ಪುಸ್ತಕ ಪ್ರಶಸ್ತಿಗಳಿಗಾಗಿ ಸಾಹಿತ್ಯ ಕೃತಿಗಳ ಆಹ್ವಾನ
ಹುಬ್ಬಳ್ಳಿ: ಹುಬ್ಬಳ್ಳಿಯ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ (ರಿ)ವತಿಯಿಂದ ಪ್ರತಿ ವರ್ಷದಂತೆ ಈ ವರ್ಷವೂ ಪ್ರಶಸ್ತಿಗೆ ಕನ್ನಡದ ವಿವಿಧ ಪ್ರಕಾರಗಳ ಕೃತಿಗಳನ್ನು ಆಹ್ವಾನಿಸಲಾಗಿದೆ.
ಹುಬ್ಬಳ್ಳಿಯ ಶ್ರೀಮತಿ ಗಂಗಮ್ಮ ಸೋಮಪ್ಪ ಬೊಮ್ಮಾಯಿ ಪ್ರತಿಷ್ಠಾನ ಕಳೆದ ಕೆಲವು ವರ್ಷಗಳಿಂದ ಕನ್ನಡದ ಶ್ರೇಷ್ಠ ಸಾಹಿತ್ಯ ಕೃತಿಗಳಿಗೆ ಬಹುಮಾನ ನೀಡುತ್ತಾ ಬಂದಿದ್ದು, ಜಾನಪದಕ್ಕೆ ಸಂಬಂಧಿಸಿದ ಕೃತಿಗೆ ಜಾನಪದ ಸಿರಿ ಪ್ರಶಸ್ತಿ, ಮಹಿಳೆಯರು ರಚಿಸಿದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗೆ ಅಕ್ಕ ಪ್ರಶಸ್ತಿ , 18 ವರ್ಷದೊಳಗಿನ ಮಕ್ಕಳು ರಚಿಸಿದ ಯಾವುದೇ ಪ್ರಕಾರದ ಸಾಹಿತ್ಯ ಕೃತಿಗೆ ಅರಳುಮೊಗ್ಗು ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದೆ.
ಪ್ರತಿಯೊಂದು ಪ್ರಶಸ್ತಿ 25000 ರೂಪಾಯಿ ನಗದು ಮತ್ತು ಪ್ರಶಸ್ತಿ ಪತ್ರವನ್ನೊಳಗೊಂಡಿರುತ್ತದೆ. ಜನವರಿ 2023 ರಿಂದ ಡಿಸೆಂಬರ 2024 ರ ವರೆಗೆ ಪ್ರಥಮ ಬಾರಿಗೆ ಮುದ್ರಣವಾದ ಮೇಲ್ಕಾಣಿಸಿದ ಪ್ರಕಾರದ ಕೃತಿಗಳನ್ನು ರಚಿಸಿದ ಲೇಖಕರು ಎರಡು ಪ್ರತಿಗಳನ್ನು 2024 ರ ಡಿಸೆಂಬರ 25 ರ ಒಳಗೆ ಸಂಚಾಲಕರಾದ ಚಂದ್ರಶೇಖರ ವಸ್ತ್ರದ ಬೆಳಗು ಆನಂದಾಶ್ರಮ ರಸ್ತೆ ಪಂಚಾಕ್ಷರಿ ನಗರ 5ನೆಯ ಎ ಕ್ರಾಸ್ ಗದಗ 582101 ಹಾಗೂ ಮೊಬೈಲ್ ಸಂಖ್ಯೆ 9448677434 ಈ ವಿಳಾಸಕ್ಕೆ ಕಳುಹಿಸಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.