ಸುದ್ದಿಗಳು | ದೇಶರಾಜ್ಯವಿದೇಶ
ನಮ್ಮ ಜಿಲ್ಲೆ | ಚಿಕ್ಕಬಳ್ಳಾಪುರಚಾಮರಾಜನಗರಗದಗಕೋಲಾರಕೊಪ್ಪಳಕೊಡಗುಕಲಬುರಗಿಉತ್ತರ ಕನ್ನಡಉಡುಪಿಚಿಕ್ಕಮಗಳೂರುತುಮಕೂರುಚಿತ್ರದುರ್ಗಶಿವಮೊಗ್ಗಹಾಸನಹಾವೇರಿದಕ್ಷಿಣ ಕನ್ನಡಬೆಂಗಳೂರು ಗ್ರಾಮಾಂತರಬೆಂಗಳೂರುಬೀದರ್ಬಾಗಲಕೋಟೆಬಳ್ಳಾರಿಧಾರವಾಡಬೆಳಗಾವಿವಿಜಯಪುರವಿಜಯನಗರರಾಯಚೂರುರಾಮನಗರಯಾದಗಿರಿಮೈಸೂರುಮಂಡ್ಯ
ವೈವಿಧ್ಯ ಸಂಪದ | ಪದಬಂಧ
ತಾಜಾ ಸುದ್ದಿವಿಶೇಷ ಸುದ್ದಿಅಪರಾಧಸಿನಿ ಮಿಲ್ಸ್ಕೃಷಿ/ವಾಣಿಜ್ಯಕ್ರೀಡೆ

ಪ್ಯಾರಾಗ್ಲೈಡರ್ ಮೂಲಕ ಮತದಾನಕ್ಕೆ ಅಭಿಯಾನ

05:38 PM May 02, 2024 IST | Samyukta Karnataka

ಪಣಜಿ: ಗೋವಾದಲ್ಲಿ ಮೇ ೭ರಂದು ನಡೆಯಲಿರುವ ಲೋಕಸಭೆ ಚುನಾವಣೆಗೆ ಹೆಚ್ಚಿನ ಸಂಖ್ಯೆಯಲ್ಲಿ ಮತದಾರರನ್ನು ಸೆಳೆಯಲು ವಿವಿಧ ಚಟುವಟಿಕೆಗಳನ್ನು ಕೈಗೊಳ್ಳಲಾಗಿದೆ. ಸದ್ಯ ದಕ್ಷಿಣ ಗೋವಾದ ಕರಾವಳಿ ಪ್ರದೇಶಗಳಲ್ಲಿ ಅಭಿಯಾನವೊಂದು ಆರಂಭವಾಗಿದ್ದು, ಈ ಪ್ಯಾರಾಗ್ಲೈಡರ್‌ಗಳ ಮೂಲಕ ಆಕಾಶದಿಂದ ಕರಪತ್ರಗಳನ್ನು ಎಸೆಯಲಾಗುತ್ತಿದೆ. ಅದರ ಮೇಲೆ ಜನರು ತಮ್ಮ ಮತದಾನದ ಹಕ್ಕನ್ನು ಚಲಾಯಿಸಬೇಕು ಎಂಬ ಸಂದೇಶವನ್ನು ಬರೆಯಲಾಗಿದೆ.
ದಕ್ಷಿಣ ಗೋವಾದ ಮುಖ್ಯ ಚುನಾವಣಾಧಿಕಾರಿ ಅಶ್ವಿನ್ ಚಂದ್ರು ಈ ಮಾಹಿತಿ ನೀಡಿದ್ದು, ಈ ಹಿಂದೆ ಬೇರೆ ಕಡೆಗಳಲ್ಲೂ ಈ ಅಭಿಯಾನ ನಡೆಸಲಾಗಿತ್ತು. ನಾಲ್ಕು ದಿನಗಳ ಕಾಲ ದಕ್ಷಿಣ ಗೋವಾದಲ್ಲಿ ಕಡ್ಡಾಯ ಮತದಾನದ ಕುರಿತು ಪ್ರಚಾರ ಮಾಡಲು ಇದೇ ಏಜೆನ್ಸಿಯನ್ನು ನೇಮಿಸಿದ್ದೇವೆ. ಈ ಪ್ಯಾರಾಗ್ಲೈಡರ್‌ಗಳು ಆಕಾಶದಿಂದ ಜನನಿಬಿಡ ಪ್ರದೇಶಗಳಲ್ಲಿ ಕರಪತ್ರಗಳನ್ನು ಎಸೆಯಲಿವೆ. ಈ ಕರಪತ್ರದಲ್ಲಿ ಮತದಾರರು ಯಾವುದೇ ಒತ್ತಡಕ್ಕೆ ಮಣಿಯದೆ ಮುಕ್ತವಾಗಿ ಮತದಾನ ಮಾಡಬೇಕು ಎಂಬ ಸಂದೇಶವನ್ನು ಬರೆಯಲಾಗಿದೆ ಎಂದಿದ್ದಾರೆ. ಈ ಅಭಿಯಾನದ ಅಂಗವಾಗಿ ಮತದಾನದ ದಿನದಂದು ಜಿಲ್ಲಾಡಳಿತದಿಂದ ಗಿಡ ನೆಡುವ ಕಾರ್ಯಕ್ರಮ ನಡೆಯಲಿದೆ.

Next Article