ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆ: 10 ಅಡಿಯ ನೀರಿನ‌ ಸಂಪ್​ಗೆ ಬಿದ್ದ ಮಗು ರಕ್ಷಿಸಿದ ಪೊಲೀಸ್

12:11 PM Mar 07, 2024 IST | Samyukta Karnataka

ಬೆಂಗಳೂರು: ಪೊಲೀಸ್ ಅಂದ್ರೆ ಭಯ ಅಲ್ಲ, ಭರವಸೆಯ ಜೀವ ರಕ್ಷಕ ಎಂಬುದು ಮತ್ತೊಮ್ಮೆ ಸಾಭಿತಾಗಿದೆ, ಆಟವಾಡುವಾಗ ಆಯತಪ್ಪಿ ನೀರಿನ ಸಂಪ್​ಗೆ ಬಿದ್ದ ಎರಡೂವರೆ ವರ್ಷದ ಮಗುವನ್ನು ಟ್ರಾಫಿಕ್ ಸಬ್‌ ಇನ್​ಸ್ಪೆಕ್ಟರ್ ರಕ್ಷಿಸಿದ್ದಾರೆ. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ, ಬಿಇಎಲ್‌ ಲೇ ಔಟ್​ನ ಮನೆಯೊಂದರಲ್ಲಿ ಆಟವಾಡುವಾಗ ಆಯತಪ್ಪಿ ಎರಡೂವರೆ ವರ್ಷದ ಮಗು 10 ಅಡಿಯ ನೀರಿನ‌ ಸಂಪ್​ಗೆ ಬಿದ್ದಿದೆ. ಭಯದಿಂದ ಚೀರಾಡಿದೆ. ಇದೇ ಸಂದರ್ಭದಲ್ಲಿ ದಾರಿಯಲ್ಲಿ ಹೋಗುತ್ತಿದ್ದ ಬ್ಯಾಟರಾಯನಪುರ ಸಂಚಾರ ಠಾಣೆಯ ಪಿಎಸ್ಐ ನಾಗರಾಜ್ ಅವರು ಚೀರಾಟದ ಶಬ್ದ ಗ್ರಹಿಸಿ ಸಂಪ್ ಬಳಿ ಬಂದಿದ್ದಾರೆ. ಮಗು ಬಿದ್ದಿರುವುದನ್ನು ಕಂಡು ಕೂಡಲೇ‌ ಸಮವಸ್ತ್ರದಲ್ಲೇ ನೀರಿನ ಸಂಪ್​ಗೆ ಇಳಿದು ಮಗುವಿನ ರಕ್ಷಣೆ ಮಾಡಿದ್ದಾರೆ. ಸರಿಯಾದ ಸಮಯಕ್ಕೆ ದೇವರಂತೆ ಬಂದು ಮಗುವಿನ ಜೀವ ಉಳಿಸಿದಕ್ಕೆ ಮಗುವಿನ ಪೋಷಕರು ಪಿಎಸ್ಐ ನಾಗರಾಜ್​​ಗೆ ಧನ್ಯವಾದ ಅರ್ಪಿಸಿದ್ದಾರೆ ಸಾಮಾಜಿಕ ಜಾಲತಾಣದಲ್ಲಿ ಇಲಾಖೆ ಹಾಗೂ ಸಿಬ್ಬಂದಿಗೆ ಪ್ರಶಂಶೆ ವ್ಯಕ್ತಪಡಿಸಿದ್ದಾರೆ.

Next Article