For the best experience, open
https://m.samyuktakarnataka.in
on your mobile browser.

ಪೆನ್ ಡ್ರೈವ್ ಪ್ರಕರಣ: ತಪ್ಪುಮಾಡಿದವರು ಶಿಕ್ಷೆ ಅನುಭವಿಸುತ್ತಾರೆ

11:37 AM Apr 29, 2024 IST | Samyukta Karnataka
ಪೆನ್ ಡ್ರೈವ್ ಪ್ರಕರಣ  ತಪ್ಪುಮಾಡಿದವರು ಶಿಕ್ಷೆ ಅನುಭವಿಸುತ್ತಾರೆ

ಶಿವಮೊಗ್ಗ: ಹಾಸನ ಪೆನ್​ಡ್ರೈವ್​ ಪ್ರಕರಣಕ್ಕೆ ಸಂಬಂಧಿಸಿದಂತೆ ತಪ್ಪು ಮಾಡಿದವರ ವಿರುದ್ದ ಪಕ್ಷದಿಂದಲೂ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಜೆಡಿಎಸ್​ ರಾಜ್ಯಾಧ್ಯಕ್ಷ ಹೆಚ್​.ಡಿ ಕುಮಾರಸ್ವಾಮಿ ತಿಳಿಸಿದ್ದಾರೆ.

ನಗರದಲ್ಲಿ ಮಾತನಾಡಿದ ಅವರು, ಈ ಬಗ್ಗೆ ತನಿಖೆ ನಡೆಸಲು ಎಸ್ಐಟಿ ರಚನೆ ಮಾಡಲಾಗಿದೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗುತ್ತದೆ. ಆದರೆ ಇದರಲ್ಲಿ ಕುಟುಂಬವನ್ನು ಎಳೆದು ತರುವುದು ಸರಿಯಲ್ಲ. ವ್ಯಕ್ತಿ ಬಗ್ಗೆ ಚರ್ಚಿಸಬೇಕು. ಇದರಲ್ಲಿ ದೇವೇಗೌಡರು ಮತ್ತು ಕುಮಾರಸ್ವಾಮಿ ಹೆಸರು ತರುವುದು ಸೂಕ್ತವಲ್ಲ. ತಪ್ಪು ಮಾಡಿದ ವ್ಯಕ್ತಿಯನ್ನು ನಾವು ವಹಿಸಿಕೊಳ್ಳುತ್ತಿಲ್ಲ. ಎಸ್ಐಟಿ ರಚನೆಯಾಗಿದೆ ಅವರು ತನಿಖೆ ನಡೆಸಿ ವರದಿ ನೀಡುತ್ತಾರೆ. ತಪ್ಪು ಮಾಡಿದವರು ಶಿಕ್ಷೆ ಅನುಭವಿಸುತ್ತಾರೆ. ಇಂತಹ ವಿಷಯಗಳು ನನಗೊಬ್ಬನಿಗೆ ಅಲ್ಲ, ಇಡೀ ಸಮಾಜಕ್ಕೆ ಮುಜಗರ ಆಗುತ್ತದೆ. ಎಸ್ಐಟಿ ತನಿಖೆಯು ಪಾರದರ್ಶಕವಾಗಿ ನಡೆಯಬೇಕು ಎಂದು ಮನವಿ ಮಾಡಿದರು.

ನಾನಾಗಲಿ ದೇವೇಗೌಡರಾಗಲಿ ಮಹಿಳೆಯರನ್ನು ಗೌರವದಿಂದ ಕಂಡಿದ್ದೇವೆ. ಚುನಾವಣೆ ಮುಂಚೆ ಈ ವಿಷಯ ತಿಳಿದಿದ್ದರೆ ಪಕ್ಷದಿಂದ ಕ್ರಮ ಕೈಗೊಳ್ಳಬಹುದಾಗಿತ್ತು. ಸದ್ಯ ತನಿಖೆ ವರದಿ ಬರಲಿ ಅದರ ಬಳಿಕ ಮತನಾಡುವೆ ಎಂದು ತಿಳಿಸಿದರು. ಉಳಿದ ಕಡೆ ಪ್ರಚಾರಕ್ಕೆ ಹೋಗುತ್ತಿದ್ದೇನೆ ಎಂದರು.