ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಕೆಶಿ ಕೈವಾಡವಿಲ್ಲ
05:33 PM May 02, 2024 IST
|
Samyukta Karnataka
ಬಸವನಬಾಗೇವಾಡಿ: ಸಂಸದ ಪ್ರಜ್ವಲ ರೇವಣ್ಣ ಪೆನ್‌ಡ್ರೈವ್ ಪ್ರಕರಣದಲ್ಲಿ ಡಿಸಿಎಂ ಡಿ.ಕೆ. ಶಿವಕುಮಾರ ಅವರ ಯಾವುದೇ ತರಹದ ಕೈವಾಡವಿಲ್ಲ ರಾಜ್ಯದಲ್ಲಿ ಏನಾದರೂ ಪ್ರಕರಣಗಳಾದರೆ ಅದಕ್ಕೆ ವಿರೋಧ ಪಕ್ಷದವರು ಬೊಟ್ಟು ಮಾಡುವುದು ಡಿಕೆಶಿ ಅವರ ಮೇಲೆಯೇ ಆದರೆ ಅವರು ಅಂಥಹ ಕೆಲಸ ಮಾಡುವವರಲ್ಲ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹೇಳಿದರು.
ತಾಲೂಕಿನ ಮುತ್ತಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಹಿಂದೆಯು ಹಲವಾರು ರಾಜ್ಯದಲ್ಲಿ ನಡೆದ ಪ್ರಕರಣಗಳಲ್ಲಿ ಡಿಕೆಶಿ ಅವರ ಮೇಲೆ ಆರೋಪ ಮಾಡಿದ್ದರು. ಆದರೆ ಅವರು ಅಂಥಹ ಕೆಲಸ ಮಾಡದೆಯೇ ನೇರವಾಗಿಯೇ ಹೋರಾಟ ನಡೆಸುವ ವ್ಯಕ್ತಿತ್ವ ಹೊಂದಿದ್ದಾರೆ ಎಂದು ಡಿಕೆಶಿ ಅವರನ್ನು ಸಮರ್ಥಿಸಿಕೊಂಡರು.
ರಾಜ್ಯ ಸರ್ಕಾರ ಈಗಾಗಲೇ ಎಸ್ಐಟಿ ತನಿಖೆ ನಡೆಸುತ್ತಿದೆ ಪ್ರಜ್ವಲ ರೇವಣ್ಣನವರು ಆರೋಪಿ ಎಂದು ಸಾಬೀತಾದರೆ ಅವರಿಗೆ ತಕ್ಕ ಶಿಕ್ಷೆಯಾಗುತ್ತದೆ. ಆದರೆ ಈ ವಿಷಯವಾಗಿ ಬಿಜೆಪಿಯವರು ಮೌನ ವಹಿಸಿದ್ದಾರೆ ಎಂದು ದೂರಿದರು.
Next Article