ್ತೆ" ಎಂದು ಹೊಸ ವರಸೆ ತೆಗೆದ ವಿಶ್ವ.
ನವೆಂಬರ್ ತಿಂಗಳು ಹತ್ತಿರ ಬರುತ್ತಿರುವಾಗಲೇ ಇಂಗ್ಲೀಷ್ ಮೀಡಿಯಂ ಶಾಲೆ ಯಾಕೆ ಶುರು ಮಾಡಿದ್ರು? ಇದನ್ನೇ ಜೂನ್ ತಿಂಗಳಲ್ಲೇ ಮಾಡಿದ್ದಿದ್ರೆ ಯಾರೂ ಕೇಳ್ತಾ ರ‍್ಲಿಲ್ಲ ಎಂದಕೊಂಡೆ.
"ನೋಡು ನವೆಂಬರ್ ತಿಂಗಳಿಗೂ ಇದಕ್ಕೂ ಸಂಬಂಧ ಇಲ್ಲ. ಕನ್ನಡ ಅಂತ ಒಂದು ಕಂಪಲ್ಸರಿ ಸಬ್ಜೆಕ್ಟ್ ಇದ್ದೇ ಇರುತ್ತ್ತೆ. ಅದರ ಜೊತೇಲಿ ಇಂಗ್ಲೀಷ್ ಕಲಿಸ್ತಾರೆ" ಎಂದೆ.
"ನೀವ್ ನೀವು ಏನ್ ಬೇಕಿದ್ರು ಮಾಡಿಕೊಳ್ಳಿ. ನಾಳೆ ನನಗೆ ಮಗು ಆದ್ರೆ ಅದನ್ನ ನಾನು ಸರ‍್ಸೋದು ಸರ್ಕಾರಿ ಕನ್ನಡ ಇಂಗ್ಲೀಷ್ ಶಾಲೆಗೇನೆ" ಎಂದು ವಿಶಾಲು ತೀರ್ಪನ್ನು ಕೊಟ್ಟಳು.

Next Article